ಮುಂಬೈ ಟೆಸ್ಟ್ : ಸ್ಪಿನ್ ಮಾಂತ್ರಿಕ ಅಶ್ವಿನ್ ಗಳಿಸಿದ ದಾಖಲೆಗಳು

Posted By:
Subscribe to Oneindia Kannada

ಮುಂಬೈ, ಡಿಸೆಂಬರ್ 13: ಟೀಂ ಇಂಡಿಯಾದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಅವರು ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದು ಅಭಿಮಾನಿಗಳಿಗೆ ಥ್ರಿಲ್ ನೀಡಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಜಯಕ್ಕೆ ಅಶ್ವಿನ್ ಹೆಚ್ಚಿನ ಕೊಡುಗೆ ನೀಡಿದ್ದಲ್ಲದೆ ಅನೇಕ ದಾಖಲೆಗಳನ್ನು ಮುರಿದರು.

ನಾಲ್ಕನೇ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಹಾಗೂ 36ರನ್ ಗಳಿಂದ ಗೆದ್ದ ಭಾರತ, ಐದು ಟೆಸ್ಟ್ ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ತನ್ನದಾಗಿಸಿಕೊಂಡಿತು.[ರನ್ ಮಷಿನ್ ಕೊಹ್ಲಿ ಧೂಳಿಪಟ ಮಾಡಿದ ದಾಖಲೆಗಳು!]

30 ವರ್ಷ ವಯಸ್ಸಿನ ಆರ್ ಅಶ್ವಿನ್ ಅವರು 23 ಬಾರಿ ಟೆಸ್ಟ್ ಪಂದ್ಯಗಳಲ್ಲಿ 5 ವಿಕೆಟ್ ಗಳಿಸಿ ಮಾಜಿ ನಾಯಕ ಕಪಿಲ್ ದೇವ್ ಅವರ ದಾಖಲೆಯನ್ನ್ನು ಮುರಿದರು. ಎರಡನೇ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ಪಡೆದ ಅಶ್ವಿನ್ ಅವರು ಇಂಗ್ಲೆಂಡ್ ತಂಡ 196ಸ್ಕೋರಿಗೆ ಆಲೌಟ್ ಆಗುವಂತೆ ಮಾಡ, ಭಾರತಕ್ಕೆ ಜಯ ತಂದಿತ್ತರು.

ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಅಶ್ವಿನ್ ಅವರು 2016ರಲ್ಲಿ 70ಕ್ಕೂ ಅಧಿಕ ವಿಕೆಟ್ ಕಬಳಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅಶ್ವಿನ್ ದಾಖಲೆಗಳ ಬಗ್ಗೆ ಇನ್ನಷ್ಟು ಮುಂದೆ ಓದಿ...

ಕಪಿಲ್ ದೇವ್ ದಾಖಲೆ ಮುರಿದ ಅಶ್ವಿನ್

ಕಪಿಲ್ ದೇವ್ ದಾಖಲೆ ಮುರಿದ ಅಶ್ವಿನ್

24 ಬಾರಿ ಐದು ವಿಕೆಟ್ ಪಡೆಯುವ ಅಶ್ವಿನ್ ಅವರು ಟೀಂ ಇಂಡಿಯಾದ ಮಾಜಿ ನಾಯಕ ಕಪಿಲ್ ದೇವ್ ಅವರ 23 ವಿಕೆಟ್ ಗಳ ದಾಖಲೆಯನ್ನು ಮುರಿದರು.

ಮೊದಲ ಇನ್ನಿಂಗ್ಸ್ ನಲ್ಲಿ ಕಪಿಲ್ ದೇವ್ ದಾಖಲೆಯನ್ನು ಸಮಗೊಳಿಸಿದ್ದ ಅಶ್ವಿನ್ ಅವರು ಎರಡನೇ ಇನ್ನಿಂಗ್ಸ್ ನಲ್ಲಿ ದಾಖಲೆ ಮುರಿದರು.

7ನೇ ಬಾರಿ 10 ವಿಕೆಟ್

7ನೇ ಬಾರಿ 10 ವಿಕೆಟ್

ಮುಂಬೈ ಟೆಸ್ಟ್ ಪಂದ್ಯದಲ್ಲಿ 12 ವಿಕೆಟ್ ಗಳಿಸುವ ಮೂಲಕ ವೃತ್ತಿ ಬದುಕಿನಲ್ಲಿ ಒಂದು ಪಂದ್ಯದಲ್ಲಿ 10 ವಿಕೆಟ್ ಪಡೆದರು. ಟೀಂ ಇಂಡಿಯಾದ ಕೋಚ್ ಅನಿಲ್ ಕುಂಬ್ಳೆ ಮಾತ್ರ 10 ಬಾರಿ ಪಂದ್ಯವೊಂದರಲ್ಲಿ 10 ವಿಕೆಟ್ ಪಡೆದುಕೊಂಡಿದ್ದಾರೆ.

2016ರಲ್ಲಿ 71ವಿಕೆಟ್ ಕಿತ್ತಿರುವ ಅಶ್ವಿನ್

2016ರಲ್ಲಿ 71ವಿಕೆಟ್ ಕಿತ್ತಿರುವ ಅಶ್ವಿನ್

ಆರ್ ಅಶ್ವಿನ್ ಅವರು 2016ರಲ್ಲಿ 11 ಪಂದ್ಯಗಳಲ್ಲಿ 71 ವಿಕೆಟ್ ಗಳಿಸಿದ್ದಾರೆ. ಕಳೆದ ವರ್ಷ 62 ವಿಕೆಟ್ ಗಳನ್ನು ಕಬಳಿಸಿದ್ದರು.

2004ರಲ್ಲಿ ಅನಿಲ್ ಕುಂಬ್ಳೆ ಅವರು 74 ವಿಕೆಟ್ ಹಾಗೂ ಕಪಿಲ್ ದೇವ್ ಅವರು 1979ರಲ್ಲಿ 74, 75 ಹಾಗೂ 1983ರಲ್ಲಿ ಈ ಸಾಧನೆ ಮಾಡಿದ್ದರು.

ಆಲ್ ರೌಂಡರ್ ಆಟ

ಆಲ್ ರೌಂಡರ್ ಆಟ

ಕಪಿಲ್ ದೇವ್ ನಂತರ 500ಪ್ಲಸ್ ರನ್ ಹಾಗೂ 50 ವಿಕೆಟ್ ಗಳನ್ನು ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಗಳಿಸಿದ ಸಾಧನೆಯನ್ನು ಆರ್ ಅಶ್ವಿನ್ ಮಾಡಿದ್ದಾರೆ. ಕಪಿಲ್ ಅವರು 1979ರಲ್ಲಿ 619ರನ್ ಹಾಗು 74ವಿಕೆಟ್ ಗಳಿಸಿದ್ದರು. 1983ರಲ್ಲಿ 579ರನ್ ಹಾಗೂ 75ವಿಕೆಟ್ ಗಳಿಕೆ.

ತವರು ನೆಲದಲ್ಲಿ ಭರ್ಜರಿ ಪ್ರದರ್ಶನ

ತವರು ನೆಲದಲ್ಲಿ ಭರ್ಜರಿ ಪ್ರದರ್ಶನ

2016ರಲ್ಲಿ 11 ಟೆಸ್ಟ್ ಪಂದ್ಯದಲ್ಲಿ 53ವಿಕೆಟ್ ಪಡೆದಿದ್ದು, ಒಂದು ಕ್ಯಾಲೆಂಡರ್ ವರ್ಷದಲ್ಲಿ ಸ್ಪಿನ್ನರ್ ಒಬ್ಬರ ಉತ್ತಮ ಸಾಧನೆಯಾಗಿದೆ. ಸ್ಪಿನ್ನರ್ ಇ ಪ್ರಸನ್ನ ಅವರು 1969ರಲ್ಲಿ 46 ವಿಕೆಟ್ ಗಳಿಸಿದ್ದು ಇಲ್ಲಿ ತನಕದ ಉತ್ಯ್ತಮ ಸಾಧನೆಯಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India's frontline bowler Ravichandran Ashwin on Monday (December 12) produced another brilliant performance with the ball as India thrashed England by whopping an innings and 36 runs in the fourth Test match at Wankhede Stadium.
Please Wait while comments are loading...