ಬಾಂಗ್ಲಾ ವಿರುದ್ಧದ ಟೆಸ್ಟ್, ವಿಜಯ್- ಕೊಹ್ಲಿ ಶತಕ, ಸುಸ್ಥಿತಿಯಲ್ಲಿ ಭಾರತ

Posted By:
Subscribe to Oneindia Kannada

ಹೈದರಾಬಾದ್, ಫೆಬ್ರವರಿ 09: ಇಲ್ಲಿನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಗುರುವಾರ ಬೆಳಗ್ಗೆ ಭಾರತ ಹಾಗೂ ಬಾಂಗ್ಲಾದೇಶ ವಿರುದ್ಧದ ಐತಿಹಾಸಿಕ ಟೆಸ್ಟ್ ಪಂದ್ಯ ಅರಂಭಗೊಂಡಿದೆ. ಈ ಪಂದ್ಯದ ಮೊದಲ ದಿನದ ಅಪ್ಡೇಟ್ಸ್ ಇಲ್ಲಿದೆ...

ಈ ಸಮಯಕ್ಕೆ ಸ್ಕೋರ್ : 90 ಓವರ್ ಗಳಲ್ಲಿ- 356/3
[ಮುರಳಿ ವಿಜಯ್ 101, ಚೇತೇಶ್ವರ್ ಪೂಜಾರಾ 83, ಕೊಹ್ಲಿ 111*]
* ಅಜಿಂಕ್ಯ ರಹಾನೆ 45 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ, ಸ್ಟಂಪ್ಸ್ ಡೇ 1.
* ನಾಯಕ ವಿರಾಟ್ ಕೊಹ್ಲಿ ಆಕರ್ಷಕ ಶತಕ, 12 ಬೌಂಡರಿ
* ಮುರಳಿ ವಿಜಯ್ 11 ಬೌಂಡರಿ, 1 ಸಿಕ್ಸರ್ ಸಿಡಿಸಿ ಶತಕ(108) ದಾಖಲಿಸಿ ಔಟ್
* ಚೇತೇಶ್ವರ್ ಪೂಜಾರಾ 9 ಬೌಂಡರಿ ಇದ್ದ 83 ರನ್ ಗಳಿಸಿ ಔಟ್ .

* ಫೆಬ್ರವರಿ 9 ರಿಂದ ಆರಂಭವಾದ ಏಕೈಕ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.

Vijay-Pujara steady India after Rahul's early departure

* ಕೇವಲ 2 ರನ್ ಗಳಿಸಿ ಕೆಎಲ್ ರಾಹುಲ್ ಅವರು ತಸ್ಕೀನ್ ಅಹ್ಮದ್ ಅವರ ಎಸೆತವನ್ನು ಎದುರಿಸಲಾಗದೆ ಕ್ಲೀನ್ ಬೋಲ್ಡ್ ಆಗಿದ್ದಾರೆ.
* ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಕರುಣ್ 303 ರನ್ ಬಾರಿಸಿದ್ದ ಕರ್ನಾಟಕ ಕರುಣ್ ನಾಯರ್ ಬದಲಿಗೆ ಅಜಿಂಕ್ಯ ರಹಾನೆಯನ್ನು ಕೊಹ್ಲಿ ಆಯ್ಕೆ ಮಾಡಿಕೊಂಡಿದ್ದಾರೆ.

ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ಮುರಳಿ ವಿಜಯ್, ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರಾ, ಅಜಿಂಕ್ಯ ರಹಾನೆ, ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ಇಶಾಂತ್ ಶರ್ಮ.

Virat Kohli

ಬಾಂಗ್ಲಾದೇಶ: ಮುಷ್ಫಿಕರ್ ರೆಹೀಂ(ನಾಯಕ,ವಿಕೆಟ್ ಕೀಪರ್), ತಮೀಮ್ ಇಕ್ಬಾಲ್, ಸೌಮ್ಯ ಸರ್ಕಾರ್, ಮೊಮಿನುಲ್ ಹಕ್, ಮಹಮುದುಲ್ಲಾ ರಿಯಾದ್, ಶಕೀಬ್ ಅಲ್ ಹಸನ್, ಶಬ್ಬೀರ್ ರಹ್ಮನ್, ಮೆಹೆದಿ ಹಸನ್ ಮಿರಾಜ್, ತೈಜುಲ್ ಇಸ್ಲಾಮ್, ತಸ್ಕಿನ್ ಅಹ್ಮದ್, ಕಮ್ರುಲ್ ಇಸ್ಲಾಮ್ ರಬ್ಬಿ (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India skipper Virat Kohli on Thursday (Feb 9) won the toss and elected to bat first against Bangladesh in the one-off Test at Hyderabad.
Please Wait while comments are loading...