ನಿಂತ ಮಳೆ, ಕೋಲ್ಕತಾದಲ್ಲಿ ಹರಿಯುವುದೇ ರನ್ ಹೊಳೆ?

Subscribe to Oneindia Kannada

ಕೋಲ್ಕತಾ, ಮಾರ್ಚ್.19: ಮಧ್ಯಾಹ್ನದಿಂದ ಸುರಿಯುತ್ತಿದ್ದ ಮಳೆ ಇದೀಗ ನಿಂತಿದ್ದು ಭಾರತ ಮತ್ತು ಪಾಕ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಬೆಳಗ್ಗೆಯಿಂದ ಆರಂಭವಾಗಿದ್ದ ಮಳೆ ಈಗ ಬಿಡುವು ನೀಡಿದ್ದು ಇನ್ನು ಕೆಲವೇ ಕ್ಷಣದಲ್ಲಿ ಪಂದ್ಯ ಆರಂಭವಾಗಿದೆ.

ಧರ್ಮಶಾಲಾದಲ್ಲಿ ನಡೆಯಬೇಕಿದ್ದ ವಿಶ್ವಕಪ್ ಟಿ-20 ಪಂದ್ಯ ಭದ್ರತೆಯ ಕಾರಣದಿಂದ ಕೋಲ್ಕತಾಗೆ ವರ್ಗಾವಣೆಯಾಗಿತ್ತು. ಮೈದಾನವನ್ನು ಸಿಬ್ಬಂದಿ ಟಾರ್ಪಲ್ ನಿಂದ ಮುಚ್ಚಿ ರಕ್ಷಣೆ ಮಾಡಿದ್ದರು. [ಭಾರತ-ಪಾಕ್ ಪಂದ್ಯಕ್ಕೂ ಮುನ್ನ ಇದೆಂಥ ಬೆತ್ತಲೆ ಆಫರ್!]

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ


rain

ಕೋಲ್ಕತಾದಲ್ಲಿ ಶನಿವಾರ ಬೆಳಗ್ಗೆ ಸಹ ಮಳೆ ಸುರಿದಿತ್ತು. ಸಂಪೂರ್ಣ ಪಂದ್ಯ ನಡೆಯುವ ಎಲ್ಲ ಸಾಧ್ಯತೆಗಳಿದ್ದು ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ. ಅತ್ತ ನವದೆಹಲಿಯಲ್ಲಿ ನಡೆಯುತ್ತಿದ್ದ ಇಂಡಿಯಾ-ಪಾಕ್ ವನಿತೆಯರ ಪಂದ್ಯಕ್ಕೂ ಮಳೆ ಅಡ್ಡಿಮಾಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
While supporters of both India and Pakistan were eagerly waiting for the high-voltage World Cup T20 clash at the Eden Gardens, the rain gods were hinting at damp day ahead. The city witnessed light rain since morning on Saturday and the Met office predicted thunderstorm in the evening. The news has left the fans worried.
Please Wait while comments are loading...