ಕೊಹ್ಲಿ-ಜಯಂತ್ ಜುಗಲ್ ಬಂದಿ, ಭಾರತದ ಹಿಡಿತದಲ್ಲಿ 4ನೇ ಟೆಸ್ಟ್!

Written By: Ramesh
Subscribe to Oneindia Kannada

ಮುಂಬೈ, ಡಿಸೆಂಬರ್. 11 : ವಿರಾಟ್ ಕೊಹ್ಲಿ ಹಾಗೂ ಜಯಂತ್ ಯಾದವ್ ಜೋಡಿ ಆಂಗ್ಲ ಬೌಲರ್ ಗಳನ್ನು ಬೆಂಡೆತ್ತಿದ್ದಾರೆ. ವಿರಾಟ್ ತಮ್ಮ 3ನೇ ದ್ವೀಶತಕ ಬಾರಿಸಿ ಸಂಭ್ರಮಿಸಿದರೆ, ಜಯಂತ್ ಯಾದವ್ ತಮ್ಮ ಟೆಸ್ಟ್ ಜೀವಮಾನದ ಮೊದಲ ಶತಕ ಬಾರಿಸಿ ಸಂಭ್ರಮಿಸಿದರು.

ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧ 4ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 400 ರನ್ ಗಳಿಗೆ ಆಲೌಟ್ ಮಾಡಿ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 631 ರನ್ ಗಳಿಸಿ 231 ರನ್‌ಗಳ ಮುನ್ನಡೆ ಸಾಧಿಸಿದೆ.

ಎಡನೇ ಇನ್ನಿಂಗ್ಸ್ ಆರಂಭಿಸಿದ ಆಂಗ್ಲರು 4ನೇ ದಿನದಾಟಂತ್ಯಕ್ಕೆ 186 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಪಂದ್ಯ ಕಳೆದುಕೊಳ್ಳುವ ಸ್ಥತಿಯಲ್ಲಿದೆ. ಸೋಮವಾರ ಒಂದು ದಿನದ ಆಟ ಮಾತ್ರ ಬಾಕಿ ಇದೆ.

India Vs England, 4th Test, Day 4: Kohli's double ton puts India in driver's seat

ನಾಲ್ಕನೇ ದಿನದಾಟ ಆರಂಭಿಸಿದ ವಿರಾಟ್‌ ಕೊಹ್ಲಿ 16 ನೇ ಶತಕ ಸಿಡಿಸುವ ಮೂಲಕ ಇಂಗ್ಲೆಂಡ್‌ ವಿರುದ್ಧ 235 ರನ್‌ ಗಳಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಕೊಹ್ಲಿ ಗಳಿಸಿದ ಗರಿಷ್ಠ ರನ್‌ ಇದಾಗಿದೆ.

8ನೇ ವಿಕೆಟ್ ಗೆ ಜೊತೆಯಾದ ನಾಯಕ ಕೊಹ್ಲಿ ಮತ್ತು ಜಯಂತ್ ಜೋಡಿ 241 ರನ್ ಗಳನ್ನು ಕಲೆಹಾಕಿ ಇಂಗ್ಲೆಂಡ್ ಬೌಲರ್ ಗಳ ಬೆವರಿಸಿಳಿದರು. 104 ರನ್ ಗಳಿಸಿ ಉತ್ತಮ ಬ್ಯಾಟಿಂಗ್ ಮಾಡುತಿದ್ದ ಜಯಂತ್ ರಶೀದ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು, ಇನ್ನು ವಿರಾಟ್ ಕೊಹ್ಲಿ 235 ರನ್ ಗಳಿಸಿದ್ದಾಗ ಹೋಕ್ಸ್ ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.

ಇಂಗ್ಲೆಂಡ್ ಪರ ರಶೀದ್ 4, ರೂಟ್ 2, ಅಲಿ 2, ಹೋಕ್ಸ್ 1 ವಿಕೆಟ್ ಪಡೆದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
England are on the brink of defeat, reduced to 182/6 in their second innings and still trailing by 49 runs, against India at stumps on the fourth day of the fourth cricket Test here on Sunday.
Please Wait while comments are loading...