ಚಾಹಲ್ ಗೆ 6 ವಿಕೆಟ್, ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಸರಣಿ 2-1 ಜಯ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 01: ಸುರೇಶ್ ರೈನಾ, ಎಂಎಸ್ ಧೋನಿ ಅವರ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ ಬೆಂಗಳೂರಿನ 3ನೇ ಟಿ20 ಪಂದ್ಯದಲ್ಲಿ 202/6 ಸ್ಕೋರ್ ಮಾಡಿತ್ತು. ಉತ್ತಮವಾಗಿ ರನ್ ಚೇಸ್ ಮಾಡುತ್ತಿದ್ದ ಇಂಗ್ಲೆಂಡ್, ದಿಢೀರ್ ಕುಸಿತ ಕಂಡು 127 ರನ್ ಗಳಿಗೆ ಆಲೌಟ್ ಆಗಿ ಪಂದ್ಯ ಹಾಗೂ ಸರಣಿಯನ್ನು ಕಳೆದುಕೊಂಡಿದೆ. ಕೊಹ್ಲಿ 2-1ರಲ್ಲಿ ಟಿ20ಸರಣಿ ಗೆದ್ದುಕೊಂಡಿದ್ದಾರೆ.

ಇಂಗ್ಲೆಂಡ್ ರನ್ ಚೇಸ್: ಜಾಸನ್ ರಾಯ್ 23 ಎಸೆತಗಳಲ್ಲಿ 32ರನ್ ಗಳಿಸಿದರೆ, ಸ್ಯಮ್ ಬಿಲ್ಲಿಂಗ್ ಶೂನ್ಯ ಸುತ್ತಿದರು. ಜೋ ರೂಟ್ 37 ಎಸೆತಗಳಲ್ಲಿ 42ರನ್, ನಾಯಕ ಮಾರ್ಗನ್ 21 ಎಸೆತಗಳಲ್ಲಿ 40ರನ್ ಗಳಿಸಿ ಉತ್ತಮ ಜೊತೆಯಾಟ ಪ್ರದರ್ಶಿಸಿ ಗೆಲುವಿನ ಆಸೆ ಚಿಗುರಿಸಿದರು. ಆದರೆ, ಲೆಗ್ ಸ್ಪಿನ್ನರ್ಯಜುವೇಂದ್ರ ಚಾಹಲ್ 25 ರನ್ನಿಗೆ 6 ವಿಕೆಟ್ ಕಿತ್ತು ಆಂಗ್ಲರ ಓಟಕ್ಕೆ ಬ್ರೇಕ್ ಹಾಕಿದರು. ಬೂಮ್ರಾ 3 ವಿಕೆಟ್ ಕಬಳಿಸಿದರು.

ಇಂಡಿಯಾ ಇನ್ನಿಂಗ್ಸ್ : ನಾಯಕ ವಿರಾಟ್ ಕೊಹ್ಲಿ 2 ರನ್ ಔಟಾದರೆ, ಲೋಕೇಶ್ ರಾಹುಲ್ 18 ಎಸೆತಗಳಲ್ಲಿ 22ರನ್ ಗಳಿಸಿದರು. ಸುರೇಶ್ ರೈನಾ 45 ಎಸೆತಗಳಲ್ಲಿ 63ರನ್ ಹಾಗೂ ಎಂಎಸ್ ಧೋನಿ 36 ಎಸೆತಗಳಲ್ಲಿ 56 ರನ್, ಯುವರಾಜ್ ಸಿಂಗ್ 10 ಎಸೆತಗಳಲ್ಲಿ 27 ರನ್, ಹಾರ್ದಿಕ್ ಪಾಂಡ್ಯ 4 ಎಸೆತಗಳಲ್ಲಿ 11ರನ್ ಗಳಿಸಿ ತಂಡದ ಮೊತ್ತವನ್ನು 202/6ಕ್ಕೇರಿಸಿದರು.

Rishab Panth

ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಅವರು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಟೀಂ ಇಂಡಿಯಾದ ಆಡುವ ‍XI ನಲ್ಲಿ ಮನೀಶ್ ಪಾಂಡೆ ಬದಲಿಗೆ 19 ವರ್ಷ ವಯಸ್ಸಿನ ವಿಕೆಟ್ ಕೀಪರ್ ರಿಷಬ್ ಪಂತ್ ಅವರು ತಂಡ ಸೇರಿದರು.

India Vs England, 3rd T20I: Raina, Dhoni fifties power India to 202/6

ಭಾರತ: ವಿರಾಟ್ ಕೊಹ್ಲಿ(ನಾಯಕ), ಕೆಎಲ್ ರಾಹುಲ್, ಸುರೇಶ್ ರೈನಾ, ಯುವರಾಜ್ ಸಿಂಗ್, ಎಂಎಸ್ ಧೋನಿ(ವಿಕೆಟ್ ಕೀಪರ್) , ಹಾರ್ದಿಕ್ ಪಾಂಡ್ಯ, ಅಮಿತ್ ಮಿಶ್ರಾ, ಜಸ್ಪ್ರೀತ್ ಬೂಮ್ರಾ, ಅಶೀಶ್ ನೆಹ್ರಾ, ಯಜುವೇಂದ್ರ ಚಾಹಲ್.

ಇಂಗ್ಲೆಂಡ್: ಇಯಾನ್ ಮಾರ್ಗನ್ (ನಾಯಕ), ಜಾಸನ್ ರಾಯ್, ಸ್ಯಾಮ್ ಬಿಲ್ಲಿಂಗ್ಸ್, ಜೂ ರೂಟ್ಸ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್, ಮೋಯಿನ್ ಅಲಿ, ಕ್ರಿಸ್ ಜೋರ್ಡನ್, ಲಿಯಾಮ್ ಪ್ಲಂಕೆಟ್, ಟೈಮಲ್ ಮಿಲ್ಸ್, ಅದಿಲ್ ರಶೀದ್ (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
3rd T20I: Yuzvendra Chahal's six for helps India thrash England by 75 runs. England skipper Eoin Morgan won his third toss in a row and elected to chase against India in the third Twenty20 international match against India here on Wednesday (February 1).
Please Wait while comments are loading...