ಏಕದಿನ ಸರಣಿಯ ಕೆಲ ಪಂದ್ಯಗಳಿಗೆ ಜೋ ರೂಟ್ ಇಲ್ಲ!

Posted By:
Subscribe to Oneindia Kannada

ಬೆಂಗಳೂರು, ಜನವರಿ 02: ಇಂಗ್ಲೆಂಡಿನ ಅತ್ಯಂತ ಯಶಸ್ವಿ ಬ್ಯಾಟ್ಸ್ ಮನ್ ಜೋ ರೂಟ್ ಅವರು ಭಾರತ ವಿರುದ್ಧದ ಮುಂಬರುವ ಏಕದಿನ ಸರಣಿಯ ಕೆಲ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.

26 ವರ್ಷ ವಯಸ್ಸಿನ ಕ್ರಿಕೆಟರ್ ರೂಟ್ ಹಾಗೂ ಅವರ ಪತ್ನಿ ಕಾರಿ ಕೊಟರೆಲ್ ಅವರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 'ದಿ ಮೇಲ್' ನಲ್ಲಿ ಬಂದಿರುವ ವರದಿಯಂತೆ ರೂಟ್ ಅವರು ತಮ್ಮ ಪತ್ನಿ ಜತೆಗೆ ಇರಲು ಬಯಸಿದ್ದು, ಭಾರತಕ್ಕೆ ಜನವರಿ ಅಂತ್ಯಕ್ಕೆ ಬರುವ ನಿರೀಕ್ಷೆಯಿದೆ.

India Vs England: Joe Root to miss beginning of ODI series as partner expecting their first child

ಎಂಎಸ್ ಧೋನಿ ನೇತೃತ್ವದ ಟೀಂ ಇಂಡಿಯಾ ಹಾಗೂ ಇಯಾನ್ ಮಾರ್ಗನ್ ನೇತೃತ್ವದ ಇಂಗ್ಲೆಂಡ್ ತಂಡಗಳ ನಡುವೆ ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಹಾಗೂ 3 ಟಿ20ಐ ಪಂದ್ಯಗಳು ನಿಗದಿಯಾಗಿವೆ. ಏಕದಿನ ಪಂದ್ಯಗಳು ಜನವರಿ 15ರಿಂದ ಪುಣೆಯಲ್ಲಿ ಆರಂಭವಾಗಲಿವೆ.

ಇತ್ತೀಚೆಗೆ ಮುಕ್ತಾಯವಾದ ಇಂಗ್ಲೆಂಡ್ ಹಾಗೂ ಭಾರತ ನಡುವಿನ ಟೆಸ್ಟ್ ಸರಣಿಯಲ್ಲಿ ರೂಟ್ ಅವರು ಅತ್ಯಧಿಕ ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಆದರೆ, ಸರಣಿಯನ್ನು ಭಾರತ 4-0 ಅಂತರದಿಂದ ಗೆದ್ದುಕೊಂಡಿದೆ.

Merry Christmas from me and @ccotterell89 #oysterbox

A photo posted by Joe Root (@root66) on Dec 25, 2015 at 10:21am PST

ಟೆಸ್ಟ್ ಸರಣಿ ನಂತರ ಕ್ರಿಸ್ಮಸ್ ಆಚರಣೆಗಾಗಿ ಇಂಗ್ಲೆಂಡಿಗೆ ತೆರಳಿರುವ ಆಂಗ್ಲರ ತಂಡ ಗುರುವಾರದಂದು ಭಾರತಕ್ಕೆ ಬರಲಿದೆ. ಜೋ ರೂಟ್ ಅನುಪಸ್ಥಿತಿ ಬಗ್ಗೆ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ) ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India Vs England: England's star batsman Joe Root is likely to miss the starting games of the upcoming ODI series against India.
Please Wait while comments are loading...