ಜಯಾಗೆ ಹೃದಯ ಸ್ಥಂಭನ: ಚೆನ್ನೈ ಟೆಸ್ಟ್ ಸ್ಥಳಾಂತರ?

Written By: Ramesh
Subscribe to Oneindia Kannada

ಚೆನ್ನೈ, ಡಿಸೆಂಬರ್. 05 : ಹಲವು ದಿನಗಳಿಂದ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಭಾನುವಾರ ದಿಢೀರನೆ ಹೃದಯ ಸ್ಥಂಭನ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ನಡೆಯಬೇಕಿದ್ದ ಇಂಗ್ಲೆಂಡ್ ಹಾಗೂ ಭಾರತ ನಡುವಿನ 5ನೇ ಟೆಸ್ಟ್ ಕ್ರಿಕೆಟ್ ಪಂದ್ಯ ಸ್ಥಳಾಂತರವಾಗುವ ಸಾಧ್ಯತೆಗಳಿವೆ.

ಇದೇ ಡಿಸೆಂಬರ್ 16 ರಿಂದ 20ರ ವರೆಗೆ ಚೆನ್ನೈನ ಪಿ.ಚಿದಂಬರಂ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ಇಂಗ್ಲೆಂಡ್ ನ 5ನೇ ಟೆಸ್ಟ್ ಪಂದ್ಯ ನಿಗದಿಯಾಗಿತ್ತು. ಅಮ್ಮ ಜಯಲಲಿತಾ ಅವರ ಆರೋಗ್ಯದಲ್ಲಿ ಭಾರೀ ಏರುಪೇರು ಆಗಿದ್ದು ತಮಿಳುನಾಡಿನಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.

ಇದರಿಂದ 5ನೇ ಟೆಸ್ಟ್ ಪಂದ್ಯ ಬೇರೆಡೆಗೆ ಸ್ಥಳಾಂತರವಾಗು ಸಾಧ್ಯತೆ ಇದೆ. ಈ ಬಗ್ಗೆ ಭಾರತೀಯ ಕ್ರಿಕೆಟ್ ಮಂಡಳಿಯಿಂದ ಅಧಿಕೃತ ಮಾಹಿತಿ ಹೊರ ಬರಬೇಕಿದೆ. ಇಂಗ್ಲೆಂಡ್ ವಿರುದ್ಧ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ ಈಗಾಗಲೇ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. [ಜಯಾ LIVE : ಅ(ನಾ)ರೋಗ್ಯದ ಬಗ್ಗೆ ಹೆಚ್ಚುತ್ತಿರುವ ಕೌತುಕ!]

Jayalalithaa suffers cardiac arrest: India-England Test at Chennai to be relocated?

ಜಯಾಗೆ ಹೃದಯ ಸ್ಥಂಭನ: ಜಯಲಲಿತಾ ಅವರಿಗೆ ಹೃದಯ ಸ್ಥಂಭನ ಆಗಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಅಪೋಲೋ ಆಸ್ಪತ್ರೆಯೆದುರಿಗೆ ಸಹಸ್ರಾರು ಅಭಿಮಾನಿಗಳು ನೆರೆಯುತ್ತಿದ್ದಾರೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗೃತ ಕ್ರಮಾವಾಗಿ ಚೆನ್ನೈ ಪೊಲೀಸರು ಭಾರೀ ಮುನ್ನೆಚ್ಚರಿಕೆ ವಹಿಸಿದ್ದಾರೆ,

ಮುಂಬೈ ಟೆಸ್ಟ್ ಗೆ ಪಾರ್ಥಿವ್ ಪಟೇಲ್: ಗಾಯದ ಸಮಸ್ಯೆಯಿಂದ ಬಳಲುತ್ತಿರುವ ವಿಕೆಟ್ ಕೀಪರ್ ವೃದ್ದಿಮಾನ್ ಗಾಯದಿಂದ ಇನ್ನು ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಇದರಿಂದ ಮುಂಬೈ ಟೆಸ್ಟ್ ಗೆ ಪಾರ್ಥಿವ ಪಟೇಲ್ ರನ್ನು ಕಣಕ್ಕಿಳಿಸಲು ಬಿಸಿಸಿ ತೀರ್ಮಾನಿಸಿದೆ.

ಸಹಾ ಗಾಯಳು ಆಗಿದ್ದರಿಂದ 3ನೇ ಟೆಸ್ಟ್ ಪಂದ್ಯದಿಂದ ತಂಡದಿಂದ ಹೊರ ಉಳಿದಿದ್ದರು. ಇನ್ನೂ ಚೇತರಿಸಿಕೊಳ್ಳ ಕಾರಣ 4ನೇ ಟೆಸ್ಟ್ ನಿಂದ ಹೊರ ಉಳಿಯಲಿದ್ದಾರೆ. ಕೆಲ್ ರಾಹುಲ್ ಜತೆ ಪಾರ್ಥಿವ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The fifth and final Test match between India and England may be relocated from Chennai to some other place after Tamil Nadu chief minister J Jayalalithaa's health worsened following cardiac arrest.
Please Wait while comments are loading...