3ನೇ ಟೆಸ್ಟ್: ಸ್ಮಿತ್-ಮ್ಯಾಕ್ಸ್ ವೆಲ್ ಜುಗಲ್ ಬಂದಿ ಬೃಹತ್ ಮೊತ್ತದತ್ತ ಆಸೀಸ್

Posted By:
Subscribe to Oneindia Kannada

ರಾಂಚಿ, ಮಾರ್ಚ್. 16 : ಇಲ್ಲಿನ ಜಾರ್ಖಂಡ್ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದ ಮೊದಲ ದಿನ ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್ (117) ಹಾಗೂ ಗ್ಲೇನ್ ಮ್ಯಾಕ್ಸ್ ವೆಲ್(82) ಅಜೇಯ ಶತಕದ ಜೊತೆಯಾಟದ ನೆರವಿನಿಂದ ಆಸೀಸ್ ಮೊದಲ ದಿನವೇ ಬೃಹತ್ ಮೊತ್ತ ಕಲೆಹಾಕಿದೆ.

ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ತಂಡ ನಾಲ್ಕು ವಿಕೆಟ್ ಕಳೆದುಕೊಂಡು 299 ರನ್ ಕಲೆಹಾಕಿ ಸುಭದ್ರ ಸ್ಥಿತಿಯತ್ತ ದಾಪುಗಾಲಿಟ್ಟಿದೆ.

India Vs Australia: Steve Smith-Glenn Maxwell partnership steals the show on Day 1

ಒಂದು ಹಂತದಲ್ಲಿ 140 ರನ್ ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡವನ್ನು ನಾಯಕ ಸ್ಟೀವ್ ಸ್ಮಿತ್ ಹಾಗೂ ಗ್ಲೇನ್ ಮ್ಯಾಕ್ಸ್ ವೆಲ್ ಐದನೇ ವಿಕೆಟ್ ಗೆ ಮುರಿಯದ 159 ರನ್ ಜೊತೆಯಾಟ ನೀಡಿ ಪಾರು ಮಾಡಿತು.

ಆಸೀಸ್ ಆಲ್ರೌಂಡರ್ ಮಿಚೆಲ್ ಮಾರ್ಶ್ ಗಾಯದಿಂದಾಗಿ ತಂಡದಲ್ಲಿ ಸ್ಥಾನ ಪಡೆದ ಮ್ಯಾಕ್ಸ್ ವೆಲ್ ಸಿಕ್ಕ ಅವಕಾಶವನ್ನು ಸರಿಯಾಗಿಯೇ ಬಳಸಿಕೊಳ್ಳುವಲ್ಲಿ ಯಶಸ್ವಿಯಾದರು. ಮಾಕ್ಸ್ ವೆಲ್ ಅಜೇಯ (82) ಚೊಚ್ಚಲ ಟೆಸ್ಟ್ ಅರ್ಧಶತಕ ಪೂರೈಸಿದ್ದು, ಶತಕದತ್ತ ಮುನ್ನುಗ್ಗಿದ್ದಾರೆ.

ಇನ್ನು ಅದ್ಭುತ ಫಾರ್ಮ್ ನಲ್ಲಿರುವ ಸ್ಟೀವ್ ಸ್ಮಿತ್ 24 ಎಸೆತಗಳಲ್ಲಿ 117 ರನ್ ಗಳಿಸಿ ತಮ್ಮ 19ನೇ ಟೆಸ್ಟ್ ಶತಕ ಸಿಡಿಸಿದರು. ಭಾರತದ ಪರ ವೇಗಿ ಉಮೇಶ್ ಯಾದವ್ ಎರಡು ವಿಕೆಟ್ ಪಡೆದರೆ, ಅಶ್ವಿನ್ ಹಾಗೂ ಜಡೇಜಾ ತಲಾ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

India Vs Australia, 3rd Test: Steve Smith wins the toss, elects to bat first

ಡೇವಿಡ್ ವಾರ್ನರ್ 19 ರನ್ ಗಳಿಸಿ ಜಡೇಜಾಗೆ ವಿಕೆಟ್ ಒಪ್ಪಿಸಿದರು.ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದ ರೆನ್ಶಾ 44 ರನ್ ಗಳಿಸಿ ಉಮೇಶ್ ಯಾದವ್ ಗೆ ಬಲಿಯಾದರು.

India Vs Australia, 3rd Test: Steve Smith wins the toss, elects to bat first

3 ನೇ ಪಂದ್ಯಕ್ಕೆ ಆಲ್ ರೌಂಡರ್ ಗ್ಲೇನ್ ಮ್ಯಾಕ್ಸ್ ವೆಲ್ ಅವರನ್ನು ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಗಾಯದಿಂದ ಹೊರಗುಳಿದಿದ್ದ ಮುರುಳಿ ವಿಜಯ್ ಕಮ್ಬ್ಯಾಕ್ ಮಾಡಿದ್ದಾರೆ. ಅಭಿನವ್ ಮುಕುಂದ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಲಾ ಒಂದೊಂದು ಪಂದ್ಯ ಗೆದ್ದು 1-1 ರಲ್ಲಿ ಸಮ ಸಾಧಿಸಿವೆ. ಮುಂದಿನ ಪಂದ್ಯ ಧರ್ಮಶಾಲದಲ್ಲಿ ಮಾರ್ಚ್ 25-29ರ ತನಕ ನಡೆಯಲಿದೆ.

ಭಾರತ ತಂಡ: ವಿರಾಟ್ ಕೊಹ್ಲಿ(ನಾಯಕ), ಕೆಎಲ್ ರಾಹುಲ್, ಮುರಳಿ ವಿಜಯ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಕರುಣ್ ನಾಯರ್, ವೃದ್ಧಿಮಾನ್ ಸಾಹಾ, ಆರ್.ಅಶ್ವಿನ್, ರವೀಂದ್ರ ಜಡೇಜಾ, ಇಶಾಂತ್ ಶರ್ಮಾ, ಉಮೇಶ್ ಯಾದವ್.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Australia captain Steve Smith led from the front slammed another impressive Test century while Glenn Maxwell shone with the bat as visitors reached 299/4 at stumps on first day of the third Test match against India here on Thursday (March 16).
Please Wait while comments are loading...