ಮೊಹಮ್ಮದ್ ಶಮಿ ಗಾಯಾಳು, ಇಂಗ್ಲೆಂಡ್ ಏಕದಿನ, ಟಿ20ಗೆ ಇಲ್ಲ

Posted By: Ramesh
Subscribe to Oneindia Kannada

ನವದೆಹಲಿ, ಡಿಸೆಂಬರ್. 23 : ಮೊಣಕಾಲು ಗಾಯದಿಂದ ಬಳಲುತ್ತಿರುವ ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ಮುಂಬರು ಇಂಗ್ಲೆಂಡ್ ವಿರುದ್ಧದ ಏಕದಿನ ಹಾಗೂ ಟಿ-20 ಸರಣಿಯಿಂದ ದೂರವಿರಬೇಕಾಗಿದೆ.

ಜನವರಿ 15ರಿಂಧ ಸರಣಿ ಆರಂಭವಾಗಲಿದೆ. ಬೆಂಗಾಲ್ ವೇಗಿ ಶಮಿ ಅವರು ವಿಶಾಖ ಪಟ್ಟಣಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ವೇಳೆ ಬಲ ಮೊಣಕಾಲಿಗೆ ತೀವ್ರವಾಗಿ ಗಾಯ ಮಾಡಿಕೊಂಡಿದ್ದಾರು.

ಆದ್ದರಿಂದ ಇಂಗ್ಲೆಂಡ್ ವಿರುದ್ಧದ ಏಕದಿನ ಹಾಗೂ ಟಿ-20 ಸರಣಿಗೆ ಶಮಿ ಬದಲಿಗೆ ಮೂಲಗಳ ಪ್ರಕಾರ ಇಸಾಂತ್ ಶರ್ಮ ಅಥವಾ ಆಶಿಶ್ ನೆಹ್ರಾ ಅವರನ್ನು ಕಣಕ್ಕಿಳಿಸುವ ಸಂಭವವಿದೆ.

India Vs England: Mohammed Shami to miss ODI, T20I series due to injury

26 ವರ್ಷದ ಶಮಿ ಅವರು 2015ರಲ್ಲಿ ಆಸ್ಟ್ರೇಲಿಯ ವಿರುದ್ಧ ವಿಶ್ವಕಪ್ ಸೆಮಿ ಫೈನಲ್ ಪಂದ್ಯ ಆಡಿರುವುದು ಕೊನೆ ಪಂದ್ಯವಾಗಿದೆ. ಕಳೆದ ನ್ಯೂಜಿಲೆಂಡ್ ವಿರುದ್ಧ ಸರಣಿ ವೇಳೆ ಗಾಯಗೊಂಡಿದ್ದ ರೋಹಿತ್ ಶರ್ಮ ತಂಡದಿಂದ ದೂರ ಉಳಿದಿದ್ದರು.

ಇನ್ನು ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್ ತಂಡಕ್ಕೆ ಮರಳಿದ್ದಾರೆ. ಇಂಗ್ಲೆಂಡ್ ವಿರುದ್ಧ ತ್ರಿಶತಕ ಸಿಡಿಸಿದ್ದ ಕನ್ನಡಿಗ ಕರುಣ್ ನಾಯರ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಜಿಂಬ್ಬಾಬೆ ವಿರುದ್ಧ ಮೊದಲ ಏಕದಿನ ಪಂದ್ಯವನ್ನು ಆಡಿದ್ದ ನಾಯರ್ ಗೆ ಇಂಗ್ಲೆಂಡ್ ವಿರುದ್ಧ ಸ್ಥಾನ ನೀಡಲಾಗಿದೆ. ಆಂಗ್ಲರ ವಿರುದ್ದ ಕೇವಲ ಒಂದು ರನ್ ನಿಂದ ದ್ವೀಶತಕದಿಂದ ವಂಚಿರಾಗಿದ್ದ ಮತ್ತೊಬ್ಬ ಕನ್ನಡಿಗ ಕೆಎಲ್ ರಾಹುಲ್ ಆರಂಭಿಕ ಬ್ಯಾಟ್ಸ್ ಮನ್ ಆಗಿ ಸ್ಥಾನ ಪಡೆದಿದ್ದಾರೆ.

ಇಂಗ್ಲೆಂಡ್ ವಿರುದ್ಧದ 3ಏಕದಿನ 3 ಟಿ20 ಸರಣಿಗೆ ಭಾರತ ತಂಡವನ್ನು ಮಹೇಂದ್ರ ಸಿಂಗ್ ದೋನಿ ಮುನ್ನಡೆಸಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's pace spearhead Mohammed Shami has been ruled out of the upcoming ODI and T20I series against England, starting January 15.
Please Wait while comments are loading...