ಹೈದರಾಬಾದ್ : ಬಾಂಗ್ಲಾದೇಶ vs ಭಾರತ ಏಕೈಕ ಟೆಸ್ಟ್ ವೇಳೆ ಬದಲು

Posted By:
Subscribe to Oneindia Kannada

ಹೈದರಾಬಾದ್, ಜನವರಿ 15: ಪ್ರವಾಸಿ ಬಾಂಗ್ಲಾದೇಶ ವಿರುದ್ಧ ಭಾರತದ ಏಕೈಕ ಟೆಸ್ಟ್ ವೇಳೆ ಬದಲಾಗಿದೆ. ಫೆಬ್ರವರಿ 8ರ ಬದಲಿಗೆ ಫೆಬ್ರವರಿ 9ರಂದು ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಭಾನುವಾರ ಪ್ರಕಟಿಸಿದೆ.

ಫೆಬ್ರವರಿ 8ರ ಬದಲಿಗೆ ಫೆಬ್ರವರಿ 9 ರಿಂದ 13ರ ತನಕ ಪಂದ್ಯ ಆಯೋಜನೆ ಮಾಡುವಂತೆ ಬಿಸಿಸಿಐನಿಂದ ಸೂಚನೆ ಬಂದಿದೆ ಎಂದು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿ ಜಾನ್ ಮನೋಜ್ ಅವರು ಪಿಟಿಐಗೆ ತಿಳಿಸಿದ್ದಾರೆ.[ಭಾರತ ವಿರುದ್ಧದ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ]

India Vs Bangladesh: One-off Test at Hyderabad postponed by a day to February 9

ಪಂದ್ಯವನ್ನು ಗುರುವಾರ ಆರಂಭಿಸುವುದರಿಂದ ಹೆಚ್ಚಿನ ಸಂಖ್ಯೆಯಲಿ ಪ್ರೇಕ್ಷಕರನ್ನು ಹೊಂದಬಹುದು ಎಂದು ಬಿಸಿಸಿಐ ಎಣಿಕೆಯಾಗಿದೆ. ಬಾಂಗ್ಲಾದೇಶಕ್ಕೆ ಇದು ಮೊದಲ ಉಭಯ ದೇಶಗಳ ನಡುವಿನ ಏಕೈಕ ಟೆಸ್ಟ್ ಪಂದ್ಯವಾಗಿದೆ.

ಸದ್ಯ ನ್ಯೂಜಿಲೆಂಡ್ ಸರಣಿಯಲ್ಲಿ ಆಡುತ್ತಿರುವ ಬಾಂಗ್ಲಾದೇಶ ತಂಡ ಆಟಗಾರರು, ಫೆಬ್ರವರಿ 1ರ ವೇಳೆಗೆ ಭಾರತಕ್ಕೆ ಬರುವ ನಿರೀಕ್ಷೆಯಿದೆ. ಮೂರು ದಿನಗಳ ಒಂದು ಅಭ್ಯಾಸ ಪಂದ್ಯವನ್ನು ಬಾಂಗ್ಲಾದೇಶ ಆಡಲಿದ್ದು, ನಂತರ ಏಕೈಕ ಟೆಸ್ಟ್ ಪಂದ್ಯವನ್ನು ಆಡಲಿದೆ.

ಟೀಂ ಇಂಡಿಯಾ ಸದ್ಯ ಇಂಗ್ಲೆಂಡ್ ವಿರುದ್ಧ ಮೂರು ಏಕದಿನ ಪಂದ್ಯಗಳ ಸರಣಿ ಹಾಗೂ ಮೂರು ಟಿ20 ಪಂದ್ಯವನ್ನಾಡಲಿದ್ದು, ಫೆಬ್ರವರಿ 01ರಂದು ಸರಣಿ ಮುಕ್ತಾಯವಾಗಲಿದೆ. ಬಾಂಗ್ಲಾದೇಶ ಸರಣಿ ನಂತರ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಟೆಸ್ಟ್ ಸರಣಿ ಆಡಲಿದೆ.
(ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The one-off Test between India and Bangladesh has been pushed by a day and will now take place from Feb 9-13 here in Hyderabad.
Please Wait while comments are loading...