ಟೀಂ ಇಂಡಿಯಾದಿಂದ ವೆಸ್ಟ್ ಇಂಡೀಸ್ ಪ್ರವಾಸ, ಪೂರ್ಣ ವೇಳಾಪಟ್ಟಿ

Posted By:
Subscribe to Oneindia Kannada

ನವದೆಹಲಿ, ಮೇ 17 :ಜೂನ್ 18 ರಂದು ಇಂಗ್ಲೆಂಡಿನಲ್ಲಿ ಚಾಂಪಿಯನ್ಸ್ ಟ್ರೋಫಿ ಮುಗಿಸಿದ ಬಳಿಕ ಟೀಂ ಇಂಡಿಯಾ, ಕೆರಿಬಿಯನ್ ಪ್ರವಾಸಕ್ಕೆ ಸಿದ್ಧವಾಗಲಿದೆ. ವೆಸ್ಟ್ ಇಂಡೀಸ್ ನಲ್ಲಿ ಕೊಹ್ಲಿ ಪಡೆ ಏಕದಿನ ಹಾಗೂ ಟಿ20 ಸರಣಿ ಆಡಲಿದೆ.

ಜೂನ್ 23ರಿಂದ ಜುಲೈ 9ರ ತನಕ ಟೀಂ ಇಂಡಿಯಾವು ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮಂಗಳವಾರ(ಮೇ 16) ಪ್ರಕಟಿಸಿದೆ.

India to tour West Indies for 5 ODI, 1 T20I series: Here is the full schedule

ಐದು ಏಕದಿನ ಪಂದ್ಯಗಳ ಸರಣಿ ಹಾಗೂ ಒಂದು ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಉಭಯ ತಂಡಗಳು ಆಡಲಿವೆ. ಮೊದಲ ಏಕದಿನ ಪಂದ್ಯ ಜೂನ್ 23ರಂದು ನಡೆಯಲಿದೆ.

ವೇಳಾಪಟ್ಟಿ:
ಮೊದಲ ಏಕದಿನ ಪಂದ್ಯ: ಜೂನ್ 23: ಕ್ವೀನ್ಸ್ ಪಾರ್ಕ್ ಒವಲ್(ಪೋರ್ಟ್ ಆಫ್ ಸ್ಪೇನ್)
ಎರಡನೇ ಏಕದಿನ ಪಂದ್ಯ: ಜೂನ್ 25 : ಕ್ವೀನ್ಸ್ ಪಾರ್ಕ್ ಒವಲ್(ಪೋರ್ಟ್ ಆಫ್ ಸ್ಪೇನ್)
ಮೂರನೇ ಏಕದಿನ ಪಂದ್ಯ : ಜೂನ್ 30 : ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂ (ಅಂಟಿಗುವಾ)
ನಾಲ್ಕನೇ ಏಕದಿನ ಪಂದ್ಯ : ಜುಲೈ 02 : ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂ (ಅಂಟಿಗುವಾ)
ಐದನೇ ಏಕದಿನ ಪಂದ್ಯ: ಜುಲೈ 06,ಸಬೀನಾ ಪಾರ್ಕ್ (ಜಮೈಕಾ)

ಏಕೈಕ ಟಿ20 ಪಂದ್ಯ :ಜುಲೈ 09,ಸಬೀನಾ ಪಾರ್ಕ್ (ಜಮೈಕಾ)

ಚಾನೆಲ್ :ಟೆನ್ ಸ್ಫೋರ್ಟ್ಸ್, ಟೆನ್ 1
(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Team India will embark upon a tour of West Indies after the conclusion of the ICC Champions Trophy in England on June 18.
Please Wait while comments are loading...