ಅಂಡರ್-19 ಕ್ರಿಕೆಟ್: ಗಿಲ್, ಪೃಥ್ವಿ ಜುಗಲ್ ಬಂದಿ ಭಾರತಕ್ಕೆ ಸರಣಿ

Written By: Ramesh
Subscribe to Oneindia Kannada

ಮುಂಬೈ, ಫೆಬ್ರವರಿ. 07 : ಶುಭಮನ್ ಗಿಲ್ (160) ಮತ್ತು ಪೃಥ್ವಿ ಶಾ (105) ಜೋಡಿಯ 231 ರನ್‌ಗಳ ಜತೆಯಾಟದ ನೆರವಿನಿಂದ ಭಾರತದ 19 ವರ್ಷದೊಳಗಿನವರ ತಂಡ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ 230ರನ್ ಗಳಿಂದ ಗೆದ್ದು 3-1 ಅಂತರದಲ್ಲಿ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ತನ್ನದಾಗಿಸಿಕೊಂಡಿದೆ.

ಸೋಮವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್‌ಗಳಲ್ಲಿ 9 ವಿಕೆಟ್‌ಗೆ ಭರ್ಜರಿ 382 ರನ್‌ ಕಲೆಹಾಕಿತು.

ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಆಂಗ್ಲರು 37.4 ಓವರ್‌ಗಳಲ್ಲಿ 152 ರನ್‌ಗಳಿಗೆ ಸರ್ವಪತನ ಕಂಡಿತು. ಇದರಿಂದ ಭಾರತ 5 ಪಂದ್ಯಗಳ ಸರಣಿಯಲ್ಲಿ 3-1 ಅಂತರದಲ್ಲಿ ಗೆದ್ದು ಸರಣಿ ವಶಪಡಿಸಿಕೊಂಡಿತು.

India U-19 beat England by 230 runs to take 3-1 lead

ಭಾರತ ಪರ ಶುಭಮನ್ ಗಿಲ್ ಹಾಗೂ ಹಿಮಾಂಶು ರಾಣಾ ಜೋಡಿ ಮೊದಲ ವಿಕೆಟ್ ಗೆ ವಿಕೆಟ್‌ಗೆ 83 ರನ್‌ ದಾಖಲಿಸಿದರು. ರಾಣಾ ವಿಕೆಟ್ ಒಪ್ಪಿಸಿದ ಬಳಿಕ ಜತೆಯಾದ ಪೃಥ್ವಿ ಶಾ ಶಾ 89 ಎಸೆತಗಳಲ್ಲಿ 12 ಬೌಂಡರಿ ಹಾಗೂ  2 ಸಿಕ್ಸರ್ ನೆರವಿನಿಂದ 105 ಹಾಗೂ ಗಿಲ್ 23 ಬೌಂಡರಿ ಹಾಗೂ 1 ಸಿಕ್ಸರ್ ಸಹಾಯದಿಂದ 160 ರನ್ ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು.

ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಗೆ ಆರಂಭದಲ್ಲೇ ಆಘಾತ ಎದುರಾಯಿತು. ಆರಂಭಿಕರಾದ ಹೆರಿ ಬ್ರೂಕ್ ಹಾಗೂ ಜಾರ್ಜ್‌ ಬಾರ್ಲೆಟ್ ಶೂನ್ಯಕ್ಕೆ ಔಟಾದರು.

ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್‌ ಒಲಿ ಪೋಪ್‌ (59) ಇಂಗ್ಲೆಂಡ್ ತಂಡದ ಪರ ಹೆಚ್ಚು ರನ್ ಕಲೆಹಾಕಿದ ಆಟಗಾರ ಎನಿಸಿಕೊಂಡರು. 8ರನ್ ಗಳಿಗೆ ಎರಡು ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ಬಳಗಕ್ಕೆ ಪೋಪ್ ಹಾಗೂ ವಿಲ್‌ ಜಾಕ್ಸ್ 44 ಅವರ 48 ರನ್‌ಗಳ ಜತೆಯಾಟ ಅಲ್ಪ ಚೇತರಿಕೆ ನೀಡಿತು.

ಭಾರತದ ಬೌಲರ್ ನಾಗರಕೋಟಿ 31 ರನ್‌ ನೀಡಿ 4 ವಿಕೆಟ್ ಪಡೆದು ಇಂಗ್ಲೆಂಡ್‌ನ ಬ್ಯಾಟ್ಸ್ ಮನ್‌ಗಳನ್ನು ಕಾಡಿದರು. ವಿವೇಕಾನಂದ ತಿವಾರಿ 20ಕ್ಕೆ3 ಹಾಗೂ ಶಿವಮ್ ಮವಿ 18ಕ್ಕೆ2 ಉತ್ತಮ ಬೌಲಿಂಗ್ ನಿರ್ವಹಿಸಿದರು.

ಸಂಕ್ಷಿಪ್ತ ಸ್ಕೋರು:
ಭಾರತ: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 382 (ಶುಭಮನ್ ಗಿಲ್ 160, ಹಿಮಾಂಶು ರಾಣಾ 33, ಪೃಥ್ವಿ ಶಾ 105, ಅತುರ್ ಗೋಡ್ಸಲ್ 78ಕ್ಕೆ2.
ಇಂಗ್ಲೆಂಡ್‌: 37.4 ಓವರ್‌ಗಳಲ್ಲಿ 152 ರನ್ ಗಳಿಗೆ ಆಲೌಟ್.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Indian Under-19 cricket team took an unassailable 3-1 lead in the five-match One-Day International series, after crushing England by 230 runs in the fourth match at the Wankhede Stadium here on Monday, February 6.
Please Wait while comments are loading...