ಗಾಯಗೊಂಡಿರುವ ಕೊಹ್ಲಿ ಭುಜಕ್ಕೆ 'ಐಸ್ ಪ್ಯಾಕ್' ಟ್ರೀಟ್ ಮೆಂಟ್

By: ಅವಿನಾಶ್ ಶರ್ಮ
Subscribe to Oneindia Kannada

ರಾಂಚಿ, ಮಾರ್ಚ್ 16: ಆಸ್ಟ್ರೇಲಿಯಾ ವಿರುದ್ದದ ಮೂರನೇ ಟೆಸ್ಟ್ ಪಂದ್ಯದ ಫೀಲ್ಡಿಂಗ್ ವೇಳೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬಲ ಭುಜಕ್ಕೆ ಏಟು ಮಾಡಿಕೊಂಡಿದ್ದರು. ಸದ್ಯ ಅವರ ಭುಜಕ್ಕೆ ಐಸ್ ಪ್ಯಾಕ್ ಚಿಕಿತ್ಸೆ ನೀಡಲಾಗುತ್ತದೆ.

ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನವಾದ ಗುರುವಾರ ಫೀಲ್ಡಿಂಗ್ ಮಾಡುವಾಗ ಬೌಂಡರಿ ತಪ್ಪಿಸಲು ಕೊಹ್ಲಿ ಡೈವ್ ಹೊಡೆದಿದ್ದರು. ಈ ಸಂದರ್ಭ ಅವರ ಭುಜಕ್ಕೆ ಗಾಯವಾಗಿತ್ತು. ಇದಾದ ನಂತರ ಅವರ ಭುಜಕ್ಕೆ ಚಿಕಿತ್ಸೆ ನೀಡಲಾಗಿದ್ದು ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಬಿಸಿಸಿಐನ ವೈದ್ಯಕೀಯ ತಂಡ ಖಚಿತಪಡಿಸಿದೆ. [ಭಾರತೀಯ ಉದ್ಯಮಿಯಿಂದ ಇಂಡೋ-ಆಸೀಸ್ ಕ್ರಿಕೆಟ್ ಗೆ ಸಂಚಕಾರ?]

India Vs Australia: Virat Kohli recuperating from shoulder strain, says BCCI

ಬಲ ಭುಜದ ನೋವಿನಿಂದ ಚೇತರಿಸಿಕೊಳ್ಳಲು ಕೊಹ್ಲಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯಕೀಯ ತಂಡ ಹೇಳಿದೆ. ಮೂಲಗಳ ಪ್ರಕಾರ ಕೊಹ್ಲಿ ಭುಜಕ್ಕೆ ಯಾವುದೇ ಗಂಭೀರ ಗಾಯಗಳಾಗಿಲ್ಲ.

40ನೇ ಓವರ್ ವೇಳೆ ಡೀಪ್ ಮಿಡ್ ವಿಕೆಟಿನಲ್ಲಿ ಬೌಂಡರಿ ಉಳಿಸಲು ಹೋಗಿ ಕೊಹ್ಲಿ ಗಾಯಗೊಂಡು ಮೈದಾನದಿಂದ ನಿರ್ಗಮಿಸಿದಾಗ ಭಾರತದ ಅಭಿಮಾನಿಗಳು ಚಿಂತಿತರಾಗಿದ್ದರು. ಸದ್ಯ ಕೊಹ್ಲಿ ಚೇತರಿಸಿಕೊಳ್ಳುತ್ತಿರುವುದು ಅಭಿಮಾನಿಗಳ ಪಾಲಿಗೆ ಸಂತಸದ ವಾರ್ತೆಯಾಗಿದೆ.

ಈಗಾಗಲೇ ಕೊಹ್ಲಿಯ ಭುಜದ ಸ್ಕ್ಯಾನ್ ಮಾಡಲಾಗಿದ್ದು, ಶುಕ್ರವಾರ ಬೆಳಿಗ್ಗೆ ವರದಿ ಬರಲಿದೆ. ವರದಿ ಬಂದ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಹೇಳಿದ್ದಾರೆ. [ವಿಡಿಯೋ: ಜಡೇಜ ಹಿಡಿದ ಅದ್ಭುತ ಕ್ಯಾಚಿಗೆ ವಾರ್ನರ್ ಬಲಿ!]

ಸದ್ಯ ಮುಂಜಾಗ್ರತಾ ಕ್ರಮವಾಗಿ ಅವರ ಬಲ ಭುಜಕ್ಕೆ ಐಸ್ ಪ್ಯಾಕ್ ಚಿಕಿತ್ಸೆ ನೀಡಲಾಗುತ್ತಿದೆ.ರಾಂಚಿಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟಿನ ಮೊದಲ ದಿನದಂತ್ಯಕ್ಕೆ ಆಸ್ಟ್ರೇಲಿಯಾ 4 ವಿಕೆಟ್ ಕಳೆದುಕೊಂಡು 299 ರನ್ ಗಳಿಸಿ ಸುಸ್ಥಿತಿಯಲ್ಲಿದೆ. (ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India skipper Virat Kohli is recuperating from the shoulder injury he sustained while fielding on the opening day of the third Test against Australia on Thursday (March 16).
Please Wait while comments are loading...