ರವಿಚಂದ್ರನ್ ಅಶ್ವಿನ್ ಮುರಿದ ಟೆಸ್ಟ್ ದಾಖಲೆಗಳ ಪಟ್ಟಿ

Posted By:
Subscribe to Oneindia Kannada

ಇಂದೋರ್, ಅಕ್ಟೋಬರ್ 12: ಪ್ರವಾಸಿ ನ್ಯೂಜಿಲೆಂಡ್ ತಂಡದ ವಿರುದ್ಧ ಸರಣಿ ಶ್ರೇಷ್ಠ ಪ್ರದರ್ಶನ ನೀಡಿದ ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಹತ್ತು ಹಲವು ದಾಖಲೆಗಳನ್ನು ಕೂಡಾ ಮುರಿದಿದ್ದಾರೆ.

ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ 13 ವಿಕೆಟ್ ಕಬಳಿಸಿ ಪಂದ್ಯ ಶ್ರೇಷ್ಠರೆನಿಸಿದ ಅಶ್ವಿನ್ ಅವರ ಸ್ಪಿನ್ ಮೋಡಿಯಿಂದ ಕಿವೀಸ್ ಹೊರ ಬರಲು ಸಾಧ್ಯವಾಗಿಲ್ಲ.[ಕಿವೀಸ್ ವಿರುದ್ಧ ಸರಣಿ, ಕ್ರಿಕೆಟರ್ಸ್ ಗೆ ಟ್ವಿಟ್ಟರಲ್ಲಿ ಬಹುಪರಾಕ್!]

ಟೆಸ್ಟ್ ಸರಣಿ ಗ್ಯಾಲರಿ

ಸರಣಿಯಲ್ಲಿ ಭಾರತ 3-0 ಕ್ಲೀನ್ ಸ್ವೀಪ್ ಮಾಡಲು ಅಶ್ವಿನ್ ಕೊಡುಗೆ ಹೆಚ್ಚಾಗಿತ್ತು. ಒಟ್ಟಾರೆ ಸರಣಿಯಲ್ಲಿ 27 ವಿಕೆಟ್ ಗಳನ್ನು ಗಳಿಸಿದ ಅಶ್ವಿನ್ ಇನ್ನೊಂದು ಬದಿಯಲ್ಲಿ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಅವರು ಉತ್ತಮ ಸಾಥ್ ನೀಡಿದರು.[ಪಂದ್ಯದ ಸ್ಕೋರ್ ಕಾರ್ಡ್ ನೋಡಿ]

ಇಂದೋರ್ ಟೆಸ್ಟ್ ಪಂದ್ಯದಲ್ಲೇ ಮೊದಲ ಇನಿಂಗ್ಸ್ ನಲ್ಲಿ 81ಕ್ಕೆ 6 ಮತ್ತು 2ನೇ ಇನಿಂಗ್ಸ್ ನಲ್ಲಿ 59ಕ್ಕೆ 7 ಗಳಿಸಿ ತಮ್ಮ ವಿಕೆಟ್ ಬೇಟೆ ಮುಂದುವರೆಸಿದರು. ಜತೆಗೆ ಅನೇಕ ದಾಖಲೆಗಳನ್ನು ಕೂಡಾ ಧ್ವಂಸಗೊಳಿಸಿದರು.

India Vs New Zealand: Ravichandran Ashwin plunders several Test records

ಕಿವೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಶ್ವಿನ್ ಸಾಧನೆ:
*ವೃತ್ತಿಜೀವನದಲ್ಲಿ ಆಡಿದ 14 ಟೆಸ್ಟ್ ಸರಣಿಯಲ್ಲಿ 7ನೇ ಬಾರಿ ಸರಣಿಶ್ರೇಷ್ಠ ಪ್ರಶಸ್ತಿ ಶ್ರೇಷ್ಠ ಬೌಲಿಂಗ್ (59ಕ್ಕೆ 7), ಈ ಮುಂಚೆ 2015ರಲ್ಲಿ ನಾಗ್ಪುರ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7/66 ಪಡೆದಿದ್ದರು.

* ಒಟ್ಟಾರೆ ಮೂರನೇ ಪಂದ್ಯದಲ್ಲಿ (140ಕ್ಕೆ 13) ಗಳಿಸಿದ್ದು ಶ್ರೇಷ್ಠ ಸಾಧನೆ. ಆಗಸ್ಟ್ 2012ರಲ್ಲಿ ಹೈದರಾಬಾದ್ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 12/85 ಗಳಿಸಿದ್ದರು.

* ಸತತ 4 ಟೆಸ್ಟ್ ಸರಣಿಗಳಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದ ವಿಶ್ವದ 3ನೇ ಆಟಗಾರ
* 21ನೇ ಬಾರಿ 5 ವಿಕೆಟ್ ಮತ್ತು 6ನೇ ಬಾರಿ ಪಂದ್ಯದಲ್ಲಿ 10 ವಿಕೆಟ್ ಕಬಳಿಕೆ.(ಅನಿಲ್ ಕುಂಬ್ಳೆ 8 ಬಾರಿ ಈ ಸಾಧನೆ ಮಾಡಿದ್ದಾರೆ)
* 4ನೇ ಬಾರಿ ಪಂದ್ಯವೊಂದರಲ್ಲಿ 12 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್
* ಕಿವೀಸ್ ವಿರುದ್ಧ ಪಂದ್ಯವೊಂದರಲ್ಲಿ 3ನೇ ಬಾರಿಗೆ 10 ವಿಕೆಟ್ ಗಳಿಕೆ
(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's star off-spinner Ravichandran Ashwin once again single-handedly triggered another batting collapse of New Zealand, to return with career-best figures of 7/59 in the visitors' second innings, bundling them out for a paltry 153 in response to the mammoth target of 475.
Please Wait while comments are loading...