4ನೇ ಟೆಸ್ಟ್ ಗೆ ಪಾರ್ಥಿವ್ ಇನ್, ಸಹಾ ಔಟ್: ಬಿಸಿಸಿಐ ಸ್ಪಷ್ಟನೆ

Written By: Ramesh
Subscribe to Oneindia Kannada

ಮುಂಬೈ, ಡಿಸೆಂಬರ್. 06 : ಗಾಯಾಳುವಾಗಿರುವ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರು ಇನ್ನೂ ಗುಣಮುಖರಾಗದ ಕಾರಣ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಗೆ ಅಲಭ್ಯರಾಗಿದ್ದಾರೆ.

ಸಹಾ ಅವರು ಎಡ ತೊಡೆಯ ನೋವಿನಿಂದ ಬಳಲುತ್ತಿದ್ದು. ಇದರಿಂದ ಸಹಾ ಅವರಿಗೆ ವಾಂಖೇಡೆ ಸ್ಟೇಡಿಯಂನಲ್ಲಿ ಡಿ.8ರ ಇಂಗ್ಲೆಂಡ್‌ ವಿರುದ್ಧದ ನಾಲ್ಕನೇ ಟೆಸ್ಟ್‌ ಪಂದ್ಯದಿಂದ ವಿಶ್ರಾಂತಿ ನೀಡಲಾಗಿದೆ ಎಂದು ಮಂಗಳವಾರ ಭಾರತೀಯ ಕ್ರಿಕೆಟ್ ಮಂಡಳಿ(ಬಿಸಿಸಿಐ) ಸ್ಪಷ್ಟಪಡಿಸಿದೆ. [ಜಯಾಗೆ ಹೃದಯ ಸ್ಥಂಭನ: ಚೆನ್ನೈ ಟೆಸ್ಟ್ ಸ್ಥಳಾಂತರ?]

India Vs England 4th Test: Parthiv Patel to play, Wriddhiman Saha ruled out

ಮೊಹಾಲಿಯಲ್ಲಿ ನಡೆದಿದ್ದ 3ನೇ ಟೆಸ್ಟ್ ಪಂದ್ಯಕ್ಕೂ ವೃದ್ದಿಮಾನ್ ಸಹಾ ಅವರು ಅಲಭ್ಯರಾಗಿದ್ದರು. ಅವರ ಬದಲಿಗೆ ಪಾರ್ಥಿವ್ ಪಟೇಲ್ ಅವರು ವಿಕೆಟ್ ಕೀಪಿಂಗ್ ಕಾರ್ಯನಿರ್ವಹಿಸಿದರು. 4ನೇ ಟೆಸ್ಟ್ ನಿಂದಲೂ ಸಹಾ ದೂರ ಉಳಿಯಲಿದ್ದು. ಅವರ ಸ್ಥಾನಕ್ಕೆ ಪಾರ್ಥಿವ್ ಪಟೇಲ್ ಮುಂದುವರೆಯಲಿದ್ದಾರೆ.

2ನೇ ಟೆಸ್ಟ್ ಪಂದ್ಯದ ವೇಳೆ ಎಡ ತೊಡೆಯ ನೋವಿನಿಂದ ಬಳಲುತಿದ್ದು ಅವರು ಇನ್ನೂ ಅವರು ನೋವಿನಿಂದ ಚೇತಿರಿಸಿಕೊಂಡಿಲ್ಲ. ಹಾಗಾಗಿ ಅವರಿಗೆ ಇನ್ನು ವಿಶ್ರಾಂತಿ ಅಗತ್ಯವಿದೆ ಎಂದು ಬಿಸಿಸಿಐ ಮೆಡಿಕಲ್ ತಂಡ ಮಂಗಳವಾರ (ಡಿಸೆಂಬರ್ 6) ತಿಳಿಸಿದೆ.

8 ವರ್ಷಗಳ ಬಳಿಕ ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕಂಡಿರುವ 31 ವರ್ಷದ ಪಾರ್ಥಿವ್ ಪಟೇಲ್ ಮೊಹಾಲಿಯ 3ನೇ ಟೆಸ್ಟ್ ನಲ್ಲಿ 42 ಮತ್ತು 67 ರನ್ ಬಾರಿಸಿದ್ದರು. ಆ ಪಂದ್ಯದಲ್ಲಿ ಭಾರತ ಆಂಗ್ಲರನ್ನು 8 ವಿಕೆಟ್ ಗಳಿಂದ ಮಣಿಸಿತು.

ಒಟ್ಟು 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 3 ಟೆಸ್ಟ್ ನಲ್ಲಿ ಒಂದು ಡ್ರಾನಲ್ಲಿ ಅಂತ್ಯ ಕಂಡಿದ್ದರೆ. ಇನ್ನು 2ನೇ ಮತ್ತು 3ನೇ ಟೆಸ್ಟ್ ಪಂದ್ಯವನ್ನು ಗೆದ್ದು ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

4ನೇ ಟೆಸ್ಟ್ ಮುಂಬೈನಲ್ಲಿ ಡಿ.8ರಂದು ನಡೆಯಲಿದೆ. ಕೊನೆ 5ನೇ ಟೆಸ್ಟ್ ಪಂದ್ಯ ಡಿಸೆಂಬರ್ 16ರಂದು ಚೆನ್ನೈನಲ್ಲಿ ನಡೆಯಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Board of Control for Cricket in India (BCCI) today (December 6) confirmed that wicketkeeper Wriddhiman Saha will miss the 4th India-England Test starting here at Wankhede Stadium on Thursday (December 8).
Please Wait while comments are loading...