ಅಂಪೈರ್ ಷಂಶುದ್ದೀನ್ ಮೈದಾನ ಬಿಟ್ಟು ಟಿವಿ ಮುಂದೆ ಕೂತ್ತಿದ್ದೇಕೆ?

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 01: ಇಂಗ್ಲೆಂಡಿನ ಪತ್ರಿಕೆಗಳಿಂದ ಟೀಕೆಗೊಳಗಾಗಿದ್ದ ಭಾರತೀಯ ಅಂಪೈರ್ ಷಂಶುದ್ದೀನ್ ಅವರು ಮೂರನೇ ಹಾಗೂ ಅಂತಿಮ ಟಿ20ಐ ಪಂದ್ಯದಿಂದ ಕೊನೆ ಕ್ಷಣದಲ್ಲಿ ಹಿಂದೆ ಸರಿದ ಘಟನೆ ನಡೆದಿದೆ. ಮೈದಾನದಲ್ಲಿ ಅಂಪೈರಿಂಗ್ ಬೇರೊಬ್ಬ ಅಂಪೈರ್ ಗೆ ವಹಿಸಲಾಯಿತು.

ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಆನ್ ಫೀಲ್ಡ್ ಅಂಪೈರಿಂಗ್ ತೊರೆದ ಷಂಶುದ್ದೀನ್ ಅವರು ಥರ್ಡ್ ಅಂಪೈರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

India Vs England: Under-fire umpire Shamshuddin steps down from 3rd T20I

ಅನಿಲ್ ಚೌಧರಿ ಜತೆ ಆನ್ ಫೀಲ್ಡ್ ಅಂಪೈರ್ ಆಗಿದ್ದ ಷಂಶುದ್ದೀನ್ ಅವರು ಕೊನೆ ಕ್ಷಣದಲ್ಲಿ ಟಿವಿ ಅಂಪೈರ್ ಆಗಿದ್ದಾರೆ. ಟಿವಿ ಅಂಪೈರ್ ಆಗಿದ್ದ ನಿತಿನ್ ಮೆನನ್ ಅವರು ಮೈದಾನದಲ್ಲಿ ಅಂಪೈರಿಂಗ್ ಮಾಡುತ್ತಿದ್ದಾರೆ.

ಕೆಎಲ್ ರಾಹುಲ್ ನಾಟೌಟ್: ಕ್ಲೀನ್ ಬೋಲ್ಡ್ ಆಗಿ ಕೆಎಲ್ ರಾಹುಲ್ ಔಟಾದರೂ ಬೌಲರ್ ಕ್ಲಿಯರ್ ಆಗಿ ನೋಬಾಲ್ ಮಾಡಿರುವುದು ಸ್ಪಷ್ಟವಾಗಿತ್ತು. ಆದರೆ, ಅಂಪೈರ್ ಆಗಲಿ, ಬ್ಯಾಟ್ಸ್ ಮನ್ ಆಗಲಿ ಈ ಬಗ್ಗೆ ಅಪೀಲ್ ಮಾಡಲಿಲ್ಲ.

ನಾಗ್ಪುರ ಪಂದ್ಯದಲ್ಲಿ ಕೊನೆ ಓವರ್ ನಲ್ಲಿ 6 ಎಸೆತಗಳಲ್ಲಿ 8 ರನ್ ಬೇಕಿದ್ದಾಗ ಇಯಾನ್ ಮಾರ್ಗನ್ ರನ್ನು ಎಲ್ ಬಿ ಎಂದು ಷಂಶುದ್ದೀನ್ ಔಟ್ ನೀಡಿದ್ದರು. ಇದು ಪಂದ್ಯದ ದಿಕ್ಕು ಬದಲಾಯಿಸಿತ್ತು. ಈ ಬಗ್ಗೆ ಬ್ರಿಟಿಷ್ ಪತ್ರಿಕೆಗಳು ಖಾರವಾಗಿ ಪ್ರತಿಕ್ರಿಯಿಸಿದ್ದವು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian umpire Shamshuddin who was under fire for his wrong decisions in the second T20I has stepped down from on-field duty in the series deciding third game between the hosts and England here today (February 1).
Please Wait while comments are loading...