ಟೆಸ್ಟ್ : ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 3-0 ಸರಣಿ ಜಯ

Posted By:
Subscribe to Oneindia Kannada

ಮುಂಬೈ, ಡಿಸೆಂಬರ್ 12: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಹಾಗೂ 36 ರನ್ ಗಳಿಂದ ಭಾರತ ಗೆದ್ದುಕೊಂಡಿದೆ. ಪಂದ್ಯದ ಐದನೇ ದಿನವಾದ ಸೋಮವಾರ ಇಂಗ್ಲೆಂಡ್ ತಂಡ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 195ರನ್ ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿದೆ.

ಈ ಮೂಲಕ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ಭಾರತ ಗೆದ್ದುಕೊಂಡಿದೆ. ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 400ರನ್ ಗಳಿಸಿತ್ತು.

India Vs England, 4th Test: India win by an innings and 36 runs, clinch series 3-0

ಇದಕ್ಕೆ ಉತ್ತರವಾಗಿ ಭಾರತ ತನ್ನ ಮೊದಲ ಇನ್ನಿಂಗ್ಸ್ ವಿರಾಟ್ ಕೊಹ್ಲಿ ದ್ವಿಶತಕ(235) ಹಾಗೂ ಜಯಂತ್ ಯಾದವ್ ಶತಕ(104ರನ್)ದ ನೆರವಿನಿಂದ 631ರನ್ ಸ್ಕೋರ್ ಮಾಡಿತ್ತು. ಇಂಗ್ಲೆಂಡ್ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 55.3 ಓವರ್ ಗಳಲ್ಲಿ 195 ರನ್ನಿಗೆ ಆಲೌಟ್ ಆಗಿ ಸೋಲು ಕಂಡಿದೆ.

ಇಂಗ್ಲೆಂಡ್ ಪರ ಜೋ ರೂಟ್ 77 ಹಾಗೂ ಜಾನಿ ಬೈರೊಸ್ಟೋ 51 ರನ್ ಗಳಿಸಿ ಪ್ರತಿರೋಧ ಒಡ್ಡಿದ್ದರು.ಆದರೆ, ಆರ್ ಅಶ್ವಿನ್ 55/6 ಹಾಗೂ ರವೀಂದ್ರ ಜಡೇಜ 63/2 ವಿಕೆಟ್ ಗಳಿಸಿ ಭಾರತಕ್ಕೆ ಜಯ ತಂದಿತ್ತರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India Vs England, 4th Test: India win by an innings and 36 runs, clinch series 3-0
Please Wait while comments are loading...