3ನೇ ಟೆಸ್ಟ್: ಜಡ್ಡು ಕಮಾಲ್, ಆಸ್ಟ್ರೇಲಿಯಾ 451 ರನ್ ಗಳಿಗೆ ಆಲೌಟ್

Posted By:
Subscribe to Oneindia Kannada

ರಾಂಚಿ, ಮಾರ್ಚ್. 17 : ಇಲ್ಲಿನ ಜಾರ್ಖಂಡ್ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದ ಎರಡನೇ ದಿನ ರವಿಂದ್ರ ಜಡೇಜಾ ಸ್ಪಿನ್ ಮೋಡಿಗೆ ಆಸೀಸ್ಸರ್ವಪತನ ಕಂಡಿದೆ.

ಮೊದಲ ದಿನ ನಾಲ್ಕು ವಿಕೆಟ್ ಕಳೆದುಕೊಂಡು 299 ರನ್ ಗಳಿಸಿ ಎರಡನೇ ದಿನದ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾದ 451 ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿದೆ. [ಗ್ಯಾಲರಿ : ಸ್ಮಿತ್, ಮ್ಯಾಕ್ಸ್ ವೆಲ್ ಭರ್ಜರಿ ಆಟದ ಮೋಡಿ]

India Vs Australia, Day 2: Jadeja completes fifer as visitors restricted to 451

ನಾಯಕ ಸ್ಟಿವ್ ಸ್ಮಿತ್ ಅಜೇಯ 178 ರನ್ ಗಳಿಸಿ ದ್ವಿಶತಕದಿಂದ ವಂಚಿರಾದರು. ಲೆಗ್ ಸ್ಪಿನ್ನರ್ ರವಿಂದ್ರ ಜಡೇಜಾ 5 ವಿಕೆಟ್ ಕಬಳಿಸಿ ಆಸೀಸ್ ರನ್ ವೇಗಕ್ಕೆ ಕಡಿವಾಣ ಹಾಕಿದರು.

ಮೊದಲನೇ ದಿನದಾಟಟದ ಆರಂಭದಲ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡವನ್ನು ನಾಯಕ ಸ್ಟಿವ್ ಸ್ಮಿತ್ ಹಾಗೂ ಸ್ಫೋಟಕ ಬ್ಯಾಟ್ಸ್ ಮನ್ ಗ್ಲೇನ್ ಮ್ಯಾಕ್ಸ್ ವೆಲ್ ಪಾರು ಮಾಡಿದರು. ಐದನೇ ವಿಕೆಟ್ ಗೆ ಈ ಜೋಡಿ 191 ರನ್‌ ಗಳ ಜತೆಯಾಟ ನೀಡಿತು.

ಮಾರ್ಷ್ ಗಾಯದಿಂದ ತಂಡದಲ್ಲಿ ಸ್ಥಾನ ಪಡೆದಿರುವ ಮ್ಯಾಕ್ಸ್ ವೆಲ್ 104 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಬ್ಯಾಟ್ಸ್ ಮನ್ ಗಳು ನಾಯಕ ಸ್ಮಿತ್ ಗೆ ಸಾಥ್ ನೀಡಲು ವಿಫಲರಾದರು.

ವೇಡ್ 37, ಸ್ಟೀವ್ ಓ ಕೀಫ್ 25 ರನ್ ಗಳಿಸಿ ಬೇಗನೇ ಪೆವಿಲಿಯನ್ ಕಡೆ ಮುಖ ಮಾಡಿದರು. ಭಾರತ ಪರ ಜಡ್ಡು 5, ಉಮೇಶ್ ಯಾದವ್ 3, ಅಶ್ವಿನ್ 1 ವಿಕೆಟ್ ಪಡೆದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ravindra Jadeja grabbed another five-wicket haul as Australia were restricted to 451 in their first innings on the second day of the third Test at the JSCA International Stadium here on Friday (March 17).
Please Wait while comments are loading...