ಚೊಚ್ಚಲ ತ್ರಿಶತಕ ಬಾರಿಸಿದ ಕರುಣ್, ಭಾರತಕ್ಕೆ ಮುನ್ನಡೆ

Posted By:
Subscribe to Oneindia Kannada

ಚೆನ್ನೈ, ಡಿಸೆಂಬರ್ 19: ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ಕರ್ನಾಟಕದ ಕರುಣ್ ನಾಯರ್ ಆರ್ಭಟ, ಅಬ್ಬರಕ್ಕೆ ಚೇಪಾಕ್ ಸ್ಟೇಡಿಯಂನ ಪ್ರೇಕ್ಷಕರು ಹುಚ್ಚೆದ್ದು ಕುಣಿದಾಡಿದರು. 25 ವರ್ಷದ ಆಟಗಾರ ಕರುಣ್ ಅವರು ಚೊಚ್ಚಲ ತ್ರಿಶತಕ ಸಿಡಿಸಿ, ಹಲವು ದಾಖಲೆಗಳನ್ನು ಮುರಿದರು.

ವೀರೇಂದ್ರ ಸೆಹ್ವಾಗ್ ನಂತರ ತ್ರಿಶತಕ ಸಿಡಿಸಿದ ಎರಡನೇ ಆಟಗಾರ ಎಂಬ ಸಾಧನೆ ಕರುಣ್ ಹೆಸರಿನಲ್ಲಿ ಬರೆಯಲಾಗಿದೆ. 31 ಬೌಂಡರಿ, 4 ಸಿಕ್ಸರ್ ಸಿಡಿಸಿದ ನಾಯರ್ ಅವರು ಅತ್ಯಂತ ತ್ವರಿತ ಗತಿಯಲ್ಲಿ ತ್ರಿಶತಕ ಬಾರಿಸಿದ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.

India Vs England, 5th Test: Karun Nair slams maiden Test triple, becomes second Indian after Sehwag

ಈ ಮುಂಚೆ ದಿಲೀಪ್ ಸರ್ದೇಸಾಯಿ ಹಾಗೂ ವಿನೋದ್ ಕಾಂಬ್ಳಿ ಅವರು ಮೊದಲ ಟೆಸ್ಟ್ ಸರಣಿಯಲ್ಲೇ ತ್ರಿಶತಕ ಸಿಡಿಸಿದ್ದರು.

ಕರುಣ್ ನಾಯರ್ 303 ಅಜೇಯ ಹಾಗೂ ರಾಹುಲ್ ಅವರ 199 ರನ್ ನೆರವಿನಿಂದ ಭಾರತ 759/7, 190.4ಓವರ್ಸ್ ಮುನ್ನಡೆ 282ರನ್ ಗಳು. ಇಂಗ್ಲೆಂಡ್ ತಂಡ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ ನಾಲ್ಕನೇ ದಿನದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 12ರನ್.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karun Nair notched up his maiden Test triple hundred and became only the second Indian after Virender Sehwag to achieve the milestone.
Please Wait while comments are loading...