2ನೇ ಟಿ20: ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾಕ್ಕೆ ರೋಚಕ ಜಯ

Posted By:
Subscribe to Oneindia Kannada

ನಾಗ್ಪುರ, ಜನವರಿ 29: 2ನೇ ಟಿ20 ಗೆಲ್ಲಲು ಇಂಗ್ಲೆಂಡಿಗೆ ಗೆಲ್ಲಲು 145 ರನ್ ಟಾರ್ಗೆಟ್ ನೀಡಲಾಗಿತ್ತು. ಜೋ ರೂಟ್, ಬೆನ್ ಸ್ಟೋಕ್ಸ್ ಹಾಗೂ ಜೋಸ್ ಬಟ್ಲರ್ ಉತ್ತಮ ಬ್ಯಾಟಿಂಗ್ ಮೂಲಕ ಇಂಗ್ಲೆಂಡ್ ಗುರಿಯ ಹತ್ತಿರಕ್ಕೆ ತಲುಪಿತು. ಕೊನೆ ಓವರ್ ನಲ್ಲಿ 8 ರನ್ ಬೇಕಿತ್ತು. ಆದರೆ, ಬೂಮ್ರಾ ಕೊನೆ ಓವರ್ ನಲ್ಲಿ ಇಂಗ್ಲೆಂಡ್ ಆಟಗಾರರನ್ನು ನಿಯಂತ್ರಿಸುವಲ್ಲಿ ಸಫಲರಾದರು.

ಅಂತಿಮವಾಗಿ ಟೀಂ ಇಂಡಿಯಾ 5ರನ್ ಗಳಿಂದ ರೋಚಕ ಜಯ ದಾಖಲಿಸಿತು.ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿ ಈಗ 1-1ರಲ್ಲಿ ಸಮನಾಗಿದ್ದು, ಫೆ.1 ರಂದು ಬೆಂಗಳೂರಿನಲ್ಲಿ ಅಂತಿಮ ಹಣಾಹಣಿ ನಡೆಯಲಿದೆ.[ಬೆಂಗಳೂರಿನ ಟಿ20 ಪಂದ್ಯಕ್ಕೆ ಟಿಕೆಟ್ ಸೋಲ್ಡ್ ಔಟ್]

ಮೊದಲ ಎಸೆತದಲ್ಲೇ ಜೋ ರೂಟ್ ಪ್ಲಂಬ್ ಆಗಿ ಔಟ್ ಆದರು. ಆದರೆ, ಬ್ಯಾಟಿನ ಅಂಚಿಗೆ ಚೆಂಡು ತಾಗಿ ಪ್ಯಾಡಿಗೆ ಬಡಿದಿತ್ತು, ಇಂಗ್ಲೆಂಡ್ ಪರ ಜಾಸನ್ ರಾಯ್ 10, ಬಿಲ್ಲಿಂಗ್ 12, ನಾಯಕ ಮಾರ್ಗನ್ 17ರನ್, ಬೆನ್ ಸ್ಟೋಕ್ಸ್ 38, ಬಟ್ಲರ್ 15 ರನ್ ಗಳಿಸಿ ಔಟಾದಾಗ 2 ಎಸೆತಗಳಲ್ಲಿ 7ರನ್ ಬೇಕಿತ್ತು.

 India score 144/8

ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಕ್ಕೆ ನಾಯಕ ವಿರಾಟ್ ಕೊಹ್ಲಿ ಹಾಗೂ ಲೋಕೇಶ್ ರಾಹುಲ್ ಅವರು ಉತ್ತಮ ಆರಂಭ ತಂದರು. ನಾಯಕ ಕೊಹ್ಲಿ ಅವರು 15 ಎಸೆತಗಳಲ್ಲಿ 21ರನ್ ಗಳಿಸಿ ಕ್ರಿಸ್ ಜೋರ್ಡನ್ ಅವರಿಗೆ ಬಲಿಯಾದರು.

ರಾಹುಲ್ ಉತ್ತಮ ಪ್ರದರ್ಶನ: ಸರಣಿಯಲ್ಲಿ ಮೊದಲ ಬಾರಿ ಉತ್ತಮ ಪ್ರದರ್ಶನ ನೀಡಿದರೆ 47 ಎಸೆತಗಳಲ್ಲಿ 71(6 ಬೌಂಡರಿ, 2 ಸಿಕ್ಸರ್) ಗಳಿಸಿ ರನ್ ಗತಿ ಹೆಚ್ಚಿಸಿದರು. ರೈನಾ ಹಾಗೂ ಯುವರಾಜ್ ವೇಗವಾಗಿ ಪೆವಿಲಿಯನ್ ತಲುಪಿದರು. ಮನೀಶ್ ಪಾಂಡೆ 26 ಎಸೆತಗಳಲ್ಲಿ 30 ರನ್ ಗಳಿಸಿದರೂ ರನ್ ಗತಿ ಹೆಚ್ಚಿಸಲಿಲ್ಲ. 20 ಓವರ್ ಗಳಲ್ಲಿ 144/8 ಸ್ಕೋರ್ ಮಾಡಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
2nd T20I, Nagpur: India win by 5 wickets level series 1-1. England produced another brilliant bowling performance to restrict India to 144/8.But England able to score 139/6. 3 match series tied at 1-1.
Please Wait while comments are loading...