ಪಾಠದ ನಂತರ ಆಟ, ಟೀಂ ಇಂಡಿಯಾ ಮೋಜು ಮಸ್ತಿ

Posted By:
Subscribe to Oneindia Kannada

ಬೆಂಗಳೂರು, ಜುಲೈ 1: ಟೀಂ ಇಂಡಿಯಾದ ಆಟಗಾರರಿಗೆ ಶಿಸ್ತಿನ ಪಾಠ ಮಾಡಿದ ನಂತರ ಕುಂಬ್ಳೆ ಮೇಷ್ಟ್ರು ತಮ್ಮ ಹುಡುಗರನ್ನು ಸಮುದ್ರಕ್ಕೆ ಕರೆದೊಯ್ದು ಈಜಾಟವಾಡಲು ಬಿಟ್ಟಿದ್ದಾರೆ.

ಅನಿಲ್ ಅವರ ಕಲಿ-ನಲಿ, ಆಟ-ಪಾಠ ಕ್ರಮಕ್ಕೆ ವಿರಾಟ್ ಕೊಹ್ಲಿ ಮನಸೋತಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿ ಜುಲೈ 21ರಿಂದ ಆರಂಭವಾಗಲಿದೆ.

Pics: Virat Kohli & Co visit island, enjoy team bonding session ahead of Test series with WI

ಸುಮಾರು 49 ದಿನಗಳ ಕಾಲ ಪ್ರವಾಸದಲ್ಲಿರುವ ಟೀಂ ಇಂಡಿಯಾಕ್ಕೆ ವಿರಾಮದ ವೇಳೆಯಲ್ಲಿ ಮೋಜು ಮಸ್ತಿ ಮಾಡಲು ಕಾಲಾವಕಾಶ ಸಿಕ್ಕಿದೆ.

ವಿರಾಟ್ ಕೊಹ್ಲಿ ನೇತೃತ್ವದ ಯುವ ಪಡೆ, ಕೋಚ್ ಅನಿಲ್ ಕುಂಬ್ಳೆ, ಸಹಾಯಕ ಸಿಬ್ಬಂದಿ ಎಲ್ಲರೂ ಸೇರಿ ಕೆರಿಬಿಯನ್ ದ್ವೀಪಗಳಿಗೆ ಭೇಟಿ ನೀಡಿದ್ದಾರೆ.

ಸೈಂಟ್ ನೆವಿಸ್ ದ್ವೀಪದಲ್ಲಿ ಈಜಾಟ ಮಾಡಿ ಸಂತಸದಲ್ಲಿರುವ ಕ್ಷಣಗಳನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ.

ವೆಸ್ಟ್ ಇಂಡೀಸ್ ನ ಪ್ರವಾಸಿ ಸ್ಥಳಗಳಾದ ಸೈಂಟ್ ನೇವಿಸ್ ಹಾಗೂ ಸೈಂಟ್ ಕಿಟ್ಸ್​ಗೆ ಭೇಟಿ ನೀಡಿ ಬಂದಿದ್ದಾರೆ.

ಪಿನ್ನೇಸ್ ಬೀಚ್​ಹಾಗೂ ಶೆಲ್ಟರ್ಡ್ ಔಲಿ ಬೀಚ್ ಓಡಾಡಿದ್ದಾರೆ. ಎಲ್ಲಾ ಸಂತಸ ಮಾಯ ಚಿತ್ರಗಳನ್ನು ಬಿಸಿಸಿಐ ಹಂಚಿಕೊಂಡಿದೆ.

ಕೆಲದಿನಗಳ ಹಿಂದೆ ಯೋಗಾಭ್ಯಾಸ, ಬೀಸ್ ವಾಲಿಬಾಲ್ ಆಡುತ್ತಿದ್ದ ಚಿತ್ರಗಳನ್ನು ಹೊರ ಬಿಡಲಾಗಿತ್ತು.

Thats what iam talkin about . Couldnt be a better team session. Brilliant sunny day 😎😎😎👌👌👌

A video posted by Virat Kohli (@virat.kohli) on Jul 12, 2016 at 6:47am PDT


ಈಗ ಬಿಸಿಸಿಐ ಅಲ್ಲದೆ ವಿರಾಟ್ ಕೊಹ್ಲಿ, ಕುದುರೆ ಸವಾರಿ ಪ್ರಿಯ ರವೀಂದ್ರ ಜಡೇಜ ಅವರು ಕೂಡಾ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

This is my style of training 😜✌🏻️👌🏻#fun #horselove #rajputboy

A video posted by Ravindrasinh Jadeja (@jadduboy) on Jul 11, 2016 at 3:08pm PDT

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Team India players took a day off ahead of second practice match on West Indies tour to enjoy the scenic beauty of the Caribbean islands.
Please Wait while comments are loading...