ಬಾಂಗ್ಲಾ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ತಂಡ ಪ್ರಕಟ, ಪಾರ್ಥೀವ್ ಪಟೇಲ್ ಔಟ್

Posted By:
Subscribe to Oneindia Kannada

ನವದೆಹಲಿ, ಜನವರಿ 31: ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಭಾರತ ತಂಡವನ್ನು ಮಂಗಳವಾರ ಸಂಜೆ ಬಿಸಿಸಿಐ ಪ್ರಕಟಿಸಿದೆ.

ಪಾರ್ಥೀವ್ ಪಟೇಲ್ ಅವರನ್ನು ತಂಡದಿಂದ ಕೈಬಿಡಲಾಗಿದ್ದು, ವೃದ್ಧಿಮಾನ್ ಸಹಾ ಅವರು ತಂಡಕ್ಕೆ ಮರಳಿದ್ದಾರೆ. ಉಳಿದಂತೆ ತಮಿಳುನಾಡಿನ ಆರಂಭಿಕ ಆಟಗಾರ ಅಭಿನವ್ ಮುಕುಂದ್ ಅವರು ತಂಡ ಸೇರಿದ್ದಾರೆ.[ಬಾಂಗ್ಲಾದೇಶ ಪ್ರವಾಸ ಸಂಪೂರ್ಣ ಮಾರ್ಗದರ್ಶಿ]

India vs Bangladesh Hyderabad Test Team India squad announced, Parthiv Patel dropped

ಫೆ.2 ರಿಂದ ಫೆ 14ರ ತನಕ ಬಾಂಗ್ಲಾದೇಶ ತಂಡ ಭಾರತದಲ್ಲಿರಲಿದೆ. ಫೆಬ್ರವರಿ 9 ರಿಂದ 13 ರ ತನಕ ಭಾರತ ವಿರುದ್ಧ ಏಕೈಕ ಟೆಸ್ಟ್ ಪಂದ್ಯವನ್ನಾಡಲಿದೆ.[ಭಾರತ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಬಾಂಗ್ಲಾ ತಂಡ ಪ್ರಕಟ]

ನೆರೆ ರಾಷ್ಟ್ರ ಬಾಂಗ್ಲಾದೇಶದ ಕ್ರಿಕೆಟ್ ತಂಡ ಇಲ್ಲಿ ತನಕ ನಾಲ್ಕು ಬಾರಿ ಭಾರತ ಪ್ರವಾಸ ಕೈಗೊಂಡಿದೆ. 1990,1998,2006 ಹಾಗೂ 2016 ಆದರೆ, ಇದೇ ಮೊದಲ ಬಾರಿಗೆ ಟೆಸ್ಟ್ ಪಂದ್ಯವಾಡಲು ಭಾರತಕ್ಕೆ ಆಗಮಿಸಲಿದೆ.


ತಂಡ ಇಂತಿದೆ: ವಿರಾಟ್ ಕೊಹ್ಲಿ(ನಾಯಕ), ಮುರಳಿ ವಿಜಯ್, ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರಾ, ಕರುಣ್ ನಾಯರ್, ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜ, ಜಯಂತ್ ಯಾದವ್, ಉಮೇಶ್ ಯಾದವ್, ಇಶಾಂತ್ ಶರ್ಮ, ಭುವನೇಶ್ವರ್ ಕುಮಾರ್, ಅಮಿತ್ ಮಿಶ್ರಾ, ಅಭಿನವ್ ಮುಕುಂದ್, ಹಾರ್ದಿಕ್ ಪಾಂಡ್ಯ

ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯ ಹಾಗೂ ಫೆಬ್ರವರಿ 16 ರಿಂದ 18 ರ ತನಕ ಮುಂಬೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಂದ್ಯಕ್ಕೂ ಇಂಡಿಯಾ 'ಎ' ತಂಡ ಪ್ರಕಟಿಸಲಾಗಿದೆ.

ಹಾರ್ದಿಕ್ ಪಾಂಡ್ಯ(ನಾಯಕ), ಅಖಿಲ್ ಹೆರ್ವಾಡ್ಕರ್, ಪ್ರಿಯಾಂಕ್ ಕಿರಿಟ್ ಪಾಂಚಾಲ್, ಶ್ರೇಯಸ್ ಐಯರ್, ಅಕಿಂತ್ ಬಾವ್ನೆ, ರಿಷಬ್ ಪಂತ್, ಇಶಾನ್ ಕಿಶಾನ್ (ವಿಕೆಟ್ ಕೀಪರ್), ಶಬಾಜ್ ನದೀಂ, ಕೃಷ್ಣಪ್ಪ ಗೌತಮ್, ಕುಲದೀಪ್ ಯಾದವ್, ನವದೀಪ್ ಸೈನಿ, ಅಶೋಕ್ ದಿಂಡಾ, ಮೊಹಮ್ಮದ್ ಸಿರಾಜ್, ರಾಹುಲ್ ಸಿಂಗ್, ಬಾಬಾ ಇಂದ್ರಜಿತ್
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Indian cricket team for the one-off Test against Bangladesh cricket team selected in New Delhi today. Parthiv Patel dropped as Wriddhiman Saha is back
Please Wait while comments are loading...