ಗಾಲೆ ಟೆಸ್ಟ್ ː ಟೀಂ ಇಂಡಿಯಾದ ಸಂಭಾವ್ಯ ತಂಡ ಹೀಗಿದೆ

Posted By:
Subscribe to Oneindia Kannada

ಗಾಲೆ, ಜುಲೈ 25:ಶ್ರೀಲಂಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಜುಲೈ 26ರಂದು ಗಾಲೆಯಲ್ಲಿ ಆಡಲಿದೆ.

ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಶಿಖರ್ ಧವನ್ ಹಾಗೂ ಅಭಿನವ್ ಮುಕುಂದ್ ಅವರು ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಹಾರ್ದಿಕ್ ಪಾಂಡ್ಯಗೆ ಆಡುವ ಸಿಕ್ಕರೆ ಅಚ್ಚರಿಪಡಬೇಕಾಗಿಲ್ಲ ಎಂದು ನಾಯಕ ಕೊಹ್ಲಿಯೇ ಹೇಳಿದ್ದಾರೆ. ರೋಹಿತ್ ಬದಲಿಗೆ ರಹಾನೆಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಮಿಕ್ಕಂತೆ,ಮೊದಲ ಟೆಸ್ಟ್ ಪಂದ್ಯಕ್ಕೆ ಯಾರಿಗೆ ಆಡುವ ಅವಕಾಶ ಲಭ್ಯವಾಗಲಿದೆ ಎಂಬ ಕುತೂಹಲಕ್ಕೆ ಉತ್ತರ ಇಲ್ಲಿದೆ.

ಭಾರತದಿಂದ ಶ್ರೀಲಂಕಾ ಪ್ರವಾಸ ಪರಿಷ್ಕೃತ ವೇಳಾಪಟ್ಟಿ

ಕೌಂಟಿ ಕ್ರಿಕೆಟ್ ನಲ್ಲಿ ಆಡಿ ಉತ್ತಮ ಅನುಭವ ಪಡೆದುಕೊಂಡು ಬಂದಿರುವ ಚೇತೇಶ್ವರ್ ಪೂಜಾರ ಅವರನ್ನು ಕೂಡಾ ಆರಂಭಿಕ ಆಟಗಾರನಾಗಿ ಕಣಕ್ಕಿಳಿಸುವ ಸಾಧ್ಯತೆಯಿದೆ. ಧರ್ಮಶಾಲ ಟೆಸ್ಟ್ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆದರೆ, ಮಧ್ಯಮ ಕ್ರಮಾಂಕವನ್ನು ಬಲಗೊಳಿಸಲು ಪೂಜಾರ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಇಳಿಸಬಹುದು.

ಮಿಕ್ಕಂತೆ ಆರ್ ಅಶ್ವಿನ್ ಅವರಿಗೆ ಇದು 50ನೇ ಟೆಸ್ಟ್ ಪಂದ್ಯವಾಗಿದೆ. ಶ್ರೀಲಂಕಾ ತಂಡಕ್ಕೆ ಸ್ಪಿನ್ನರ್ ರಂಗನಾ ಹೆರಾತ್ ನಾಯಕರಾಗಿದ್ದು, ಪುಷ್ಪಕುಮಾರ ಅಚ್ಚರಿಯ ಆಯ್ಕೆಯಾಗಿದ್ದಾರೆ.

ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ

ಶ್ರೀಲಂಕಾ ತಂಡ: ರಂಗನಾ ಹೆರಾತ್ (ನಾಯಕ), ಉಪುಲ್ ತರಂಗ, ದಿಮುತ್ ಕರುಣರತ್ನೆ, ಕುಸಲ್ ಮೆಂಡಿಸ್, ಏಂಜೆಲೋ ಮ್ಯಾಥ್ಯೂಸ್, ಅಸೇಲಾ ಗುಣರತ್ನೆ, ನಿರೋಶನ್ ಡಿಕ್​ವೆಲ್ಲಾ (ವಿಕೆಟ್ ಕೀಪರ್),ಧನುಷ್ಕ ಗುಣತಿಲಕ, ದಿಲ್ ​ರುವಾನ್ ಪೆರೇರಾ, ಸುರಂಗಾ ಲಕ್ಮಲ್, ಧನಂಜಯ ಡಿ ಸಿಲ್ವಾ, ಲಹಿರು ಕುಮಾರ, ವಿಶ್ವ ಫೆರ್ನಾಂಡೋ, ನುವಾನ್ ಪ್ರದೀಪ್,ಮಾಲಿಂದ ಪುಷ್ಪಕುಮಾರ. ಭಾರತದ ಸಂಭಾವ್ಯ ತಂಡ ಮುಂದಿದೆ...

ಶಿಖರ್ ಧವನ್

ಶಿಖರ್ ಧವನ್

ಎಡಗೈ ಬ್ಯಾಟ್ಸ್ ಮನ್ ಶಿಖರ್ ಧವನ್ ಅವರಿಗೆ ಭರ್ಜರಿ ಅವಕಾಶ ಸಿಕ್ಕಿದೆ.2016ರಲ್ಲಿ ತವರು ನೆಲದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಆಡಿದ್ದ ಧವನ್ ಅವರು ನಂತರ ಏಕದಿನ ಕ್ರಿಕೆಟ್ ತಂಡಕ್ಕೆ ಸೀಮಿತವಾಗಿದ್ದರು. ಆಸ್ಟ್ರೇಲಿಯಾ ವಿರುದ್ಧ 187ರನ್ ಬಾರಿಸಿ ಟೆಸ್ಟ್ ರಂಗಕ್ಕೆ ಎಂಟ್ರಿಕೊಟ್ಟ ಧವನ್ ಅವರು ನಂತರ ನಾಲ್ಕು ಶತಕಗಳನ್ನು ಗಳಿಸಿದರು. ಆದರೆ, ನಂತರ ಉತ್ತಮ ಆಟ ಕಂಡು ಬಂದಿಲ್ಲ.

ಅಭಿನವ್ ಮುಕುಂದ್

ಅಭಿನವ್ ಮುಕುಂದ್

ತಮಿಳುನಾಡು ಮೂಲದ ಎಡಗೈ ಬ್ಯಾಟ್ಸ್ ಮನ್ ಅಭಿನವ್ ಮುಕುಂದ್ ಅವರು ತಮ್ಮ ಕಮ್ ಬ್ಯಾಕ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೊನ್ನೆ ಹಾಗೂ 16ರನ್ ಮಾತ್ರ ಗಳಿಸಿದ್ದರು. ಐದು ವರ್ಷ, ಆರು ತಿಂಗಳ ಬಳಿಕ ಟೀಂ ಇಂಡಿಯಾಕ್ಕೆ ಮರಳಿರುವ ಮುಕುಂದ್ ಗೆ ಇದು ಒಳ್ಳೆ ಅವಕಾಶ. ಆದರೆ, ಸ್ಥಾನ ಭದ್ರಪಡಿಸಿಕೊಳ್ಳಬೇಕಾದರೆ ಭರ್ಜರಿ ಪ್ರದರ್ಶನ ಅಗತ್ಯ.

ಚೇತೇಶ್ವರ್ ಪೂಜಾರಾ

ಚೇತೇಶ್ವರ್ ಪೂಜಾರಾ

ಟೆಸ್ಟ್ ತಂಡಕ್ಕೆ ಹೇಳಿ ಮಾಡಿಸಿದ ಶೈಲಿಯ ಬ್ಯಾಟಿಂಗ್ ಹೊಂದಿರುವ ಚೇತೇಶ್ವರ್ ಪೂಜಾರಾ ಅವರು ಉತ್ತಮ ಲಯದಲ್ಲಿದ್ದಾರೆ. ಕಳೆದ ಋತುವಿನಲ್ಲಿ ನಾಯಕ ವಿರಾಟ್ ಕೊಹ್ಲಿ ಹೊರತುಪಡಿಸಿದರೆ ಪೂಜಾರಾ ಅತ್ಯಧಿಕ ರನ್ ಗಳಿಕೆ ಮಾಡಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದರು. ಈಗ ಮಧ್ಯಮ ಕ್ರಮಾಂಕದಲ್ಲಿ ಆಧಾರಶಕ್ತಿ ಎನಿಸಿಕೊಳ್ಳಬೇಕಿದೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

ನಾಯಕ ವಿರಾಟ್ ಕೊಹ್ಲಿ ಕಳೆದ ಋತುವಿನಲ್ಲಿ ಸತತ ದ್ವಿಶತಕ, ಶತಕಗಳನ್ನು ಸಿಡಿಸಿ ಮಿಂಚಿದ್ದರು. ಆದರೆ, ಬಹುಕಾಲದ ನಂತರ ಮತ್ತೆ ಟೆಸ್ಟ್ ಮಾದರಿ ಬ್ಯಾಟಿಂಗಿಗೆ ಒಗ್ಗಿಕೊಳ್ಳಬೇಕಿದೆ. ಆದರೆ, ಕಳೆದ ಐದು ಇನ್ನಿಂಗ್ಸ್ ಗಳಲ್ಲಿ ಕೊಹ್ಲಿ ಅವರು 0,13,12,15 ಹಾಗೂ 6 ರನ್ ಗಳಿಸಿದ್ದು ಅಭಿಮಾನಿಗಳಿಗೆ ನಿರಾಶೆ ಮೂಡಿಸಿತ್ತು.

ಅಜಿಂಕ್ಯ ರಹಾನೆ

ಅಜಿಂಕ್ಯ ರಹಾನೆ

ಟೆಸ್ಟ್ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ರಹಾನೆ ಕೂಡಾ ಹೆಣಗುತ್ತಿದ್ದಾರೆ. ಈಗ 5ನೇ ಕ್ರಮಾಂಕದಲ್ಲಿ ಆಡಲು ಮುಂಬೈನ ಮತ್ತೊಬ್ಬ ಆಟಗಾರ ರೋಹಿತ್ ಶರ್ಮ ಜತೆ ಪೈಪೋಟಿ ನಡೆಸಬೇಕಿದೆ. ಶ್ರೀಲಂಕಾ ಪಿಚ್ ಗಳಲ್ಲಿ ರಹಾನೆ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ.

ವೃದ್ಧಿಮಾನ್ ಸಹಾ

ವೃದ್ಧಿಮಾನ್ ಸಹಾ

ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಗಿ ವೃದ್ಧಿಮಾನ್ ಸಹಾ ಅವರು ತಮ್ಮ ಆಯ್ಕೆಯನ್ನು ಈಗಾಗಲೇ ಸಮರ್ಥಿಸಿಕೊಂಡಿದ್ದಾರೆ. ರಾಂಚಿ ಟೆಸ್ಟ್ ನಲ್ಲಿ ಶತಕ ಬಾರಿಸಿದ್ದಲ್ಲದೆ, ಪೂಜಾರ ಜತೆ 199ರನ್ ಜೊತೆಯಾಟ ಸಾಧಿಸಿ ತಂಡದ ಮೊತ್ತವನ್ನು 603ಕ್ಕೇರಿಸಿದ್ದನ್ನು ಮರೆಯುವಂತಿಲ್ಲ. ಆರನೇ ಕ್ರಮಾಂಕದಲ್ಲಿ ಗಾಲೆ ಟೆಸ್ಟ್ ನಲ್ಲಿ ಕಣಕ್ಕಿಳಿಯಲಿದ್ದಾರೆ.

ಆರ್ ಅಶ್ವಿನ್

ಆರ್ ಅಶ್ವಿನ್

ಭಾರತದ ಪ್ರಮುಖ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಶ್ರೀಲಂಕಾ ವಿರುದ್ಧ ಕಾರ್ಯ ನಿರ್ವಹಣೆ ತೋರಿದ್ದಾರೆ. ಅಲ್ಲದೆ, ಬ್ಯಾಟಿಂಗ್ ನಲ್ಲೂ ತಮ್ಮ ಕೊಡುಗೆ ನೀಡಬಲ್ಲರು.

ರವೀಂದ್ರ ಜಡೇಜ

ರವೀಂದ್ರ ಜಡೇಜ

ಎಡಗೈ ಸ್ಪಿನ್ನರ್ ಕಮ್ ಬ್ಯಾಟ್ಸ್ ಮನ್ ಆಗಿ ರವೀಂದ್ರ ಜಡೇಜ ಅವರು ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ. ಕಳೆದ ಕೆಲ ಸರಣಿಗಳಲ್ಲಿ ಸ್ಪಿನ್ ಮೂಲಕ ಜಡೇಜ ಅವರು ತಂಡದ ಗೆಲುವಿಗೆ ತಮ್ಮದೇ ಆದ ಕೊಡುಗೆ ನೀಡಿದ್ದರು.

ಕುಲದೀಪ್ ಯಾದವ್

ಕುಲದೀಪ್ ಯಾದವ್

ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅವರು ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿರುವುದರಿಂದ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ.

ಭುವನೇಶ್ವರ್ ಕುಮಾರ್

ಭುವನೇಶ್ವರ್ ಕುಮಾರ್

ತಂಡದ ಪ್ರಮುಖ ವೇಗಿಯಾಗಿ ಭುವನೇಶ್ವರ್ ಕುಮಾರ್ ಅವರು ಬೌಲಿಂಗ್ ಪಡೆಯನ್ನು ಮುನ್ನಡೆಸಬೇಕಿದೆ.

ಮೊಹಮ್ಮದ್ ಶಮಿ

ಮೊಹಮ್ಮದ್ ಶಮಿ

ಟೀಂ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡಿರುವ ಮೊಹಮ್ಮದ್ ಶಮಿ ಅವರಿಗೆ ಶ್ರೀಲಂಕಾ ಸರಣಿ ಮಹತ್ವದ್ದಾಗಿದ್ದು, ಭುವನೇಶ್ವರ್ ಕುಮಾರ್ ಗೆ ಸಾಥ್ ನೀಡಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Number one ranked Team India are set to begin another Test season, this time with an overseas tour of Sri Lanka, starting from July 26 at Galle.
Please Wait while comments are loading...