ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 2-0 ರಲ್ಲಿ ಸರಣಿ ಜಯ

Posted By:
Subscribe to Oneindia Kannada

ಕಟಕ್, ಜನವರಿ 19: ಇಲ್ಲಿನ ಬಾರಬತಿ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಟೀಂ ಇಂಡಿಯಾ 15 ರನ್ ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ನಾಯಕನಾಗಿ ವಿರಾಟ್ ಕೊಹ್ಲಿ ಅವರು ಮೊದಲ ಸರಣಿಯನ್ನು 2-0 ಅಂತರದಲ್ಲಿ ಜಯಿಸಿದ್ದಾರೆ.

ಹಿರಿಯ ಆಟಗಾರರಾದ ಯುವರಾಜ್ ಸಿಂಗ್ ಹಾಗೂ ಎಂಎಸ್ ಧೋನಿ ಅವರ ಶತಕ ಬಾರಿಸಿ ತಂಡದ ಮೊತ್ತವನ್ನು 50 ಓವರ್ ಗಳಲ್ಲಿ 381/6 ಕ್ಕೇರಿಸಿದ್ದರು. [ಸಚಿನ್ ಸಾಲಿನಲ್ಲಿ ನಿಂತ ಶತಕ ವೀರ ಎಂಎಸ್ ಧೋನಿ]

ಉತ್ತಮವಾಗಿ ಚೇಸ್ ಮಾಡಿದ ಇಂಗ್ಲೆಂಡ್ ತಂಡಕ್ಕೆ ನಾಯಕ ಇಯಾನ್ ಮಾರ್ಗನ್ ಅವರು ಆಸರೆಯಾದರು. ಭರ್ಜರಿ ಶತಕ ಬಾರಿಸಿದ ಮಾರ್ಗನ್ ಅವರು ತಂಡಕ್ಕೆ ಜಯ ತಂದುಕೊಡುವಲ್ಲಿ ವಿಫಲರಾದರು. ಅಂತಿಮವಾಗಿ ಇಂಗ್ಲೆಂಡ್ ತಂಡ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 366ರನ್ ಮಾತ್ರ ಗಳಿಸಲು ಸಾಧ್ಯವಾಯಿತು.

Yuvraj


ಇಂಗ್ಲೆಂಡ್ ಪರ 73 ಎಸೆತಗಳಲ್ಲಿ 83 ರನ್ ಹಾಗೂ ಜೋ ರೂಟ್ 54 ಹಾಗೂ ಇಯಾನ್ ಮಾರ್ಗನ್ 81 ಎಸೆತಗಳಲ್ಲಿ 102 ರನ್ ಮತ್ತು ಮೊಯಿನ್ ಅಲಿ 43 ಎಸೆತಗಳಲ್ಲಿ 55 ರನ್ ಗಳಿಸಿ ಪ್ರತಿರೋಧ ವ್ಯಕ್ತಪಡಿಸಿದರು.[14ನೇ ಶತಕ ಬಾರಿಸಿದ ಯುವರಾಜ್ ಗೆ ಟ್ವೀಟ್ ಶಭಾಷ್!]

ಆರಂಭವಾದ 2ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಟಾಸ್ ಗೆದ್ದಿದ್ದಾರೆ. ಟಾಸ್ ಗೆದ್ದರೂ ಮಾರ್ಗನ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

MS Dhoni

ಟೀಂ ಇಂಡಿಯಾ ಮೊದಲ ಮೂರು ವಿಕೆಟ್(ಧವನ್, ರಾಹುಲ್ ಹಾಗೂ ಕೊಹ್ಲಿ) ಕಳೆದುಕೊಂಡ ಬಳಿಕ ಧೋನಿ ಹಾಗೂ ಯುವರಾಜ್ ಅವರ ಬ್ಯಾಟಿಂಗ್ ನೆರವಿನಿಂದ ಸುಧಾರಣೆ ಕಂಡಿದೆ.

3 ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆದುಕೊಂಡಿದೆ. ಪುಣೆ ಪಂದ್ಯಕ್ಕೆ ಹೋಲಿಸಿ ಟೀಂ ಇಂಡಿಯಾದಲ್ಲಿ ಉಮೇಶ್ ಯಾದವ್ ಬದಲಿಗೆ ಭುವನೇಶ್ವರ್ ಕುಮಾರ್ ಬಂದಿದ್ದಾರೆ.

Cuttack Second ODI India Vs England Match report

ತಂಡ
ಇಂಗ್ಲೆಂಡ್: ಜಾಸನ್ ರಾಯ್, ಅಲೆಕ್ಸ್ ಹೇಲ್ಸ್ ಜೋ ರೂಟ್, ಬೆನ್ ಸ್ಟೋಕ್ಸ್, ಜಾಸನ್ ಬಟ್ಲರ್, ಮೊಯಿನ್ ಅಲಿ, ವೋಕ್ಸ್, ಅಬ್ದುಲ್ ರಶೀಡ್, ವಿಲ್ಲಿ, ಬಾಲ್.

ಭಾರತ: ಶಿಖರ್ ಧವನ್, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಎಂಎಸ್ ಧೋನಿ, ಯುವರಾಜ್ ಸಿಂಗ್, ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಆರ್ ಅಶ್ವಿನ್, ಭುವನೇಶ್ವರ್ ಕುಮಾರ್ , ಜಸ್ಪೀತ್ ಬೂಮ್ರಾ.

ಇಂಗ್ಲೆಂಡ್ ತಂಡ:

ಭಾರತ ತಂಡ

ಟಾಸ್ ವರದಿ

ಪಿಚ್ ಹೇಗಿದೆ:


(ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
2nd ODI Cuttack: India beat England by 15 runs, clinch series 2-0
Please Wait while comments are loading...