ಅಂತಿಮ ಟೆಸ್ಟ್ : ನಾಯಕ ಕೊಹ್ಲಿಯಿಂದ ಆಕರ್ಷಕ ಶತಕ

Posted By:
Subscribe to Oneindia Kannada

ಇಂದೋರ್, ಅಕ್ಟೋಬರ್ 08: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದನ್ನು ಶತಕ ಬಾರಿಸುವ ಮೂಲಕ ಸಮರ್ಥಿಸಿಕೊಂಡಿದ್ದಾರೆ. ನಾಯಕ ಕೊಹ್ಲಿ 184 ಎಸೆತಗಳಲ್ಲಿ ಆಕರ್ಷಕ ಶತಕ ಬಾರಿಸಿ ತಂಡದ ಮೊತ್ತವನ್ನು 260ಕ್ಕೇರಿಸಿದ್ದಾರೆ.

ಪಂದ್ಯದ ಸ್ಕೋರ್ ಕಾರ್ಡ್

ನಾಯಕ ಕೊಹ್ಲಿ 103ರನ್ ಗಳಿಸಿ ಆಡುತ್ತಿದ್ದು, 10 ಬೌಂಡರಿ ಬಾರಿಸಿದ್ದಾರೆ. ಕೊಹ್ಲಿ ಸಾಥ್ ನೀಡಿರುವ ರಹಾನೆ 79ರನ್ ಗಳಿಸಿದ್ದಾರೆ. ಈ ಸಮಯಕ್ಕೆ 90 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 267ರನ್ ಸ್ಕೋರ್ ಮಾಡಿದೆ.

3rd Test, Day 1: Virat Kohli brings up 13th Test century, India push NZ on backfoot

ತವರು ನೆಲದಲ್ಲಿ ಮೂರು ವರ್ಷಗಳ ನಂತರ ಕೊಹ್ಲಿ ಶತಕ ಸಿಡಿಸಿದ್ದಾರೆ. ಬಲಗೈ ಬ್ಯಾಟ್ಸ್ ಮನ್ ಕೊಹ್ಲಿ ಅವರು ವೆಸ್ಟ್ ಇಂಡೀಸ್ ನ ಆಂಟಿಗ್ವಾದಲ್ಲಿ 200ರನ್ ಗಳಿಸಿದ ಮೇಲೆ ಕಳೆದ ಎಂಟು ಇನ್ನಿಂಗ್ಸ್ ನಲ್ಲಿ ಇದೇ ಅವರ ದೊಡ್ಡ ಮೊತ್ತವಾಗಿದೆ. ತವರು ನೆಲದಲ್ಲಿ ಕಳೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಚೆನ್ನೈನಲ್ಲಿ 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸಿದ ಮೇಲೆ ಈಗ ತವರು ನೆಲದಲ್ಲಿ ಶತಕ ಗಳಿಸಿದ್ದಾರೆ.

ಮುರಳಿ ವಿಜಯ್ ಜತೆ ಗೌತಮ್ ಗಂಭೀರ್ ಕಣಕ್ಕಿಳಿದಿದ್ದು, ತಂಡದ ಮೊತ್ತ 26 ಸ್ಕೋರ್ ಆಗಿದ್ದಾಗ 10ರನ್ ಗಳಿಸಿದ್ದ ವಿಜಯ್ ಔಟಾದರು. ಗೌತಮ್ ಗಂಭೀರ್ 29ರನ್ ಗಳಿಸಿ ಔಟಾದರು. ನಂತರ ಬಂದ ಚೇತೇಶ್ವರ್ ಪೂಜರಾ 41 ಗಳಿಸಿ ಪೆವಿಲಿಯನ್ ತಲುಪಿದರು.

3rd Test: Kohli wins third toss in a row, India opt to bat first against New Zealand

ಭುವನೇಶ್ವರ್ ಕುಮಾರ್ ಬದಲಿಗೆ ಉಮೇಶ್ ಯಾದವ್ ತಂಡದಲ್ಲಿದ್ದಾರೆ. ನ್ಯೂಜಿಲೆಂಡ್ ತಂಡಕ್ಕೆ ನಾಯಕ ಕೇನ್ ವಿಲಿಯಮ್ಸನ್ ಮರಳಿದ್ದಾರೆ.

ಆಡುವ XI:
ಭಾರತ: ವಿರಾಟ್ ಕೊಹ್ಲಿ (ನಾಯಕ), ಗೌತಮ್ ಗಂಭೀರ್, ಮುರಳಿ ವಿಜಯ್, ಚೇತೇಶ್ವರ್ ಪೂಜಾರಾ, ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ರವಿಚಂದ್ರನ್ ಅಶ್ವಿನ್, ವೃದ್ಧಿಮಾನ್ ಸಹ(ವಿಕೆಟ್ ಕೀಪರ್), ರವೀಂದ್ರ ಜಡೇಜ, ಮೊಹಮ್ಮದ್ ಶಮಿ, ಉಮೇಶ್ ಯಾದವ್.

ನ್ಯೂಜಿಲೆಂಡ್ : ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಲಾಥಮ್, ಮಾರ್ಟಿನ್ ಗಪ್ಟಿಲ್, ರಾಸ್ ಟೇಲರ್, ಲೂಕ್ ರಾಂಕಿ, ಜಿಮ್ಮಿ ನೀಶಮ್, ಮಿಚೆಲ್ ಸಾಂಟ್ನರ್, ಬಿಜೆ ವಾಟ್ಲಿಂಗ್, ಜೀತನ್ ಪಟೇಲ್, ಮ್ಯಾಟ್ ಹೆನ್ರಿ, ಟ್ರೆಂಟ್ ಬೌಲ್ಟ್ (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India skipper Virat Kohli won his third toss in row and opted to bat first against New Zealand in the third and final Test match here on Saturday (Oct 8).
Please Wait while comments are loading...