4ನೇ ಒಡಿಐ: ಕಿವೀಸ್ ವಿರುದ್ಧ ಭಾರತಕ್ಕೆ ಸೋಲು, ಸರಣಿ 2-2

Posted By:
Subscribe to Oneindia Kannada

ರಾಂಚಿ, ಅಕ್ಟೋಬರ್ 26: ಸತತವಾಗಿ ಮೂರು ಟಾಸ್ ಗೆದ್ದುಕೊಂಡಿದ್ದ ಏಕದಿನ ಕ್ರಿಕೆಟ್ ನಾಯಕ ಎಂಎಸ್ ಧೋನಿ ಅವರು ತಮ್ಮ ತವರು ನೆಲದಲ್ಲಿ ಟಾಸ್ ಸೋತಿದ್ದಲ್ಲದೆ, ಮ್ಯಾಚು ಸೋತಿದ್ದಾರೆ.

ನಾಲ್ಕನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಕಿವೀಸ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 260 ರನ್ ಗಳಿಸಿತ್ತು. ಕಿವೀಸ್ ನೀಡಿದ ಟಾರ್ಗೆಟ್ ಚೇಸ್ ಮಾಡಲು ಆಗದೆ ಭಾರತ 19 ರನ್ ಗಳಿಂದ ಪಂದ್ಯವನ್ನು ಕೈಚೆಲ್ಲಿದೆ. ಈ ಮೂಲಕ್ದ ಐದು ಪಂದ್ಯಗಳ ಸರಣಿ 2-2 ರಲ್ಲಿ ಸಮವಾಗಿದೆ.

New Zealand

ಭಾರತದ ಪರ ಅಜಿಂಕ್ಯ ರಹಾನೆ 57 ರನ್ ಗಳಿಸಿ ಗರಿಷ್ಠ ಮೊತ್ತ ಗಳಿಸಿದರೆ, ವಿರಾಟ್ ಕೊಹ್ಲಿ 45 ರನ್ ಗಳಿಸಿದರು. ತವರು ಮೈದಾನದಲ್ಲಿ ಆಡಿದ ಧೋನಿ 11 ರನ್ ಗಳಿಸಿ ಔಟಾಗಿ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದರು. ಕಿವೀಸ್ ಪರ ಟಿಮ್ ಸೌಥಿ 3/39 ಪಡೆದರೆ, ಜಿಮ್ಮಿ ನೀಶಮ್, ಟ್ರೆಂಟ್ ಬೌಲ್ಟ್ ತಲಾ 2, ಇಶ್ ಸೋಧಿ ಒಂದು ವಿಕೆಟ್ ಗಳಿಸಿದರು.

ಇದಕ್ಕೂ ಮುನ್ನ ಮಾರ್ಟಿನ್ ಗಪ್ಟಿಲ್ 72 ರನ್(12 ಬೌಂಡರಿ), ಟಾಮ್ ಲಾಥಮ್ 39 ರನ್ ನೆರವಿನಿಂದ ನ್ಯೂಜಿಲೆಂಡ್ ಉತ್ತಮ ಮೊತ್ತ ಕಲೆ ಹಾಕಿತು. 35 ಓವರ್ ಗಳಲ್ಲಿ 184/2 ಇದ್ದ ಕಿವೀಸ್ ತಂಡಕ್ಕೆ ಕೇನ್ ವಿಲಿಯಮ್ಸನ್ 41 ರನ್ ಗಳಿಸಿ ರನ್ ಗತಿ ಹೆಚ್ಚಿಸಿದರೂ ತಂಡ 260/7 ಗಳಿಸಲು ಮಾತ್ರ ಸಾಧ್ಯವಾಯಿತು.

ಟೀಂ ಇಂಡಿಯಾದಲ್ಲಿ ಯಾರ್ಕರ್ ತಜ್ಞ ಜಸ್ತ್ರೀತ್ ಬೂಮ್ರಾ ಬದಲಿಗೆ ಧವಳ್ ಕುಲಕರ್ಣಿಗೆ ಸ್ಥಾನ ಸಿಕ್ಕಿದೆ. ನ್ಯೂಜಿಲೆಂಡ್ ತಂಡದಲ್ಲಿ ಈಶ್ ಸೋಧಿ, ಬಿಜೆ ವಾಟ್ಲಿಂಗ್, ಅಂಟೋನ್ ಡೆವ್ಸಿಕ್ ಅವರಿಗೆ ಅವಕಾಶ ಸಿಕ್ಕಿದ್ದರೆ, ಲೂಕ್ ರಾನ್ಕಿ, ಕೋರೆ ಆಂಡರ್ಸನ್ ಹಾಗೂ ಮ್ಯಾಟ್ ಹೆನ್ರಿಗೆ ವಿಶ್ರಾಂತಿ ಸಿಕ್ಕಿದೆ. [ಪಂದ್ಯದ ಸ್ಕೋರ್ ಕಾರ್ಡ್]

4th ODI: New Zealand win first toss on this tour, elect to bat against India

ಐದು ಏಕದಿನ ಕ್ರಿಕೆಟ್ ಪಂದ್ಯಗಳ ಸರಣಿಯಲ್ಲಿ ಭಾರತ 2-1ರಿಂದ ಮುನ್ನಡೆ ಸಾಧಿಸಿದೆ.
ಭಾರತ : ರೋಹಿತ್ ಶರ್ಮ, ಅಜಿಂಕ್ಯ ರಹಾನೆ , ವಿರಾಟ್ ಕೊಹ್ಲಿ, ಮನೀಶ್ ಪಾಂಡೆ, ಎಂಎಸ್ ಧೋನಿ, ಕೇದಾರ್ ಜಾಧವ್, ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ, ಅಮಿತ್ ಮಿಶ್ರಾ, ಧವಳ್ ಕುಲಕರ್ಣಿ, ಉಮೇಶ್ ಯಾದವ್

ನ್ಯೂಜಿಲೆಂಡ್: ಮಾರ್ಟಿನ್ ಗಪ್ಟಿಲ್, ಟಾಮ್ ಲಾಥಮ್, ರಾಸ್ ಟೇಲರ್, ಕೇನ್ ವಿಲಿಯಮ್ಸನ್(ನಾಯಕ), ವಾಟ್ಲಿಂಗ್(ವಿಕೆಟ್ ಕೀಪರ್), ಜೇಮ್ಸ್ ನೀಶಮ್, ಮಿಚೆಲ್ ಸಾಂಟ್ನರ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ಇಶ್ ಸೋಧಿ, ಅಂಟೋನ್ ಡೆವ್ಸಿಕ್
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
New Zealand bowlers once again produced a brilliant performance to restrict India at 241 in 48.4 overs in the fourth ODI and win the match by 19 runs here on Wednesday (October 26).
Please Wait while comments are loading...