ರಾಹುಲ್ ಕೈತಪ್ಪಿದ ದ್ವಿಶತಕ, ಶತಕದ ಹೊಸ್ತಿಲಲ್ಲಿ ಕರುಣ್

Written By: Ramesh
Subscribe to Oneindia Kannada

ಚೆನ್ನೈ, ಡಿಸೆಂಬರ್. 18 : ಕನ್ನಡಿಗ ಕೆಎಲ್ ರಾಹುಲ್ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಕೇವಲ ಒಂದು ರನ್ ನಿಂದ ತಮ್ಮ ಚೊಚ್ಚಲ ದ್ವಿಶತಕದಿಂದ ವಂಚಿತರಾದರು. 3ನೇ ದಿನದಾಟದ ಅಂತ್ಯಕ್ಕೆ ಭಾರತ 4 ವಿಕೆಟ್ ಕಳೆದುಕೊಂಡು 391 ರನ್ ಪೇರಿಸಿದೆ.

3ನೇ ದಿನವಾದ ಭಾನುವಾರ 16 ಬೌಂಡರಿ ಹಾಗೂ 3 ಸಿಕ್ಸರ್ ಗಳ ನೆರವಿನಿಂದ 199 ರನ್ ಗಳಿಸಿ ಚೊಚ್ಚಲ ದ್ವಿಶತಕದ ವಿಶ್ವಾಸದಲ್ಲಿದ್ದ ರಾಹುಲ್ ರಶೀದ್ ಅವರ ಬೌಲಿಂಗ್ ನಲ್ಲಿ ಬಟ್ಲರ್ ಗೆ ಕ್ಯಾಚ್ ನೀಡುವ ಮೂಲಕ ಕೇವಲ ಒಂದು ರನ್ ನಿಂದ ದ್ವಿಶಕ ವಂಚಿತರಾಗಿ ನಿರಾಸೆಯಿಂದ ಪೆವಿಲಿಯನ್ ನತ್ತ ನಡೆದರು.

India Vs England, 5th Test, LIVE, Day 3: Rahul slams brilliant 150, tough task ahead

ಟೀಂ ಇಂಡಿಯಾ ಮೂರನೇ ದಿನ ಭಾನುವಾರ 3ವಿಕೆಟ್ ಕಳೆದುಕೊಂಡು 300 ರನ್ ಗಳಿಸಿತು. ಒಟ್ಟಾರೆ ಭಾರತ 4 ವಿಕೆಟ್ ಕಳೆದುಕೊಂಡು 391 ರನ್ ಗಳಿಸಿದೆ.

ಕೊಹ್ಲಿ 15, ಪೂಜಾರ 16 ರನ್ ಗಳಿಸಿದ್ದಾರೆ. ಕನ್ನಡಿಗ ಕರಣ್ ನಾಯರ್ 71 ಹಾಗೂ ಮುರುಳಿ ವಿಜಯ್ 17 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Read in English: India score 391/4 on day 3
English summary
India reached 300 for the loss of three wickets on day three of the fifth and final Test against England here on Sunday (December 18).
Please Wait while comments are loading...