2ನೇ ಟೆಸ್ಟ್ ಪಂದ್ಯಕ್ಕೆ ಸಂಭಾವ್ಯ ಭಾರತ ತಂಡ ಹೀಗಿದೆ

Posted By:
Subscribe to Oneindia Kannada

ಕೊಲಂಬೋ, ಅಗಸ್ಟ್ 02: ಶ್ರೀಲಂಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಗಾಲೆಯಲ್ಲಿ ಸುಲಭವಾಗಿ ಗೆದ್ದುಕೊಂಡಿದೆ.

ಸಿಂಹಳೀಸ್ ಸ್ಫೋರ್ಟ್ಸ್ ಕ್ಲಬ್ ಮೈದಾನದಲ್ಲಿ ಆಗಸ್ಟ್ 3ರಿಂದ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಬಹುತೇಕ ಮೊದಲ ಪಂದ್ಯದಲ್ಲಿ ಆಡಿದ ಆಟಗಾರರೇ ಇರುವ ಸಾಧ್ಯತೆ ಹೆಚ್ಚಿದೆ.

2015ರಲ್ಲಿ ಇಲ್ಲಿ ಆಡಿದ್ದಾಗ ಶ್ರೀಲಂಕಾ ವಿರುದ್ಧ ಭಾರತ 117ರನ್ ಗಳ ಜಯ ದಾಖಲಿಸಿತ್ತು.ಅಂದು ಚೇತೇಶ್ವರ್ ಪೂಜಾರಾ ಹಾಗೂ ಇಶಾಂತ್ ಶರ್ಮ ಉತ್ತಮ ಪ್ರದರ್ಶನ ನೀಡಿದ್ದರು.

ಈಗ 2ನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ಆಯ್ಕೆ ಮತ್ತೊಮ್ಮೆ ನಾಯಕ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿಗೆ ತಲೆನೋವಾಗಿದೆ. ಮುಖ್ಯವಾಗಿ ಆರಂಭಿಕ ಆಟಗಾರನ ಸ್ಥಾನ ಹಾಗೂ ಮತ್ತೊಬ್ಬ ಸ್ಪಿನ್ನರ್ ಆಯ್ಕೆ ಬಗ್ಗೆ ಗೊಂದಲವಿತ್ತು.

ಜ್ವರದಿಂದ ಚೇತರಿಸಿಕೊಂಡಿರುವ ಕೆಎಲ್ ರಾಹುಲ್ ಅವರು ತಂಡ ಸೇರುವುದು ಖಚಿತವಾಗಿದೆ. ಹಾರ್ದಿಕ್ ಪಾಂಡ್ಯ ಅವರು ಈ ಪಂದ್ಯದಲ್ಲೂ ಆಡಲಿದ್ದಾರೆ.

ಶಿಖರ್ ಧವನ್

ಶಿಖರ್ ಧವನ್

2016ರಲ್ಲಿ ತವರು ನೆಲದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಆಡಿದ್ದ ಧವನ್ ಅವರು ನಂತರ ಏಕದಿನ ಕ್ರಿಕೆಟ್ ತಂಡಕ್ಕೆ ಸೀಮಿತವಾಗಿದ್ದರು. ಆಸ್ಟ್ರೇಲಿಯಾ ವಿರುದ್ಧ 187ರನ್ ಬಾರಿಸಿ ಟೆಸ್ಟ್ ರಂಗಕ್ಕೆ ಎಂಟ್ರಿಕೊಟ್ಟ ಧವನ್ ಅವರು ನಂತರ ನಾಲ್ಕು ಶತಕಗಳನ್ನು ಮಾತ್ರ ಗಳಿಸಿದ್ದರು. ಗಾಲೆ ಟೆಸ್ಟ್ ನಲ್ಲಿ ಭರ್ಜರಿ 190ರನ್ ಚೆಚ್ಚಿ ಉತ್ತಮ ಲಯದಲ್ಲಿದ್ದು ತಂಡಕ್ಕೆ ಉತ್ತಮ ಆರಂಭ ಒದಗಿಸುವ ಉತ್ಸಾಹದಲ್ಲಿದ್ದಾರೆ.

ಕೆಎಲ್ ರಾಹುಲ್

ಕೆಎಲ್ ರಾಹುಲ್

ಆರಂಭಿಕ ಆಟಗಾರನಾಗಿ ಕೆಎಲ್ ರಾಹುಲ್ ಆರು ಕೊಹ್ಲಿಯ ಮೊದಲ ಆಯ್ಕೆಯಾಗಿದ್ದಾರೆ. ಜ್ವರ, ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಕೆಎಲ್ ರಾಹುಲ್ ಅವರು ತಂಡಕ್ಕೆ ಮರಳಿದ್ದು, ಹೇಗೆ ಆಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಅಭ್ಯಾಸ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದನ್ನು ಮರೆಯುವಂತಿಲ್ಲ.

ಚೇತೇಶ್ವರ್ ಪೂಜಾರಾ

ಚೇತೇಶ್ವರ್ ಪೂಜಾರಾ

ಧವನ್ ಅವರಿಗೆ ಉತ್ತಮ ಸಾಥ್ ನೀಡಿ ತಾವು ಕೂಡಾ ಶತಕ ಬಾರಿಸಿದ ಚೇತೇಶ್ವರ್ ಪೂಜಾರಾ, ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಗಾಲೆಯಲ್ಲಿ 12ನೇ ಶತಕ ಸಿಡಿಸಿದ ಪೂಜಾರಾ ಅವರು ಗುರುವಾರದಂದು ತಮ್ಮ 50ನೇ ಟೆಸ್ಟ್ ಪಂದ್ಯವನ್ನಾಡಲಿದ್ದಾರೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಅವರು ನಾಲ್ಕನೇ ಇನ್ನಿಂಗ್ಸ್ ನಲ್ಲೂ ಶತಕ ಸಿಡಿಸಿ ದಾಖಲೆ ಬರೆದರು. ನಾಯಕನಾಗಿ ತಂಡವನ್ನು ಹೇಗೆ ನಿಯಂತ್ರಿಸುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. ಸುಮಾರು 7 ಇನ್ನಿಂಗ್ಸ್ ಗಳ ನಂತರ ಗಾಲೆಯಲ್ಲಿ 103ರನ್ ಗಳಿಸಿದ ಕೊಹ್ಲಿ ಅವರು ಎಸ್ಎಸ್ ಸಿ ಮೈದಾನದಲ್ಲೂ ರನ್ ಮಳೆಗೆರೆಯುವ ಉತ್ಸಾಹದಲ್ಲಿದ್ದಾರೆ.

ಅಜಿಂಕ್ಯ ರಹಾನೆ

ಅಜಿಂಕ್ಯ ರಹಾನೆ

ಗಾಲೆ ಟೆಸ್ಟ್ ಪಂದ್ಯದಲ್ಲಿ ಪೂಜಾರಾಗೆ ಸಾಥ್ ನೀಡಿ ಅರ್ಧಶತಕ ಬಾರಿಸಿದ ಅಜಿಂಕ್ಯ ರಹಾನೆ ಅವರಿಗೆ ಈ ಪಂದ್ಯ ಮಹತ್ವದ್ದಾಗಿದೆ. ರೋಹಿತ್ ಶರ್ಮ ಬದಲಿಗೆ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಉತ್ತಮ ಪ್ರದರ್ಶನ ನೀಡುವುದು ಅನಿವಾರ್ಯವಾಗಿದೆ.

ಹಾರ್ದಿಕ್ ಪಾಂಡ್ಯ

ಹಾರ್ದಿಕ್ ಪಾಂಡ್ಯ

ಕೊಹ್ಲಿ ಅವರಿಂದ ಬೆನ್ ಸ್ಟೋಕ್ ಎಂದೆಲ್ಲ ಹೊಗಳಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ಅವರು ಬ್ಯಾಟಿಂಗ್ ನಲ್ಲಿ ಮಿಂಚುತ್ತಿದ್ದಾರೆ. ಆದರೆ, ಬೌಲಿಂಗ್ ಇನ್ನೂ ಸುಧಾರಿಸಬೇಕಿದೆ. ಹೆಚ್ಚುವರಿ ಸ್ಪಿನ್ನರ್ ಬದಲಿಗೆ ತಂಡಕ್ಕೆ ಆಯ್ಕೆಯಾಗುತ್ತಿದ್ದು, ಆಯ್ಕೆಯನ್ನು ಸಮರ್ಥಿಸಿಕೊಳ್ಳಬೇಕಿದೆ.

ವೃದ್ಧಿಮಾನ್ ಸಹಾ

ವೃದ್ಧಿಮಾನ್ ಸಹಾ

ಧೋನಿ ನಂತರ ಭರವಸೆಯ ವಿಕೆಟ್ ಕೀಪರ್ ಆಗಿರುವ ವೃದ್ಧಿಮಾನ್ ಸಹಾ ಅವರು ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸಿದ ಬಳಿಕ ಹೆಚ್ಚಿನ ಅವಕಾಶ ಪಡೆದಿಲ್ಲ. ಎರಡನೇ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ.

ಆರ್ ಅಶ್ವಿನ್

ಆರ್ ಅಶ್ವಿನ್

ಅನುಭವಿ ಸ್ಪಿನ್ನರ್ ಆಗಿ ಅಶ್ವಿನ್ ಅವರು ದಾಖಲೆಗಳನ್ನು ಮುರಿಯುತ್ತಿದ್ದಾರೆ. ಪಂದ್ಯ ಗೆಲ್ಲಿಸಿಕೊಡುವ ಪ್ರದರ್ಶನದ ನಿರೀಕ್ಷೆ ಹೆಚ್ಚಿದೆ.

ರವೀಂದ್ರ ಜಡೇಜ

ರವೀಂದ್ರ ಜಡೇಜ

ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಅವರು ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದು, ಮತ್ತೊಮ್ಮೆ ಶ್ರೀಲಂಕಾದ ಬ್ಯಾಟ್ಸ್ ಮನ್ ಗಳನ್ನು ಕಾಡಲು ಸಿದ್ಧರಾಗುತ್ತಿದ್ದಾರೆ.

ಉಮೇಶ್ ಯಾದವ್

ಉಮೇಶ್ ಯಾದವ್

ಗಾಲೆ ಟೆಸ್ಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ವೇಗಿ ಉಮೇಶ್ ಯಾದವ್ ಅವರು ಎರಡನೇ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಆಯ್ಕೆ ಅನುಮಾನವಾಗಿದೆ.

KL Rahul May Also Miss Champions Trophy | Oneindia Kannada
ಮೊಹಮ್ಮದ್ ಶಮಿ

ಮೊಹಮ್ಮದ್ ಶಮಿ

ತಂಡದ ಪ್ರಮುಖ ಬೌಲರ್ ಆಗಿರುವ ಶಮಿ ಅವರು ಪಿಚ್ ನ ಲಾಭ ಪಡೆದು ತಂಡಕ್ಕೆ ಆಸರೆಯಾಗಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Team India's confidence would be on a high after registering a convincing 304-run victory over Sri Lanka in the first Test at Galle. Virat Kohli and his boys would be hoping to repeat a similar performance in the second match starting Thursday (August 3) against Dinesh Chandimal-led side.
Please Wait while comments are loading...