ಅಜರುದ್ದೀನ್ ದಾಖಲೆ ಮುರಿಯಲು ವಿರಾಟ್ ಕೊಹ್ಲಿ ಸಜ್ಜು

Posted By:
Subscribe to Oneindia Kannada

ಹೈದರಾಬಾದ್, ಫೆಬ್ರವರಿ 08: ಪ್ರವಾಸಿ ಬಾಂಗ್ಲಾದೇಶ ವಿರುದ್ಧ ಹೈದರಾಬಾದಿನಲ್ಲಿ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ದಾಖಲೆ ಬರೆಯುವ ಸಾಧ್ಯತೆಯಿದೆ. ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಟೆಸ್ಟ್ ಪಂದ್ಯ ಗುರುವಾರ (ಫೆಬ್ರವರಿ 09) ರಂದು ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಆರಂಭವಾಗಲಿದೆ.

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ಜಯ ತಂದಿತ್ತರೆ ವಿರಾಟ್ ಕೊಹ್ಲಿ ಅವರು ಮೊಹಮ್ಮದ್ ಅಜರುದ್ದೀನ್ ಅವರ ದಾಖಲೆಯನ್ನು ಮುರಿಯಲಿದ್ದಾರೆ.

ಸದ್ಯ ಕೊಹ್ಲಿ ಹಾಗೂ ಅಜರುದ್ದೀನ್ ಅವರು ನಾಯಕರಾಗಿ ತಲಾ 14 ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಯಶಸ್ವಿ ನಾಯಕರ ಪಟ್ಟಿಯಲ್ಲಿ ಎಂಎಸ್ ಧೋನಿ ಹಾಗೂ ಸೌರವ್ ಗಂಗೂಲಿ ನಂತರದ ಸ್ಥಾನದಲ್ಲಿ ಕೊಹ್ಲಿ ಇದ್ದಾರೆ. ಕೊಹ್ಲಿ ಅವರು ಸತತ 5 ಸರಣಿಯನ್ನು ಗೆದ್ದುಕೊಂಡಿದ್ದಾರೆ.

India Vs Bangladesh Test: Another record beckons captain Virat Kohli

* 2015ರಲ್ಲಿ ಶ್ರೀಲಂಕಾ ವಿರುದ್ಧ 2-1
* ದಕ್ಷಿಣ ಆಫ್ರಿಕಾ ವಿರುದ್ಧ 3-0
* ವೆಸ್ಟ್ ಇಂಡೀಸ್ ವಿರುದ್ಧ 2-0
* ನ್ಯೂಜಿಲೆಂಡ್ ವಿರುದ್ಧ 3-0
* ಇಂಗ್ಲೆಂಡ್ ವಿರುದ್ಧ 4-0

2000 ರಲ್ಲಿ ಟೆಸ್ಟ್ ಮಾನ್ಯತೆ ಪಡೆದ ಬಾಂಗ್ಲಾದೇಶ ಇಲ್ಲಿ ತನಕ ನಾಲ್ಕು ಬಾರಿ ಭಾರತ ಪ್ರವಾಸ ಕೈಗೊಂಡಿದ್ದರೂ, ಇದೇ ಮೊದಲ ಬಾರಿಗೆ ಟೆಸ್ಟ್ ಪಂದ್ಯವಾಡುತ್ತಿದೆ. ಭಾರತ ವಿರುದ್ಧ ಇನ್ನೂ ಟೆಸ್ಟ್ ವಿಜಯ ಸಾಧಿಸಲು ಸಾಧ್ಯವಾಗಿಲ್ಲ.

ಟಾಪ್ 5 ಯಶಸ್ವಿ ಟೆಸ್ಟ್ ನಾಯಕರು
* ಎಂಎಸ್ ಧೋನಿ- 60 ಟೆಸ್ಟ್ ಪಂದ್ಯಗಳಲ್ಲಿ 27 ಗೆಲುವು
* ಸೌರವ್ ಗಂಗೂಲಿ - 49 ಟೆಸ್ಟ್ ಪಂದ್ಯಗಳಲ್ಲಿ 21 ಗೆಲುವು
* ವಿರಾಟ್ ಕೊಹ್ಲಿ(22), ಮೊಹಮ್ಮದ್ ಅಜರುದ್ದೀನ್ (47) -14 ಗೆಲುವು
* ಸುನಿಲ್ ಗವಾಸ್ಕರ್ (47), ಮನ್ಸೂರ್ ಆಲಿ ಖಾನ್ ಪಟೌಡಿ (40) -9 ಜಯ
* ರಾಹುಲ್ ದ್ರಾವಿಡ್ (25) -8 ಗೆಲುವು
(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian captain Virat Kohli is on the verge of breaking another record as he prepares to lead the team against Bangladesh in a one-off Test starting here tomorrow (February 9).
Please Wait while comments are loading...