ಮಳೆಗಾಲದಲ್ಲಿ ಟೀಂ ಇಂಡಿಯಾದಿಂದ ಬಾಂಗ್ಲಾ ಪ್ರವಾಸ

Posted By:
Subscribe to Oneindia Kannada

ನವದೆಹಲಿ, ಮೇ.5: ವಿಶ್ವಕಪ್ 2015ರ ನಂತರ ಐಪಿಎಲ್ 8 ಟೂರ್ನಿಯಲ್ಲಿ ಆಡುತ್ತಿರುವ ಟೀಂ ಇಂಡಿಯಾ ಆಟಗಾರರು ಜೂನ್ ತಿಂಗಳಿನಲ್ಲಿ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದ್ದಾರೆ.

ಬಾಂಗ್ಲಾದೇಶದಲ್ಲಿ ಒಂದು ಟೆಸ್ಟ್ ಪಂದ್ಯ ಹಾಗೂ ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಟೀಂ ಇಂಡಿಯಾ ಆಡಲಿದೆ. ಜೂನ್. 7ರಂದು ಬಾಂಗ್ಲಾದೇಶಕ್ಕೆ ತೆರಳಲಿರುವ ಭಾರತ ತಂಡ ಫಾತುಲ್ಲಾ ಮೈದಾನದಲ್ಲಿ ಜೂ.10ರಂದು ಮೊದಲ ಟೆಸ್ಟ್ ಪಂದ್ಯವನ್ನಾಡಲಿದೆ.

India to tour Bangladesh next month

ಟೆಸ್ಟ್ ಪಂದ್ಯಕ್ಕೂ ಮುನ್ನ ಅಭ್ಯಾಸ ಪಂದ್ಯವನ್ನಾಡಲಿರುವ ಟೀಂ ಇಂಡಿಯಾ ಇದೇ ಮೊದಲ ಬಾರಿಗೆ ಕಳೆದ 9 ವರ್ಷಗಳ ನಂತರ ಫಾತುಲ್ಲಾ ಕ್ರೀಡಾಂಗಣದಲ್ಲಿ ಟೆಸ್ಟ್ ಪಂದ್ಯ ಆಡಲಿದೆ.

[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]

ಮಳೆಗಾಲದಲ್ಲಿ ಕ್ರಿಕೆಟ್ ಆಟ?: ಜೂನ್ ತಿಂಗಳಿನಲ್ಲಿ ಮುಂಗಾರು ಮಳೆ ಅಬ್ಬರ ಶುರುವಾಗುವುದರಿಂದ ಏಕದಿನ ಕ್ರಿಕೆಟ್ ಪಂದ್ಯಗಳಿಗೆ ರಿಸರ್ವ್ ಡೇ ಕಾಯ್ದಿರಿಸಲಾಗಿದೆ. [ಹವಾಮಾನ ಇಲಾಖೆಯಿಂದ ಭಾರೀ ಮಳೆ ಮುನ್ನೆಚ್ಚರಿಕೆ]

ಸಾಮಾನ್ಯವಾಗಿ ಬಾಂಗ್ಲಾದೇಶದಲ್ಲಿ ಜೂನ್, ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಿನಲ್ಲಿ ಟೆಸ್ಟ್ ಪಂದ್ಯ ಆಯೋಜನೆ ಮಾಡುವುದಿಲ್ಲ. ಮಳೆ ನಡುವೆಯೂ ಪಂದ್ಯ ನಡೆಸುವುದಕ್ಕೆ ಬಿಸಿಸಿಐ ಅನುಮೋದನೆ ಮಾಡಿದೆ.

ಟೀಂ ಇಂಡಿಯಾದ ಪ್ರವಾಸದ ನಂತರ ಬಾಂಗ್ಲಾದೇಶ ಜುಲೈ- ಆಗಸ್ಟ್ ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಬಾಂಗ್ಲಾದೇಶ ಸದ್ಯಕ್ಕೆ ಪಾಕಿಸ್ತಾನ ವಿರುದ್ಧ ಏಕದಿನ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿದೆ. ಏಕೈಕ ಟ್ವೆಂಟಿ 20 ಪಂದ್ಯದಲ್ಲೂ ಜಯ ಗಳಿಸಿದೆ. ಎರಡು ಟೆಸ್ಟ್ ಗಳ ಸರಣಿಯಲ್ಲಿ ಮೊದಲ ಟೆಸ್ಟ್ ಪಂದ್ಯದಲ್ಲಿ ಇಕ್ಬಾಲ್ ದ್ವಿಶತಕ ಸೇರಿದಂತೆ ಬಾಂಗ್ಲಾದೇಶ ಉತ್ತಮ ಪ್ರದರ್ಶನ ನೀಡಿದೆ.

ಟೀಂ ಇಂಡಿಯಾ ಬಾಂಗ್ಲಾ ಪ್ರವಾಸದ ವೇಳಾಪಟ್ಟಿ:
ಜೂನ್ 7 (ಭಾನುವಾರ) : ಬಾಂಗ್ಲಾದೇಶಕ್ಕೆ ಭಾರತ ತಂಡದ ಆಗಮನ.
ಜೂನ್ 8,9: ಅಭ್ಯಾಸ.
ಜೂನ್ 10-14(ಬುಧವಾರ ದಿಂದ ಭಾನುವಾರ): ಮೊದಲ ಟೆಸ್ಟ್.
ಜೂನ್ 15,16 ಹಾಗೂ 17: ಅಭ್ಯಾಸ.
ಜೂನ್ 18 (ಗುರುವಾರ) : ಮೊದಲ ಏಕದಿನ ಪಂದ್ಯ
ಜೂನ್ 19: ರಿಸರ್ವ್ ಡೇ.
ಜೂನ್ 20: ಅಭ್ಯಾಸ
ಜೂನ್ 21 (ಭಾನುವಾರ): 2ನೇ ಏಕದಿನ ಪಂದ್ಯ
ಜೂನ್ 22: ರಿಸರ್ವ್ ಡೇ.
ಜೂನ್ 23 : ಅಭ್ಯಾಸ.
ಜೂನ್ 24 (ಬುಧವಾರ) : 3ನೇ ಏಕದಿನ ಪಂದ್ಯ
ಜೂನ್ 25: ರಿಸರ್ವ್ ಡೇ.
ಜೂನ್ 26: ಬಾಂಗ್ಲಾದೇಶದಿಂದ ಭಾರತ ತಂಡದ ನಿರ್ಗಮನ.
(ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Indian cricket team will tour Bangladesh next month to play a one-off Test and three one-day internationals. India will leave for Bangladesh on June 7 and the first Test will be hosted in Fatullah - the venue will host a Test after nine years - starting June 10.
Please Wait while comments are loading...