ಮುಂಬೈ ಟೆಸ್ಟ್ : ರನ್ ಮಷಿನ್ ಕೊಹ್ಲಿ ಧೂಳಿಪಟ ಮಾಡಿದ ದಾಖಲೆಗಳು!

Posted By:
Subscribe to Oneindia Kannada

ಮುಂಬೈ, ಡಿಸೆಂಬರ್ 12: ಇಂಗ್ಲೆಂಡ್ ವಿರುದ್ಧದ ನಾಲ್ಕನೆ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಇನ್ನಿಂಗ್ಸ್ ಹಾಗೂ 36ರನ್ ಗಳಿಂದ ಜಯ ಗಳಿಸಲು ನಾಯಕ ವಿರಾಟ್ ಕೊಹ್ಲಿ ಅವರ ಭರ್ಜರಿ ಬ್ಯಾಟಿಂಗ್ ಕೂಡಾ ಕಾರಣ ಎಂದರೆ ತಪ್ಪಾಗಲಾರದು. ಮೂರನೇ ದ್ವಿಶತಕ ಬಾರಿಸಿದ ಕೊಹ್ಲಿ ಈ ಟೆಸ್ಟ್ ಪಂದ್ಯದಲ್ಲೇ ಹಲವು ದಾಖಲೆಗಳನ್ನು ಮುರಿದಿದ್ದಾರೆ.

ವಿರಾಟ್ ಕೊಹ್ಲಿ 235 ರನ್ (340 ಎಸೆತಗಳು, 25X4, 1X6) ಪ್ರಸಕ್ತ ಕ್ರಿಕೆಟ್ ಋತುವಿನ ಮೂರನೇ ದ್ವಿಶತಕವಾಗಿದೆ. ಮೂರು ದ್ವಿಶತಕ ಬಾರಿಸಿದ ಭಾರತದ ಮೊದಲ ಟೆಸ್ಟ್ ತಂಡದ ನಾಯಕ ಎಂಬ ದಾಖಲೆ ಈಗ ಕೊಹ್ಲಿ ಪಾಲಾಗಿದೆ. ಮೂರು ಟೆಸ್ಟ್ ಸರಣಿಯಲ್ಲಿ ಮೂರು ದ್ವಿಶತಕ ಬಾರಿಸಿರುವುದು ವಿಶೇಷ.[ಅಶ್ವಿನ್-ಆಂಡರ್ಸನ್ ಮಾತಿನ ಚಕಮಕಿ ಬಗ್ಗೆ ಕೊಹ್ಲಿ ಸ್ಪಷ್ಟನೆ!]

ಕೊಹ್ಲಿ ಬ್ಯಾಟಿಂಗ್, ಆರ್ ಅಶ್ವಿನ್ ಬೌಲಿಂಗ್ ನೆರವಿನಿಂದ ನಾಲ್ಕನೇ ಟೆಸ್ಟ್ ಪಂದ್ಯ ಗೆದ್ದ ಭಾರತ, ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡಿದೆ. ಸರಣಿಯ ಅಂತಿಮ ಟೆಸ್ಟ್ ಪಂದ್ಯ ಚೆನ್ನೈನಲ್ಲಿ ಡಿಸೆಂಬರ್ 16ರಿಂದ ಆರಂಭವಾಗಲಿದೆ. ಕೊಹ್ಲಿ ಸಾಧನೆಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದಿದೆ...[ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 3-0 ಸರಣಿ ಜಯ]

ಮೂರು ಟೆಸ್ಟ್ ದ್ವಿಶತಕ ಬಾರಿಸಿದ ಮೂರನೇ ಆಟಗಾರ

ಮೂರು ಟೆಸ್ಟ್ ದ್ವಿಶತಕ ಬಾರಿಸಿದ ಮೂರನೇ ಆಟಗಾರ

ಜುಲೈನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಚೊಚ್ಚಲ ದ್ವಿಶತಕ(200) ಗಳಿಸಿದ್ದ ಕೊಹ್ಲಿ, ಅಕ್ಟೋಬರ್‌ನಲ್ಲಿ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಎರಡನೆ ಬಾರಿ ದ್ವಿಶತಕ(211) ಬಾರಿಸಿದ್ದರು. ಇಂಗ್ಲೆಂಡ್ ವಿರುದ್ಧ 235 ರನ್ ಗಳಿಸಿರುವ ಕೊಹ್ಲಿ ಅವರು ಟೆಸ್ಟ್ ಇತಿಹಾಸದಲ್ಲಿ ಸತತ 3 ಸರಣಿಯಲ್ಲಿ ದ್ವಿಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

ಕ್ಯಾಲೆಂಡರ್ ವರ್ಷದಲ್ಲಿ ಮೂರು ದ್ವಿಶತಕ

ಕ್ಯಾಲೆಂಡರ್ ವರ್ಷದಲ್ಲಿ ಮೂರು ದ್ವಿಶತಕ

ಕೊಹ್ಲಿ ಅವರು ಕ್ರಿಕೆಟ್ ವರ್ಷದಲ್ಲಿ ಮೂರು ದ್ವಿಶತಕ ಬಾರಿಸಿದ ವಿಶ್ವದ ಐದನೆ ಬ್ಯಾಟ್ಸ್‌ಮನ್. ಆಸ್ಟ್ರೇಲಿಯ ದಂತಕತೆ ಡಾನ್ ಬ್ರಾಡ್ಮನ್(3), ಆಸೀಸ್‌ನ ಮಾಜಿ ನಾಯಕ ರಿಕಿ ಪಾಂಟಿಂಗ್(3), ಮೈಕಲ್ ಕ್ಲಾರ್ಕ್(4) ಹಾಗೂ ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕಲಮ್(3) ಈ ಸಾಧನೆ ಮಾಡಿದ್ದರು. ಕ್ಲಾರ್ಕ್(2012)ಹಾಗೂ ಮೆಕಲಮ್(2014) ಬಳಿಕ ಈ ಸಾಧನೆ ಮಾಡಿರುವ 3ನೆ ಟೆಸ್ಟ್ ನಾಯಕ ಕೊಹ್ಲಿ.

ನಾಯಕನಾಗಿ ಕೊಹ್ಲಿ, ಗರಿಷ್ಠ ವೈಯಕ್ತಿಕ ಸ್ಕೋರ್

ನಾಯಕನಾಗಿ ಕೊಹ್ಲಿ, ಗರಿಷ್ಠ ವೈಯಕ್ತಿಕ ಸ್ಕೋರ್

235 ರನ್ ಕೊಹ್ಲಿ ಅವರ ಗರಿಷ್ಠ ವೈಯಕ್ತಿಕ ಸ್ಕೋರ್ ಕೂಡಾ ಆಗಿದೆ. ಭಾರತದ ನಾಯಕನಾಗಿಯೂ ಗರಿಷ್ಠ ಸ್ಕೋರ್ ದಾಖಲಿಸಿದ ಕೊಹ್ಲಿ, ಮಾಜಿ ಟೆಸ್ಟ್ ನಾಯಕ ಎಂಎಸ್ ಧೋನಿ ದಾಖಲೆಯನ್ನು ಮುರಿದಿದ್ದಾರೆ. ಧೋನಿ 2013ರಲ್ಲಿ ಆಸ್ಟ್ರೇಲಿಯ ವಿರುದ್ಧ ಚೆನ್ನೈನಲ್ಲಿ 224 ರನ್ ಗಳಿಸಿದ್ದರು.

8ನೇ ವಿಕೆಟ್‌ಗೆ 241 ರನ್ ಜೊತೆಯಾಟ

8ನೇ ವಿಕೆಟ್‌ಗೆ 241 ರನ್ ಜೊತೆಯಾಟ

9ನೇ ಕ್ರಮಾಂಕದಲ್ಲಿ ಆಡಲು ಬಂದ ಆಫ್ ಸ್ಪಿನ್ನರ್ ಜಯಂತ್ ಯಾದವ್ ಅವರು ಚೊಚ್ಚಲ ಶತಕ ಬಾರಿಸಿದರು. ಜಯಂತ್ ಜತೆಗೆ 8ನೇ ವಿಕೆಟ್‌ಗೆ 241 ರನ್ ಜೊತೆಯಾಟ ಸಾಧಿಸಿದ ಕೊಹ್ಲಿ ಮತ್ತೊಂದು ದಾಖಲೆ ಬರೆದರು. ಭಾರತ ತಂಡ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ 8ನೇ ವಿಕೆಟ್‌ನಲ್ಲಿ ದಾಖಲಿಸಿರುವ ಗರಿಷ್ಠ ಜೊತೆಯಾಟ ಇದಾಗಿದೆ.

ಆಸ್ಟ್ರೇಲಿಯಾದ ಎಂಜೆ ಹರ್ಟಿಗಾನ್ ಹಾಗೂ ಸಿ ಹಿಲ್ಸ್ ಅವರು 1908ರಲ್ಲಿ 243ರನ್ ಕಲೆ ಹಾಕಿದ್ದು ದಾಖಲೆಯಾಗಿ ಉಳಿದಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯಧಿಕ ರನ್ ಗಳಿಕೆ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯಧಿಕ ರನ್ ಗಳಿಕೆ

2016ರಲ್ಲಿ 36 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಕೊಹ್ಲಿ 40ಇನ್ನಿಂಗ್ಸ್ ಗಳಲ್ಲಿ 2580 ರನ್ ಗಳಿಸಿದ್ದಾರೆ. 88.96ರನ್ ಸರಾಸರಿ ಹೊಂದಿದ್ದು, 7ಶತಕ ಹಾಗೂ 13 ಅರ್ಧಶತಕ ಬಾರಿಸಿದ್ದಾರೆ. 8 ಪಂದ್ಯಶ್ರೇಷ್ಠ ಪ್ರಶಸ್ತಿ ಹಾಗೂ ಎರಡು ಬಾರಿ ಸರಣಿ ಶ್ರೇಷ್ಠ ಎನಿಸಿಕೊಂಡಿದ್ದಾರೆ.

ಬ್ರಾಡ್ಮನ್ ಬಿಟ್ಟರೆ ಕೊಹ್ಲಿಯೇ ಬೆಸ್ಟ್

ಬ್ರಾಡ್ಮನ್ ಬಿಟ್ಟರೆ ಕೊಹ್ಲಿಯೇ ಬೆಸ್ಟ್

ವಿರಾಟ್ ಕೊಹ್ಲಿ ಅವರ ರನ್ ಸರಾಸರಿ ನಾಯಕನಾಗಿ 65.50ರಷ್ಟಿದೆ. ಕ್ರಿಕೆಟ್ ಇತಿಹಾಸದಲ್ಲೇ ನಾಯಕರೊಬ್ಬರು ಈ ರೀತಿ ರನ್ ಸರಾಸರಿ ಹೊಂದಿದ ಉದಾಹರಣೆ ಇಲ್ಲ. 2000ಪ್ಲಸ್ ರನ್ ಗಳಿಸಿದ ನಾಯಕರ ಪಟ್ಟಿಯಲ್ಲಿ ಡಾನ್ ಬ್ರಾಡ್ಮನ್ 101.51ರನ್ ಸರಾಸರಿ ಹೊಂದಿದ್ದಾರೆ. ಬ್ರಾಡ್ಮನ್ ಹೊರತು ಪಡಿಸಿದರೆ ಕೊಹ್ಲಿ ರನ್ ಸರಾಸರಿಯೇ ಬೆಸ್ಟ್.

50ರನ್ ಸರಾಸರಿ ದಾಟಿದ ಕೊಹ್ಲಿ

50ರನ್ ಸರಾಸರಿ ದಾಟಿದ ಕೊಹ್ಲಿ

ಇದೇ ಮೊದಲ ಬಾರಿಗೆ ಕೊಹ್ಲಿ ಅವರು ತಮ್ಮ ರನ್ ಸರಾಸರಿಯನ್ನು 50ಕ್ಕಿಂತ ಹೆಚ್ಚು ಗಳಿಸಿದ್ದಾರೆ. ಇಂಗ್ಲೆಂಡ್ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ಮೂಲಕ 50.53ರನ್ ಸರಾಸರಿಯಂತೆ ಸ್ಕೋರ್ ಮಾಡಿದ್ದಾರೆ.

ಕೊಹ್ಲಿ ಅವರು ಏಕದಿನ ಕ್ರಿಕೆಟ್ ನಲ್ಲಿ 52.93 ಹಾಗೂ ಟಿ20ಐನಲ್ಲಿ 57.13 ರನ್ ಸರಾಸರಿ ಹೊಂದಿದ್ದಾರೆ. ಹೀಗಾಗಿ ಮೂರು ಮಾದರಿಯಲ್ಲೂ 50ಕ್ಕಿಂತ ಹೆಚ್ಚು ರನ್ ಸರಾಸರಿ ಹೊಂದಿರುವ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ.

1,000 ಟೆಸ್ಟ್ ರನ್ ಗಳು

1,000 ಟೆಸ್ಟ್ ರನ್ ಗಳು

28 ವರ್ಷ ವಯಸ್ಸಿನ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು 2016 ಕ್ರಿಕೆಟ್ ವರ್ಷದಲ್ಲಿ 11 ಪಂದ್ಯಗಳಿಂದ 1,000ಕ್ಕೂ ಅಧಿಕ ರನ್ ಕಲೆ ಹಾಕಿದ್ದಾರೆ. ನಾಯಕರಾಗಿ ಸಚಿನ್ ತೆಂಡೂಲ್ಕರ್ (1997) ಹಾಗೂ ರಾಹುಲ್ ದ್ರಾವಿಡ್ (2006) ಅವರು ಮಾತ್ರ ಈ ಹಿಂದೆ ಇದೇ ಸಾಧನೆಯನ್ನು ಮಾಡಿದ್ದರು.

4,000 ಟೆಸ್ಟ್ ರನ್ ಗಳು

4,000 ಟೆಸ್ಟ್ ರನ್ ಗಳು

ವಿರಾಟ್ ಕೊಹ್ಲಿ ಅವರು 89 ಟೆಸ್ಟ್ ಪಂದ್ಯಗಳಿಂದ 4,000ರನ್ ಗಳಿಸಿದ್ದು, ಈ ಸಾಧನೆಯನ್ನು ತ್ವರಿತಗತಿಯಲ್ಲಿ ಮಾಡಿದ ಭಾರತದ ಆರನೇ ಭಾರತೀಯ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian skipper and batting masterclass Virat Kohli was awarded Man of the Match for his record breaking 235-run knock as India settled scores with England by winning fourth Test match here, Monday (Dec 12).
Please Wait while comments are loading...