500ನೇ ಟೆಸ್ಟ್ : ವಿರಾಟ್ ಕೊಹ್ಲಿ ಪಡೆಗೆ ಅಮೋಘ ಜಯ

Posted By:
Subscribe to Oneindia Kannada

ಕಾನ್ಪುರ, ಸೆ. 26:ಇಲ್ಲಿನ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಭಾರತ ತನ್ನ 500ನೇ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿದೆ. ನ್ಯೂಜಿಲೆಂಡ್ ತಂಡಕ್ಕೆ ಗೆಲ್ಲಲು 434ರನ್ ಟಾರ್ಗೆಟ್ ನೀಡಿತ್ತು. ಪಂದ್ಯದ ಐದನೇ ದಿನವಾದ ಸೋಮವಾರದಂದು ನ್ಯೂಜಿಲೆಂಡ್ ತಂಡ 2ನೇ ಇನ್ನಿಂಗ್ಸ್ ನಲ್ಲಿ ಕಿವೀಸ್ 236ರನ್ನಿಗೆ ಆಲೌಟ್ ಆಗಿದೆ. ಭಾರತಕ್ಕೆ 197ರನ್ ಗಳ ಬೃಹತ್ ಗೆಲುವು ದಕ್ಕಿದೆ

500ನೇ ಟೆಸ್ಟ್ ಪಂದ್ಯದ ಸ್ಕೋರ್ ಕಾರ್ಡ್ | [ಗ್ಯಾಲರಿ: 500ನೇ ಟೆಸ್ಟ್ ಪಂದ್ಯದ ಐತಿಹಾಸಿಕ ಕ್ಷಣಗಳು]

ನಾಲ್ಕನೇ ದಿನದ ಅಂತ್ಯಕ್ಕೆ ಭಾರತ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 107.2 ಓವರ್ ಗಳಲ್ಲಿ 377/5 ಸ್ಕೋರ್ ಮಾಡಿ ಡಿಕ್ಲೇರ್ ಮಾಡಿಕೊಂಡಿತ್ತು. 434ರನ್ ಗುರಿ ಬೆನ್ನು ಹತ್ತಿರುವ ನ್ಯೂಜಿಲೆಂಡ್ ತಂಡ ಐದನೇ ದಿನದಂದು 73 ಓವರ್ ಗಳಲ್ಲಿ 205/7 ಸ್ಕೋರ್ ಮಾಡಿ ದುಃಸ್ಥಿತಿಯಲ್ಲಿತ್ತು. ಆಶ್ವಿನ್ 6 ವಿಕೆಟ್ ಕಿತ್ತು ಕಿವೀಸ್ ತಂಡ 236ರನ್ನಿಗೆ ಆಲೌಟ್ ಆಗುವಂತೆ ಮಾಡಿದ್ದಾರೆ [500ನೇ ಟೆಸ್ಟ್ : ಟೀಂ ಇಂಡಿಯಾದ ಮೈಲಿಗಲ್ಲುಗಳು]

India Vs New Zealand, Kanpur Test, Day 5: Kiwis start with positive intent

ಲೂಕ್ ರಾನ್ಕಿ 80ರನ್ ಗಳಿಸಿ ಭಾರಿ ಪ್ರತಿರೋಧ ಒಡ್ಡಿ ಕೊನೆಗೆ ರವೀಂದ್ರ ಜಡೇಜ ಅವರಿಗೆ ವಿಕೆಟ್ ಒಪ್ಪಿಸಿದ್ದಾರೆ. ಸಾಂಟ್ನರ್ 57 ರನ್ ಗಳಿಸಿ ಕ್ರೀಸ್ ನಲ್ಲಿದ್ದು, ಪಂದ್ಯ ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. [ಟೆಸ್ಟ್ ಸರಣಿ : ಯಾವ ದಾಖಲೆಗಳು ಧ್ವಂಸವಾಗಲಿವೆ?]

ಭಾರತದ ಪರ ಎರಡನೇ ಇನ್ನಿಂಗ್ಸ್ ನಲ್ಲಿ ಆರ್ ಅಶ್ವಿನ್ 3 ವಿಕೆಟ್, ಶಮಿ 2 ಹಾಗೂ 1 ವಿಕೆಟ್ ಪಡೆದಿದ್ದಾರೆ.(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Indian bowlers came back strongly to get three more wickets after New Zealand started batting with a positive intent in the morning session Day 5 of the first Test against India here on Monday (Sep 26).
Please Wait while comments are loading...