500ನೇ ಟೆಸ್ಟ್: ಮೊದಲ ದಿನದ ಅಂತ್ಯಕ್ಕೆ ಭಾರತ 291/9

Posted By:
Subscribe to Oneindia Kannada

ಕಾನ್ಪುರ್, ಸೆ. 22: ಇಲ್ಲಿನ ಗ್ರೀನ್ ಪಾರ್ಕ್ ಮೈದಾನದಲ್ಲಿ ಭಾರತದ 500ನೇ ಟೆಸ್ಟ್ ಪಂದ್ಯ ಗುರುವಾರ ಆರಂಭವಾಗಿದೆ. ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಅವರು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಪಂದ್ಯದ ಸ್ಕೋರ್ ಕಾರ್ಡ್


ಮುರಳಿ ವಿಜಯ್ 50 ರನ್ ಹಾಗೂ ಚೇತೇಶ್ವರ್ ಪೂಜಾರಾ ಅರ್ಧಶತಕ ಗಳಿಸಿ ತಂಡ ಮೊತ್ತವನ್ನು 48 ಓವರ್ ಗಳಲ್ಲಿ 152/1ಗೆ ಏರಿಸಿದ್ದಾರೆ. ಕೆಎಲ್ ರಾಹುಲ್ 32ರನ್ ಗಳಿಸಿ ಭೋಜನವಿರಾಮಕ್ಕೂ ಮುನ್ನವೇ ಔಟಾದರು.[500ನೇ ಟೆಸ್ಟ್ ಪಂದ್ಯ, ನಿಮ್ಮ ಕನಸಿನ ತಂಡ ಆಯ್ಕೆ ಮಾಡಿ!]

84 ವರ್ಷಗಳ ಟೆಸ್ಟ್ ಇತಿಹಾಸವುಳ್ಳ ಟೀಂ ಇಂಡಿಯಾಕ್ಕೆ ಇದು 500ನೇ ಟೆಸ್ಟ್ ಪಂದ್ಯವಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ಮಾಜಿ ನಾಯಕರನ್ನು ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸನ್ಮಾನಿಸಿದೆ.

India Vs New Zealand, 1st Test: Virat Kohli wins toss, India to bat firstIndia Vs New Zealand, 1st Test: Virat Kohli wins toss, India to bat first

ಟಾಸ್ ವರದಿ: ಟಾಸ್ ಗೆದ್ದ ಬಳಿಕ ರವಿಶಾಸ್ತ್ರಿ ಜತೆ ಮಾತನಾಡಿದ ಕೊಹ್ಲಿ, ಎರಡು ಸ್ಪಿನ್ನರ್ ಸೇರಿದಂತೆ ನಾಲ್ವರು ಬೌಲರ್ ಗಳಿರುವ ತಂಡ ಆಯ್ಕೆ ಮಾಡಲಾಗಿದೆ ಎಂದರು. ಕೇನ್ ವಿಲಿಯಮ್ಸನ್ ಅವರು ಮೂವರು ಸ್ಪಿನ್ನರ್ ಗಳಿದ್ದಾರೆ ಎಂದರು.

ತಂಡ ಇಂತಿದೆ:
ಭಾರತ: ಮುರಳಿ ವಿಜಯ್, ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರಾ, ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ರವಿಚಂದ್ರನ್ ಅಶ್ವಿನ್, ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ರವೀಂದ್ರ ಜಡೇಜ, ಉಮೇಶ್ ಯಾದವ್, ಮೊಹಮ್ಮದ್ ಶಮಿ.

ನ್ಯೂಜಿಲೆಂಡ್: ಟಾಮ್ ಲಾಥಮ್, ಮಾರ್ಟಿನ್ ಗಪ್ಟಿಲ್, ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟೇಲರ್, ಲೂಕ್ ರಾಂಚಿ, ಮಿಚೆಲ್ ಸಾಂಟ್ನರ್, ವಾಟ್ಲಿಂಗ್(ವಿಕೆಟ್ ಕೀಪರ್), ಮಾರ್ಕ್ ಕ್ರೇಗ್, ಈಶ್ ಸೋಧಿ, ನೀಲ್ ವೇಗ್ನರ್, ಟ್ರೆಂಟ್ ಬೌಲ್ಟ್. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India made good start in the first session of the opening Test against New Zealand in the three-Test rubber at Kanpur depite opener KL Rahul cheaply on Thursday (September 22).
Please Wait while comments are loading...