1st ಒಡಿಐ : ಬೌಲರ್ಸ್ ಬೊಂಬಾಟ, ಕೊಹ್ಲಿ ಆರ್ಭಟ, ಕಿವೀಸ್ ಗೋತಾ

Posted By:
Subscribe to Oneindia Kannada

ಧರ್ಮಶಾಲ, ಅಕ್ಟೋಬರ್ 16: ಟೀಂ ಇಂಡಿಯಾ ತನ್ನ 900ನೇ ಏಕದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಧೋನಿ ಅವರು ತಮ್ಮ ನಿರ್ಣಯವನ್ನು ಸಮರ್ಥಿಸಿಕೊಂಡಿದ್ದಾರೆ.

ಬೌಲಿಂಗ್ ಹಾಗೂ ಬ್ಯಾಟಿಂಗ್ ನಲ್ಲಿ ಮಿಂಚಿದ ಟೀಂ ಇಂಡಿಯಾ ಮೊದಲ ಪಂದ್ಯವನ್ನು 6 ವಿಕೆಟ್ ಗಳಿಂದ ಗೆದ್ದುಕೊಂಡಿದೆ. ವಿರಾಟ್ ಕೊಹ್ಲಿ 85 ರನ್ ಗಳಿಸಿ ಮಿಂಚಿದ್ದು, ಹಾರ್ದಿಕ್ ಪಾಂಡ್ಯ ಕನಸಿನ ಮೊದಲ ಪಂದ್ಯ ಪ್ರೇಕ್ಷಕರನ್ನು ರಂಜಿಸಿತು.

ಕಿವೀಸ್ ನೀಡಿದ್ದ 191ರನ್ ಗುರಿಯನ್ನು ಟೀಂ ಇಂಡಿಯಾ ನಾಲ್ಕು ವಿಕೆಟ್ ಕಳೆದುಕೊಂಡು 33.1 ಓವರ್ ಗಳಲ್ಲಿ ಗಳಿಸಿತು. ಈ ಪಂದ್ಯವನ್ನು ಗೆಲ್ಲುವ ಮೂಲಕ 108 ಗೆಲುವು ಸಾಧಿಸಿದ ಏಕದಿನ ನಾಯಕರಾಗಿರುವ ಎಂಎಸ್ ಧೋನಿ ಅವರು ಆಸ್ಟ್ರೇಲಿಯಾ ರಿಕಿ ಪಾಂಟಿಂಗ್ ನಂತರ ಅತ್ಯಂತ ಯಶಸ್ವಿ ಏಕದಿನ ಕ್ರಿಕೆಟ್ ನಾಯಕ ಎನಿಸಿಕೊಂಡಿದ್ದಾರೆ.

Kedhar Jadhav

ಭಾರತದ ವೇಗಿಗಳಾದ ಹಾರ್ದಿಕ್ ಪಾಂಡ್ಯ, ಉಮೇಶ್ ಯಾದವ್ ದಾಳಿಗೆ ಸಿಲುಕಿ ತತ್ತರಿಸಿದ ನ್ಯೂಜಿಲೆಂಡ್ ತಂಡ ಮೊದಲ ಏಕದಿನ ಪಂದ್ಯದಲ್ಲಿ 190ಸ್ಕೋರಿಗೆ ಆಲೌಟ್ ಆಗಿದೆ.
ಪಂದ್ಯದ ಸ್ಕೋರ್ ಕಾರ್ಡ್ || [ಏಕದಿನ ಸರಣಿ ವೇಳಾಪಟ್ಟಿ]

ಕಿವೀಸ್ ಪರ ಆರಂಭಿಕ ಆಟಗಾರ ಲಾಥಮ್ ಅವರು 98ಎಸೆತಗಳಲ್ಲಿ ಅಜೇಯ 79 ರನ್ (7X4, 1x6) ಗಳಿಸಿ ಅದ್ಬುತ ಬ್ಯಾಟಿಂಗ್ ಪ್ರದರ್ಶಿಸಿದರು. ಕೊನೆ ಹಂತದಲ್ಲಿ ಚಿನಕುರಳಿ ಆಟವಾಡಿದ ವೇಗಿ ಟಿಮ್ ಸೌಥಿ 45 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಸಹಿತ 55ರನ್ ಚೆಚ್ಚಿದ ಪರಿಣಾಮವಾಗಿ ಕಿವೀಸ್ ತಂಡ 43.5 ಓವರ್ ಗಳಲ್ಲಿ 190ಸ್ಕೋರ್ ಮಾಡಲು ಸಾಧ್ಯವಾಯಿತು.

Hardhik Pandya

ಚೊಚ್ಚಲ ಪಂದ್ಯವಾಡುತ್ತಿರುವ ಹಾರ್ದಿಕ್ ಪಾಂಡ್ಯ ಅವರು ತಮ್ಮ ಮೊದಲ ಓವರ್ ನಲ್ಲಿ ವಿಕೆಟ್ ಪಡೆದುಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯ ಹಾಗೂ ಅಮಿತ್ ಮಿಶ್ರಾ ತಲಾ 3 ಹಾಗೂ ಜಾಧವ್, ಉಮೇಶ್ ಯಾದವ್ ತಲಾ 2 ವಿಕೆಟ್ ಕಿತ್ತಿದ್ದಾರೆ. [ಟೀಂ ಇಂಡಿಯಾ- 900ನೇ ಒಡಿಐ ಆಡುವ ಮೊದಲ ತಂಡ]

ಟೀಂ ಇಂಡಿಯಾದ ಆಡುವ XI ನಲ್ಲಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯರನ್ನು ಸೇರಿಸಿಕೊಳ್ಳಲಾಗಿದೆ. ಇದು ಹಾರ್ದಿಕ್ ಪಾಂಡ್ಯ ಅವರ ಚೊಚ್ಚಲ ಏಕದಿನ ಅಂತಾರಾಷ್ಟ್ರೀಯ ಪಂದ್ಯವಾಗಿದೆ. [ಧೋನಿಗೆ 3 ದಾಖಲೆ ಮುರಿಯುವ ಚಾನ್ಸ್]

Dharamshala 1st ODI: India vs New Zealand Match Report

ತಂಡ ಇಂತಿದೆ:
ಭಾರತ: ರೋಹಿತ್ ಶರ್ಮ, ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ, ಮನೀಶ್ ಪಾಂಡೆ, ಎಂಎಸ್ ಧೋನಿ, ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಅಮಿತ್ ಮಿಶ್ರಾ, ಜಸ್ತ್ರೀಪ್ ಬೂಮ್ರಾ, ಉಮೇಶ್ ಯಾದವ್.

ಪ್ರಥಮ ಪಂದ್ಯವನ್ನಾಡುತ್ತಿರುವ ಹಾರ್ದಿಕ್ ಪಾಂಡ್ಯಗೆ ಕಪ್ ನೀಡಿದ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್.

ನ್ಯೂಜಿಲೆಂಡ್ : ಮಾರ್ಟಿನ್ ಗಪ್ಟಿಲ್, ಲಾಥಮ್, ಕೇನ್ ವಿಲಿಯಮ್ಸನ್, ರಾಸ್ ಟೇಲರ್, ಕೋರೆ ಆಂಡರ್ಸನ್, ನೀಶಮ್, ಲೂಕ್ ರಾನ್ಕಿ, ಸಾಂಟ್ನರ್, ಟಿಮ್ ಸೌಥಿ, ಇಶನ್ ಸೋಧಿ, ಬ್ರೇಸ್ ವೆಲ್.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian 'Run Machine' Virat Kohli smashed an unbeaten 85 as India registered a convincing win by 6 wickets over New Zealand after a collective bowling effort in the first ODI at the Himachal Pradesh Cricket Association (HPCA) Stadium here on Sunday (Oct 16).
Please Wait while comments are loading...