52 ವರ್ಷ ಹಳೆ ದಾಖಲೆಯನ್ನು ಮುರಿದ ಚೇತೇಶ್ವರ್ ಪೂಜಾರಾ!

Posted By:
Subscribe to Oneindia Kannada

ಹೈದಾರಾಬಾದ್, ಫೆಬ್ರವರಿ 09: ಟೀಂ ಇಂಡಿಯಾದ ಪ್ರಮುಖ ಬ್ಯಾಟ್ಸ್ ಮನ್ ಚೇತೇಶ್ವರ್ ಪೂಜಾರಾ ಅವರು ಮತ್ತೊಂದು ದಾಖಲೆ ಬರೆದಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನ(ಫೆಬ್ರವರಿ 09) ದಂದು 52 ವರ್ಷ ಹಳೆ ದಾಖಲೆಯನ್ನು ಪೂಜಾರಾ ಮುರಿದಿದ್ದಾರೆ.

ಪಂದ್ಯದ ವರದಿ | ಗ್ಯಾಲರಿ

ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಆರಂಭವಾದ ಟೆಸ್ಟ್ ಪಂದ್ಯದ ಮೊದಲ ದಿನದಂದು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ಆರಂಭಿಕ ಆಘಾತ ಕಾದಿತ್ತು. ಕೆಎಲ್ ರಾಹುಲ್ 2 ರನ್ ಗಳಿಸಿ ಔಟಾದರು. ನಂತರ ಮುರಳಿ ವಿಜಯ್ ಜೊತೆಗೂಡಿದ ಚೇತೇಶ್ವರ್ ಪೂಜಾರಾ ಅವರು 83ರನ್ ಗಳಿಸಿ ಔಟಾದರು.

52 ವರ್ಷ ಹಳೆ ದಾಖಲೆಯನ್ನು ಮುರಿದ ಚೇತೇಶ್ವರ್ ಪೂಜಾರಾ!

ಈ ಅರ್ಧಶತಕ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 52 ವರ್ಷಗಳಿಂದ ಚಂದು ಬೋರ್ಡೆ ಹೆಸರಿನಲ್ಲಿದ್ದ ದಾಖಲೆಯನ್ನು ಪೂಜಾರಾ ಮುರಿದರು.

ಭಾರತದ ಪ್ರಥಮ ದರ್ಜೆ ಸೀಸನ್ ನಲ್ಲಿ ಒಟ್ಟಾರೆ 1605 ರನ್ ಗಳಿಸಿರುವ ಪೂಜಾರಾ, ಅತಿ ಕಡಿಮೆ ಇನ್ನಿಂಗ್ಸ್ ನಲ್ಲಿ ಅಧಿಕ ರನ್ ಗಳಿಸಿದ ಆಟಗಾರ ಎನಿಸಿಕೊಂಡರು. 13 ಪಂದ್ಯಗಳಿಂದ 21 ಇನ್ನಿಂಗ್ಸ್ ನಲ್ಲಿ 1,605 ರನ್ ಗಳಿಸಿದ್ದಾರೆ. ಚಂದು ಬೊರ್ಡೆ ಅವರು 1964-65 ಸೀಸನ್ ನಲ್ಲಿ 21 ಪಂದ್ಯಗಳಿಂದ 28 ಇನ್ನಿಂಗ್ಸ್ ನಲ್ಲಿ 1,604 ರನ್ ಗಳಿಸಿ ಸಾಧನೆ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Cheteshwar Pujara continued his impressive run with the bat and today (February 9) broke a 52-year-old Indian record during the first day's play of the one-off Test against Bangladesh here.
Please Wait while comments are loading...