45 ವರ್ಷ ಹಳೆ ದಾಖಲೆ ಮುರಿಯಲು ಕೊಹ್ಲಿ ಸಜ್ಜು!

Posted By:
Subscribe to Oneindia Kannada

ಚೆನ್ನೈ, ಡಿಸೆಂಬರ್ 16: ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಮತ್ತೊಂದು ದಾಖಲೆಯ ಹಿಂದೆ ಬಿದ್ದಿದ್ದಾರೆ. ಮಾಜಿ ಕ್ರಿಕೆಟರ್ ಲಿಟ್ಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಅವರ ಹೆಸರಿನಲ್ಲಿರುವ 45 ವರ್ಷ ಹಳೆ ದಾಖಲೆಯನ್ನು ಕೊಹ್ಲಿ ಮುರಿಯುವ ಸಾಧ್ಯತೆಯಿದೆ.

5ನೇ ಟೆಸ್ಟ್ ಪಂದ್ಯದ ಸ್ಕೋರ್ ಕಾರ್ಡ್| ಸರಣಿಯ ಗ್ಯಾಲರಿ

ಚೆನ್ನೈ ಟೆಸ್ಟ್ ಪಂದ್ಯ ಶುಕ್ರವಾರ (ಡಿಸೆಂಬರ್ 16) ದಂದು ಆರಂಭವಾಗಿದ್ದು, ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಅಲಿಸ್ಟರ್ ಕುಕ್ ಅವರು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

India Vs England 5th Test, Chennai: Virat Kohli set to break 45-year-old record

1971ರಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಸರಣಿಯಲ್ಲೇ ಸುನಿಲ್ ಗವಾಸ್ಕರ್ ಅವರು 4 ಪಂದ್ಯ 8 ಇನ್ನಿಂಗ್ಸ್ ಗಳಿಂದ 774ರನ್ ಚೆಚ್ಚಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಗವಾಸ್ಕರ್ ಅವರ ಸಾಧನೆ ಇಂದಿಗೂ ಯಾರೂ ಅಳಿಸಿಲ್ಲ.

ಈಗ ವಿರಾಟ್ ಕೊಹ್ಲಿ ಅವರು 4 ಟೆಸ್ಟ್ ಪಂದ್ಯಗಳಿಂದ 640ರನ್ ಗಳಿಸಿದ್ದು, ಚೆನ್ನೈ ಟೆಸ್ಟ್ ಪಂದ್ಯದಲ್ಲಿ 135ರನ್ ಗಳಿಸಿದರೆ ಗವಾಸ್ಕರ್ ದಾಖಲೆ ಮುರಿಯಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಯನ್ನು ಭಾರತ 3-0 ಅಂತರದಿಂದ ಈಗಾಗಲೇ ಗೆದ್ದುಕೊಂಡಿದೆ.

ಟೆಸ್ಟ್ ಸರಣಿಯಲ್ಲಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್ ಮನ್ ಗಳು:
* 774 : ಸುನಿಲ್ ಗವಾಸ್ಕರ್ (Vs ವೆಸ್ಟ್ ಇಂಡೀಸ್, 1971)
* 732 : ಸುನಿಲ್ ಗವಾಸ್ಕರ್ (Vs ವೆಸ್ಟ್ ಇಂಡೀಸ್, 1978-79)
* 692: ಕೊಹ್ಲಿ (Vs ಆಸ್ಟ್ರೇಲಿಯಾ, 2014-15)
* 642 : ದಿಲೀಪ್ ಸರ್ದೇಸಾಯಿ (Vs ವೆಸ್ಟ್ ಇಂಡೀಸ್, 1971)
* 640 : ವಿರಾಟ್ ಕೊಹ್ಲಿ (Vs ಇಂಗ್ಲೆಂಡ್ 2016)

* ಗವಾಸ್ಕರ್ 774 ರನ್, 8 ಇನ್ನಿಂಗ್ಸ್ (4 ಶತಕ, 3 ಅರ್ಧಶತಕ, 154.80 ರನ್ ಸರಾಸರಿ, 220 ಗರಿಷ್ಠಮೊತ್ತ) ಭಾರತಕ್ಕೆ 1-0ರಲ್ಲಿ ಸರಣಿ ಜಯ.
* ಕೊಹ್ಲಿ 640 ರನ್, 7 ಇನ್ನಿಂಗ್ಸ್ (2 ಶತಕ, 2 ಅರ್ಧಶತಕ, 128ರನ್ ಸರಾಸರಿ, 235 ಗರಿಷ್ಠ ಮೊತ್ತ) ಭಾರತಕ್ಕೆ 3-0ರಲ್ಲಿ ಸರಣಿ ಜಯ.(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A record which has stood for 45 years could be broken by Virat Kohli during the 5th India-England Test at Chennai's MA Chidambaram Stadium.
Please Wait while comments are loading...