ಕಿವೀಸ್ ವಿರುದ್ಧ 3ನೇ ಏಕದಿನ ಪಂದ್ಯ ಹಾಗೂ ಸರಣಿ ಗೆದ್ದ ಭಾರತ

Posted By:
Subscribe to Oneindia Kannada

ಕಾನ್ಪುರ್, ಅಕ್ಟೋಬರ್ 29: ಗ್ರೀನ್ ಪಾರ್ಕ್ ಮೈದಾನದಲ್ಲಿ ಇಂದಿನ ಪಂದ್ಯ ಮೂರು ಏಕದಿನ ಪಂದ್ಯಗಳ ಸರಣಿಯ ಅಂತಿಮ ಪಂದ್ಯವಾಗಿತ್ತು. ಉಭಯ ತಂಡಗಳು ಒಂದೊಂದು ಪಂದ್ಯಗಳನ್ನು ಗೆದ್ದಿದ್ದು, ಈ ಪಂದ್ಯ ಕುತೂಹಲ ಕೆರಳಿಸಿತ್ತು. ನಿಗದಿತ 50 ಓವರ್ ಗಳಲ್ಲಿ ಭಾರತ 337/6 ಸ್ಕೋರ್ ಮಾಡಿತ್ತು. ಬೃಹತ್ ಮೊತ್ತವನ್ನು ಸಮರ್ಥವಾಗಿ ಚೇಸ್ ಮಾಡಿದ ನ್ಯೂಜಿಲೆಂಡ್ 6ರನ್ ಗಳಿಂದ ಸೋಲು ಕಂಡಿದೆ.

ಲೈವ್ ಸ್ಕೋರ್ ಕಾರ್ಡ್

ಮೂರನೇ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸಿದ ಭಾರತ, ಮೂರು ಏಕದಿನ ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.

ಎಬಿಡಿ ದಾಖಲೆ ಮುರಿದು, ತ್ವರಿತಗತಿಯಲ್ಲಿ 9 ಸಾವಿರ ರನ್ ಗಳಿಸಿದ ಕೊಹ್ಲಿ

ನ್ಯೂಜಿಲೆಂಡ್ ಪರ ಕಾಲಿನ್ ಮನ್ರೋ 62 ಎಸೆತಗಳಲ್ಲಿ 75ರನ್, ನಾಯಕ ಕೇನ್ ವಿಲಿಯಮ್ಸನ್ 64ರನ್, ಟಾಮ್ ಲಾಥಮ್ 65ರನ್, ರಾಸ್ ಟೇಲರ್ 39, ಹೆನ್ರಿ ನಿಕೊಲ್ಸ್ 37ರನ್ (24 ಎಸೆತಗಳಲ್ಲಿ) ಗಳಿಸಿ ಉತ್ತಮ ಆಟ ಪ್ರದರ್ಶಿಸಿದರು. ಅಂತಿಮವಾಗಿ ಕಿವೀಸ್ ತಂಡ 50 ಓವರ್ ಗಳಲ್ಲಿ 331/7 ಸ್ಕೋರ್ ಮಾಡಿ ಸೋಲೊಪ್ಪಿಕೊಂಡಿತು.

ಭಾರತದ ಪರ ರೋಹಿತ್ ಶರ್ಮ 147 ರನ್ (138 ಎಸೆತಗಳು, 18‍‍ ಬೌಂಡರಿ, 2ಸಿಕ್ಸರ್), ವಿರಾಟ್ ಕೊಹ್ಲಿ 113ರನ್ (106 ಎಸೆತಗಳು, 9 ಬೌಂಡರಿ, 1 ಸಿಕ್ಸರ್) ಗಳಿಸಿ ರನ್ ಗತಿ ಹೆಚ್ಚಿಸಿದರು.

India Vs New Zealand, 3rd ODI: Kane Williamson invites Virat Kohli to bat first in series deciderನ್ಯೂಜಿಲೆಂಡ್ ಪರ ನ್ಯೂಜಿಲೆಂಡ್ ಪರ ಟಿಮ್ ಸೌಥಿ, ಆಡಂ ಮಿಲ್ನ್, ಮಿಚೆಲ್ ಸಾಂಟ್ನರ್ ತಲಾ 2 ವಿಕೆಟ್ ಪಡೆದರು.

ನ್ಯೂಜಿಲೆಂಡ್ ನಿಂದ ಭಾರತ ಪ್ರವಾಸ ಸಂಪೂರ್ಣ ವೇಳಾಪಟ್ಟಿ


ಟಾಸ್ ವರದಿ :
ಮೂರನೇ ಏಕದಿನ ಪಂದ್ಯದಲ್ಲಿ ಭಾರತ ವಿರುದ್ಧ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡವು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ಆಡುವ ಹನ್ನೊಂದು:
ನ್ಯೂಜಿಲೆಂಡ್: ಮಾರ್ಟಿನ್ ಗಪ್ಟಿಲ್, ಕಾಲಿನ್ ಮನ್ರೋ, ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟೇಲರ್, ಟಾಮ್ ಲಾಥಮ್ (ವಿಕೆಟ್ ಕೀಪರ್), ಹೆನ್ರಿ ನಿಕೋಲಸ್, ಕಾಲಿನ್ ಡಿ ಗ್ರಾಂಡ್ಹೊಮೆ, ಮಿಚೆಲ್ ಸಾಂಟ್ನರ್, ಆಡಂ ಮಿಲ್ನೆ, ಟಿಮಿ ಸೌಥಿ, ಟ್ರೆಂಟ್ ಬೌಲ್ಟ್

ಭಾರತ: ರೋಹಿತ್ ಶರ್ಮ, ಶಿಖರ್ ಧವನ್, ವಿರಾಟ್ ಕೊಹ್ಲಿ(ನಾಯಕ), ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಎಂಎಸ್ ಧೋನಿ(ವಿಕೆಟ್ ಕೀಪರ್), ಕೇದಾರ್ ಜಾಧವ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಜಸ್ ಪ್ರೀತ್ ಬೂಮ್ರಾ, ಯಜುವೇಂದ್ರ ಚಾಹಲ್.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bumrah delivers in death overs as India beat New Zealand by 6 runs; clinch series 2-1 decider ODI match here on Sunday (October 29).
Please Wait while comments are loading...