ಇಂಗ್ಲೆಂಡ್ ವಿರುದ್ಧ 4-0ರಲ್ಲಿ ಸರಣಿ ಜಯಿಸಿದ ಭಾರತ

Posted By:
Subscribe to Oneindia Kannada

ಚೆನ್ನೈ, ಡಿಸೆಂಬರ್ 20: ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಹಾಗೂ 75 ರನ್ ಗಳಿಂದ ಟೀಂ ಇಂಡಿಯಾ ಗೆದ್ದುಕೊಂಡಿದೆ.

ಸ್ಕೋರ್ ಕಾರ್ಡ್
ಈ ಮೂಲಕ ಐದು ಟೆಸ್ಟ್ ಪಂದ್ಯಗಳ ಸರಣಿಯನ್ನು 4-0 ರಲ್ಲಿ ವಶಪಡಿಸಿಕೊಂಡಿದೆ. ಈ ಗೆಲುವಿನ ಮೂಲಕ ವಿರಾಟ್ ಕೊಹ್ಲಿ ಪಡೆ 18 ಟೆಸ್ಟ್ ಪಂದ್ಯಗಳಿಂದ ಸೋಲು ಕಂಡಿಲ್ಲ. [ಗ್ಯಾಲರಿ]

India Vs England, 5th Test: India win by an innings and 75 runs, claim series 4-0

ಪಂದ್ಯದ ಅಂತಿಮ ದಿನವಾದ ಇಂದು ಇಂಗ್ಲೆಂಡ್ ತಂಡ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 207ರನ್ನಿಗೆ ಆಲೌಟ್ ಆಗುವ ಮೂಲಕ ಸೊಲೊಪ್ಪಿಕೊಂಡಿತು. ಬೌಲಿಂಗ್ ನಲ್ಲಿ ಮಿಂಚಿದ ಸ್ಪಿನ್ನರ್ ರವೀಂದ್ರ ಜಡೇಜ 7 ವಿಕೆಟ್ ಕಬಳಿಸಿದರು. [ಅಜರುದ್ದೀನ್ ದಾಖಲೆ ಸಮಕ್ಕೆ ನಿಂತ ವಿರಾಟ್ ಕೊಹ್ಲಿ]

ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 477ರನ್ ಸ್ಕೋರ್ ಮಾಡಿತ್ತು. ಇದಕ್ಕೆ ಉತ್ತರವಾಗಿ ಕರುಣ್ ನಾಯರ್ ಅಜೇಯ 303 ಹಾಗೂ ಕೆಎಲ್ ರಾಹುಲ್ ಅವರ 199ರನ್ ನೆರವಿನಿಂದ ಭಾರತ 759/7 ಸ್ಕೋರ್ ಮಾಡಿ ಡಿಕ್ಲೇರ್ ಮಾಡಿಕೊಂಡಿತ್ತು. ಇಂಗ್ಲೆಂಡ್ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 207ಸ್ಕೋರ್ ಮಾಡಿ ಸೋಲು ಕಂಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India Vs England, 5th Test: India win by an innings and 75 runs, claim series 4-0
Please Wait while comments are loading...