ಅಂಡರ್ 19 ವಿಶ್ವಕಪ್: ಲಂಕಾ ಮಣಿಸಿದ ಭಾರತ ಫೈನಲಿಗೆ ಲಗ್ಗೆ

Posted By:
Subscribe to Oneindia Kannada

ಮೀರ್ಪುರ (ಬಾಂಗ್ಲಾದೇಶ), ಫೆ. 09: ಅನ್ಮೋಲ್ ಪ್ರೀತ್ ಸಿಂಗ್ (72) ಹಾಗೂ ಸರ್ಫರಾಜ್ ಖಾನ್ (59) ಅವರ ಸಮಯೋಚಿತ ಆಟದ ನೆರವಿನಿಂದ ಟೀಂ ಇಂಡಿಯಾ ಕಿರಿಯರ ತಂಡ ಅಂಡರ್ 19 ವಿಶ್ವಕಪ್ ಫೈನಲ್ ಪ್ರವೇಶಿಸಿದೆ. ಮಂಗಳವಾರ (ಫೆಬ್ರವರಿ 09) ನಡೆದ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 97 ರನ್ ಗಳಿಂದ ಮಣಿಸಿದ ಇಶಾನ್ ಕಿಶಾನ್ ನೇತೃತ್ವದ ತಂಡ ವಿಜಯೋತ್ಸವ ಆಚರಿಸುತ್ತಿದೆ.

ರಾಹುಲ್ ದ್ರಾವಿಡ್ ಅವರಿಂದ ಕೋಚಿಂಗ್ ಪಡೆದಿರುವ ಟೀಂ ಇಂಡಿಯಾಗೆ ಇದು ಅಂಡರ್ 19 ವಿಶ್ವಕಪ್ ನ ಐದನೇ ಫೈನಲ್ ಪ್ರವೇಶವಾಗಿದೆ. 2000,2008 ಹಾಗೂ 2012ರಲ್ಲಿ ವಿಶ್ವಕಪ್ ಎತ್ತಿದ್ದಾರೆ.

India thrash Sri Lanka to enter final of Under-19 World Cup

ಷೇರ್ ಎ ಬಾಂಗ್ಲಾ ಮೈದಾನದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ 267/9 ಸ್ಕೋರ್ ಮಾಡಿತು. ಅನ್ಮೋಲ್ ಪ್ರೀತ್ ಸಿಂಗ್ 72(92ಎಸೆತ, 6X4, 1X6) ಹಾಗೂ ಸರ್ಫರಾಜ್ ಖಾನ್ 59 ರನ್(71 ಎಸೆತ, 6X4, 1X6) ಅಲ್ಲದೆ ವಾಷಿಂಗ್ಟನ್ ಸುಂದರ್ 43ರನ್ ಗಳಿಸಿದರು.

ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ಸರ್ಫರಾಜ್ ಖಾನ್ ಈ ಟೂರ್ನಿಯಲ್ಲಿ ನಾಲ್ಕು ಅರ್ಧಶತಕ ಸಿಡಿಸಿದ್ದು, 5 ಇನ್ನಿಂಗ್ಸ್ ನಲ್ಲಿ 76ರನ್ ಸರಾಸರಿಯಂತೆ 304 ರನ್ ಗಳಿಸಿ ಗಮನ ಸೆಳೆದಿದ್ದಾರೆ. ಶ್ರೀಲಂಕಾ ಪರ ಆಸಿತಾ ಫರ್ನಾಂಡೋ 10 ಓವರ್ ಗಳಲ್ಲಿ 4/43 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.


ಇದಕ್ಕೆ ಉತ್ತರವಾಗಿ ಶ್ರೀಲಂಕಾ ತಂಡ ಮೊದಲ 4 ಓವರ್ ಗಳಲ್ಲೇ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಈಡಾಯಿತು. 27.4 ಓವರ್ ಗಳಲ್ಲಿ 108/5 ಸ್ಕೋರ್ ಮಾಡಿದ್ದ ಶ್ರೀಲಂಕಾ ಕೊನೆಗೆ 42.4 ಓವರ್ಸ್ ಗಳಲ್ಲಿ 170 ಸ್ಕೋರಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು. ಭಾರತ ಪರ ಎಡಗೈ ಸ್ಪಿನ್ನರ್ ಮಾಯಾಂಗ್ ಡಾಗರ್ 3/21 ವಿಕೆಟ್ ಪಡೆದು ಯಶಸ್ವಿ ಪ್ರದರ್ಶನ ನೀಡಿದರು. ಭಾನುವಾರ (ಫೆಬ್ರವರಿ 14) ರಂದು ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಬಾಂಗ್ಲಾದೇಶ ಅಥವಾ ವೆಸ್ಟ್ ಇಂಡೀಸ್ ತಂಡವನ್ನು ಭಾರತ ಎದುರಿಸಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Anmolpreet Singh (72) and Sarfaraz Khan (59) starred with the bat as India defeated Sri Lanka by 97 runs to enter the final of the ICC Under-19 Cricket World Cup here on Tuesday (February 9). This is the 5th time India have entered the summit clash of U-19 World Cup. They won the title thrice (2000, 2008, 2012).
Please Wait while comments are loading...