3ನೇ ದಿನದ ಅಂತ್ಯಕ್ಕೆ ಟೀಂ ಇಂಡಿಯಾಕ್ಕೆ 215 ರನ್ ಮುನ್ನಡೆ

Posted By:
Subscribe to Oneindia Kannada

ಕಾನ್ಪುರ, ಸೆ. 24: ಇಲ್ಲಿನ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಭಾರತ ತನ್ನ 500ನೇ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದು, ನ್ಯೂಜಿಲೆಂಡ್ ತಂಡ ಮೂರನೇ ದಿನದಂದು 262 ಸ್ಕೋರಿಗೆ ಆಲೌಟ್ ಆಗಿದೆ. ಕೊಹ್ಲಿ ಪಡೆಗೆ ಇದರಿಂದ 56 ರನ್ ಗಳ ಮುನ್ನಡೆ ಸಿಕ್ಕಿದೆ. ಸ್ಪಿನ್ನರ್ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜ ದಾಳಿಗೆ ಸಿಲುಕಿದ ಕಿವೀಸ್ ಮೂರನೇ ದಿನದಂದು ಸರ್ವಪತನ ಕಂಡಿತು.

3ನೇ ದಿನದ ಅಂತ್ಯಕ್ಕೆ ಭಾರತ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ47 ಓವರ್ ಗಳಲ್ಲಿ 159/1 ಸ್ಕೋರ್ ಮಾಡಿದೆ (ಮುರಳಿ ವಿಜಯ್ ಅಜೇಯ 64, ಪೂಜಾರ ಅಜೇಯ 50) ಒಟ್ಟಾರೆ 215 ರನ್ ಮುನ್ನಡೆ ಪಡೆದುಕೊಂಡಿದೆ.

[500ನೇ ಟೆಸ್ಟ್ ಪಂದ್ಯದ ಸ್ಕೋರ್ ಕಾರ್ಡ್] || [ಗ್ಯಾಲರಿ: 500ನೇ ಟೆಸ್ಟ್ ಪಂದ್ಯದ ಐತಿಹಾಸಿಕ ಕ್ಷಣಗಳು]

ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಅವರು 34 ಓವರ್ ಗಳಲ್ಲಿ 73ರನ್ನಿತ್ತು 5 ವಿಕೆಟ್ ಪಡೆದುಕೊಂಡರೆ, ಆಫ್ ಸ್ಪಿನ್ನರ್ ಆರ್ ಅಶ್ವಿನ್ ಅವರು 30.5 ಓವರ್ ಗಳಲ್ಲಿ 93 ರನ್ನಿತ್ತು 4 ವಿಕೆಟ್ ಕಬಳಿಸಿದರು. ಇನ್ನೊಂದು ವಿಕೆಟ್ ವೇಗಿ ಉಮೇಶ್ ಯಾದವ್ ಪಾಲಾಯಿತು.[500ನೇ ಟೆಸ್ಟ್ : ಟೀಂ ಇಂಡಿಯಾದ ಮೈಲಿಗಲ್ಲುಗಳು]

1st Test, Day 3: New Zealand bundled out for 262, trapped in Ashwin-Jadeja spin

ಕಿವೀಸ್ ಮೊದಲ ಇನ್ನಿಂಗ್ಸ್ : ಟೀಂ ಇಂಡಿಯಾದ ಮೊದಲ ಇನ್ನಿಂಗ್ಸ್ ಸ್ಕೋರ್ 318 ಬೆನ್ನು ಹತ್ತಿದ ಕಿವೀಸ್ ಪಡೆ ಎರಡನೇ ದಿನ ಕೇವಲ ಒಂದು ವಿಕೆಟ್ ಕಳೆದುಕೊಂಡು ಉತ್ತಮ ಆಟ ಪ್ರದರ್ಶಿಸಿತ್ತು. [ಟೆಸ್ಟ್ ಸರಣಿ : ಯಾವ ದಾಖಲೆಗಳು ಧ್ವಂಸವಾಗಲಿವೆ?]

ಮಳೆಯ ಕಾರಣ ನಿಗದಿತ ಓವರ್ ಗಳನ್ನು ಎಸೆಯಲು ಆಗಿರಲಿಲ್ಲ. ಆದರೆ, ಮೂರನೇ ದಿನ ರನ್ ಗತಿ ಹೆಚ್ಚಿಸಲು ಹೋಗಿ ನಿಯಮಿತವಾಗಿ ವಿಕೆಟ್ ಕಳೆದುಕೊಂಡಿತು. [ನ್ಯೂಜಿಲೆಂಡ್- ಭಾರತ ಟೆಸ್ಟ್, ಏಕದಿನ ಸರಣಿ ವೇಳಾಪಟ್ಟಿ]

ಕಿವೀಸ್ ಪರ ಲಾಥಮ್ 58ರನ್, ನಾಯಕ ಕೇನ್ ವಿಲಿಯಮ್ಸನ್ 75ರನ್, ರಾಂಚಿ 38, ಸಾಂಟ್ನರ್ 32, ವಿಕೆಟ್ ಕೀಪರ್ ವಾಟ್ಲಿಂಗ್ 21ರನ್ ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಆದರೆ, 95.5 ಓವರ್ ಗಳಲ್ಲಿ 262ಸ್ಕೋರ್ ಮಾಡಿ ಆಲೌಟ್ ಆಗಿದೆ. ಕಿವೀಸ್ ಬ್ಯಾಟಿಂಗ್ ಕ್ರಮಾಂಕದಲ್ಲಿ ರಾಸ್ ಟೇಲರ್ ಸೇರಿ ನಾಲ್ಕು ಮಂದಿ ಶೂನ್ಯಕ್ಕೆ ಔಟಾದರು.[500 ಟೆಸ್ಟ್ ಪಂದ್ಯಗಳು, 32 ಟೀಂ ಇಂಡಿಯಾ ಕ್ಯಾಪ್ಟನ್ಸ್]

1st Test, Day 3: New Zealand bundled out for 262, trapped in Ashwin-Jadeja spin

ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ : ಮುರಳೀ ವಿಜಯ್ 65, ಪೂಜಾರಾ 62, ರೋಹಿತ್ ಶರ್ಮ 35, ಆರ್ ಅಶ್ವಿನ್ 40, ರವೀಂದ್ರ ಜಡೇಜ ಅಜೇಯ 42ರನ್ ಗಳಿಸಿ 97 ಓವರ್ ಗಳಲ್ಲಿ 318 ಸ್ಕೋರಿಗೆ ಆಲೌಟ್ ಆಗಿತ್ತು. ಕಿವೀಸ್ ಪರ ಟ್ರೆಂಟ್ ಬೌಲ್ಟ್ ಹಾಗೂ ಸಾಂಟ್ನರ್ ತಲಾ 3 ವಿಕೆಟ್, ವಾಗ್ನರ್ 2, ಕ್ರೇಗ್, ಸೋಧಿ ತಲಾ 1 ವಿಕೆಟ್ ಗಳಿಸಿದರು. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
New Zealand batsmen fell into Ravichandran Ashwin and Ravindra Jadeja's spin trap and were all out for 262 in their first innings on Day 3 on first Test here on Saturday (Sept 24).
Please Wait while comments are loading...