ಭಾರತ Vs ಆಸ್ಟ್ರೇಲಿಯಾ ಕದನದ ಸಂಪೂರ್ಣ ವಿವರ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 16: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಕುತೂಹಲ ದಿನೇ ದಿನೇ ಹೆಚ್ಚಾಗುತ್ತಿದೆ. ಟೆಸ್ಟ್ ಕ್ರಿಕೆಟ್ ನ ಅತ್ಯಂತ ಯಶಸ್ವಿ ನಾಯಕ ಎಂದೆನಿಸಿಕೊಂಡಿರುವ ಇಬ್ಬರು ಪ್ರತಿಭಾವಂತರಿಗೆ ಇದು ಅಗ್ನಿಪರೀಕ್ಷೆಯಾಗಿದೆ. ವಿರಾಟ್ ಕೊಹ್ಲಿ ಹಾಗೂ ಸ್ಟೀವ್ ಸ್ಮಿತ್ ನಡುವಿನ ಕದನದ ಸಂಪೂರ್ಣ ವಿವರ ಇಲ್ಲಿದೆ...

ಸ್ಟೀವ್ ಸ್ಮಿತ್ ನೇತೃತ್ವದ ಆಸ್ಟ್ರೇಲಿಯಾ ಪಡೆ ಭಾರತಕ್ಕೆ ಸೋಮವಾರ(ಫೆಬ್ರವರಿ 13) ಆಗಮಿಸಿದೆ. ಫೆಬ್ರವರಿ 23ರಂದು ಪುಣೆಯಲ್ಲಿ ಮೊದಲ ಪಂದ್ಯ ನಡೆಯಲಿದೆ. ಇದಕ್ಕೂ ಮುನ್ನ ಫೆಬ್ರವರಿ 16ರಂದು ಹಾರ್ದಿಕ್ ಪಾಂಡ್ಯ ನೇತೃತ್ವದ ಭಾರತ ಎ ವಿರುದ್ಧ ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ಪಂದ್ಯ ಅಭ್ಯಾಸ ಪಂದ್ಯವಾಡಲಿದೆ.

ನಾಲ್ಕು ಟೆಸ್ಟ್ ಸರಣಿಯಿಂದ ನಾಲ್ಕು ದ್ವಿಶತಕ ಸಿಡಿಸಿದ್ದಲ್ಲದೆ ಸತತ ಸರಣಿಗಳನ್ನು ಗೆಲ್ಲುವ ಮೂಲಕ ಕೊಹ್ಲಿ ಅವರು ನಾಯಕನಾಗಿ, ಬ್ಯಾಟ್ಸ್ ಮನ್ ಆಗಿ ಮಿಂಚುತ್ತಿದ್ದಾರೆ. ಕೊಹ್ಲಿ ಅವರು 23 ಟೆಸ್ಟ್ ಪಂದ್ಯಗಳಲ್ಲಿ ನಾಯಕರಾಗಿದ್ದು, 15 ಗೆಲುವು, 6 ಡ್ರಾ ಹಾಗೂ 2 ಸೋಲು ಕಂಡಿದ್ದಾರೆ. ಇನ್ನೊಂದೆಡೆ ಸ್ಟೀವ್ ಸ್ಮಿತ್ ಅವರು ಒಟ್ಟಾರೆ 20 ಪಂದ್ಯಗಳಿಂದ 11 ಗೆಲುವು, 4 ಡ್ರಾ 5 ಸೋಲು ಕಂಡು ಶೇ 55ರಷ್ಟು ಗೆಲುವಿನ ಸರಾಸರಿ ಹೊಂದಿದ್ದಾರೆ.

ಕರುಣ್ ನಾಯರ್ ತಂಡಕ್ಕೆ ಸೇರ್ಪಡೆ

ಕರುಣ್ ನಾಯರ್ ತಂಡಕ್ಕೆ ಸೇರ್ಪಡೆ

ವಿರಾಟ್ ಕೊಹ್ಲಿ(ನಾಯಕ), ಮುರಳಿ ವಿಜಯ್, ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರಾ, ಕರುಣ್ ನಾಯರ್, ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಆರ್ ಅಶ್ವಿನ್, ಅಜಿಂಕ್ಯ ರಹಾನೆ, ರವೀಂದ್ರ ಜಡೇಜ, ಜಯಂತ್ ಯಾದವ್, ಉಮೇಶ್ ಯಾದವ್, ಇಶಾಂತ್ ಶರ್ಮ, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ಅಭಿನವ್ ಮುಕುಂದ್, ಹಾರ್ದಿಕ್ ಪಾಂಡ್ಯ
* ಆರಂಭಿಕ ಆಟಗಾರರ ಸಮಸ್ಯೆ ಪರಿಹಾರಕ್ಕಾಗಿ ಅಭಿನವ್ ಮುಕುಂದ್ ಸೇರಿಕೊಳ್ಳಲಾಗಿದೆ.
* ಸ್ಪಿನ್ ವಿಭಾಗದಲ್ಲಿ ಆಫ್ , ಲೆಗ್, ಚೈನಾಮನ್ ಹೀಗೆ ವೈವಿಧ್ಯತೆ ಕಾಣಬಹುದು.

ಆಸೀಸ್ ಸ್ಪಿನ್ ಬಲ ಹೆಚ್ಚಳ

ಆಸೀಸ್ ಸ್ಪಿನ್ ಬಲ ಹೆಚ್ಚಳ

ಸ್ಟೀವ್ ಸ್ಮಿತ್ (ನಾಯಕ), ಡೇವಿಡ್ ವಾರ್ನರ್, ಆಸ್ಟನ್ ಅಗರ್, ಜಾಕ್ಸನ್ ಬರ್ಡ್, ಪೀಟರ್ ಹ್ಯಾಂಡ್ಸ್ ಕೊಂಬ್, ಜೋಶ್ ಹೇಜಲ್ ವುಡ್, ಉಸ್ಮಾನ್ ಖವಾಜ, ನಾಥನ್ ಲಿಯಾನ್, ಮಿಚೆಲ್ ಮಾರ್ಷ್, ಶಾನ್ ಮಾರ್ಷ್, ಗ್ಲೆನ್ ಮ್ಯಾಕ್ಸ್ ವೆಲ್, ಸ್ಟೀವ್ ಓ ಕೀಫೆ, ಮ್ಯಾಥ್ಯೂ ರೆನ್ಶಾ ,ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ಪೆಪ್ಸನ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್)

ಬೆಂಗಳೂರಲ್ಲಿ 2ನೇ ಟೆಸ್ಟ್ ಪಂದ್ಯ

ಬೆಂಗಳೂರಲ್ಲಿ 2ನೇ ಟೆಸ್ಟ್ ಪಂದ್ಯ

ಎಲ್ಲಾ ಪಂದ್ಯಗಳು 9.30 AM IST ಕ್ಕೆ ಆರಂಭ
1st ಟೆಸ್ಟ್ - ಫೆಬ್ರವರಿ 23-27 (ಗುರುವಾರ ದಿಂದ ಸೋಮವಾರ) - ಪುಣೆ (ಮಹಾರಾಷ್ಟ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ)
2nd ಟೆಸ್ಟ್ - ಮಾರ್ಚ್ 4-8 (ಶನಿವಾರದಿಂದ ಮಂಗಳವಾರ) - ಬೆಂಗಳೂರು (ಎಂ ಚಿನ್ನಸ್ವಾಮಿ ಸ್ಟೇಡಿಯಂ)
3rd ಟೆಸ್ಟ್ - ಮಾರ್ಚ್ 16-20 (ಗುರುವಾರದಿಂದ ಸೋಮವಾರ) - ರಾಂಚಿ (ಜೆಎಸ್ ಸಿಎ ಸ್ಟೇಡಿಯಂ)
4th Test - March 25-29 (Saturday to Wednesday) - Dharamsala (HPCA Stadium)

ಅಶ್ವಿನ್ ಹಾಗೂ ಸ್ಮಿತ್ ಮುಖಾಮುಖಿ

ಅಶ್ವಿನ್ ಹಾಗೂ ಸ್ಮಿತ್ ಮುಖಾಮುಖಿ

[ಫೆಬ್ರವರಿ 15, 2017ರಂತೆ ತಂಡಗಳ ಶ್ರೇಯಾಂಕ ಪಟ್ಟಿ
ಭಾರತ (1) 121 ರೇಟಿಂಗ್ ಅಂಕಗಳು: ಆಸ್ಟ್ರೇಲಿಯಾ (2) 109 ರೇಟಿಂಗ್ ಅಂಕಗಳು

ಬ್ಯಾಟಿಂಗ್: ಸ್ಟೀವ್ ಸ್ಮಿತ್ (1); ವಿರಾಟ್ ಕೊಹ್ಲಿ (2); ಡೇವಿಡ್ ವಾರ್ನರ್ (5); ಚೇತೇಶ್ವರ್ ಪೂಜಾರಾ (9)
ಬೌಲಿಂಗ್-ಆರ್ ಅಶ್ವಿನ್ (1); ರವೀಂದ್ರ ಜಡೇಜ (2); ಜೋಶ್ ಹೇಜಲ್ ವುಡ್ (3); ಮಿಚೆಲ್ ಸ್ಟಾರ್ಕ್ (10)
ಆಲ್ ರೌಂಡರ್ಸ್: ಅಶ್ವಿನ್ (1); ಜಡೇಜ (3); ಸ್ಟಾರ್ಕ್ (7); ಹೇಜಲ್ ವುಡ್ (15)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India and Australia will face off in a 4-Test series starting in Pune from February 23. The teams will battle for the Border-Gavaskar Trophy.
Please Wait while comments are loading...