3ನೇ ಟೆಸ್ಟ್ :ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 8 ವಿಕೆಟ್ ಗಳ ಜಯ

Posted By:
Subscribe to Oneindia Kannada

ಮೊಹಾಲಿ, ನವೆಂಬರ್ 29: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯವನ್ನು ಗೆಲ್ಲಲು ಟೀಂ ಇಂಡಿಯಾಕ್ಕೆ 103ರನ್ ಟಾರ್ಗೆಟ್ ನೀಡಲಾಗಿತ್ತು. 2 ವಿಕೆಟ್ ಕಳೆದುಕೊಂಡು 2೦.2 ಓವರ್ ಗಳಲ್ಲಿ 104/2 ಸ್ಕೋರ್ ಮಾಡಿದ ಭಾರತ ಪಂದ್ಯವನ್ನು ಗೆದ್ದುಕೊಂಡಿದೆ. ಈ ಮೂಲಕ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಕಾಯ್ದುಕೊಂಡಿದೆ.

ಭಾರತದ ಪರ ಮುರಳಿ ವಿಜಯ್ ಡಕ್ ಔಟಾದರೆ, ಪಾರ್ಥೀವ್ ಪಟೇಲ್ ಅಜೇಯ 67ರನ್(54 ಎಸೆತ, 11X4, 1X6) ಬಾರಿಸಿದರು. ಪೂಜಾರಾ 25ರನ್ ಗಳಿಸಿ ಔಟಾದರೆ, ನಾಯಕ ಕೊಹ್ಲಿ ಗೆಲುವಿನ ದಡ ಸೇರಿಸಿದರು.

Parthiv Patel

ಪಂದ್ಯದ ನಾಲ್ಕನೇ ದಿನದಾಟದಲ್ಲಿ ಇಂಗ್ಲೆಂಡ್ ತಂಡ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 236 ಸ್ಕೋರಿಗೆ ಆಲೌಟ್ ಆಗಿದೆ. ಮೊದಲ ಇನ್ನಿಂಗ್ಸ್ ನಲ್ಲಿ 283ರನ್ ಸ್ಕೋರ್ ಮಾಡಿತ್ತು. ಇದಕ್ಕೆ ಉತ್ತರವಾಗಿ ಭಾರತ 417ರನ್ ಗಳಿಸಿ ಮುನ್ನಡೆ ಪಡೆದುಕೊಂಡಿತ್ತು.

India vs England, LIVE Cricket, 3rd Test, Day 4: Breaking - India need 103 to win 3rd Test Vs England

ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ : ಆರಂಭಿಕ ಆಟಗಾರ ಜೋ ರೂತ್ 78ರನ್ ಹಾಗೂ ಹಸೀಸ್ ಹಮೀದ್ ಅಜೇಯ 59ರನ್ ಗಳಿಸಿದ್ದು ಬಿಟ್ಟರೆ ಮಿಕ್ಕವರು ಹೆಚ್ಚು ರನ್ ಪೇರಿಸಲು ಯತ್ನಿಸಲಿಲ್ಲ. ವೋಕ್ಸ್ 30ರನ್ ಗಳಿಸಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.ಭಾರತ ಪರ ಆರ್ ಅಶ್ವಿನ್ 81ಕ್ಕೆ3 ಪಡೆದರೆ, ಮೊಹಮ್ಮದ್ ಶಮಿ, ರವೀಂದ್ರ ಜಡೇಜ ಹಾಗೂ ಜಯಂತ್ ಯಾದವ್ ತಲಾ 2 ವಿಕೆಟ್ ಪಡೆದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian spinners removed night watchman Gareth Batty and dangerous Jos Buttler and Joe Root in the morning session to put England on the backfoot on fourth day of the third Test match at Mohali on Tuesday (Nov 29).
Please Wait while comments are loading...