ಆಸ್ಟ್ರೇಲಿಯಾ ವಿರುದ್ಧದ 3 ಏಕದಿನ ಪಂದ್ಯಗಳಿಗೆ ಭಾರತ ತಂಡ ಪ್ರಕಟ

Posted By:
Subscribe to Oneindia Kannada

ಬೆಂಗಳೂರು, ಸೆ. 10:ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯ ಮೊದಲ ಮೂರು ಪಂದ್ಯಗಳಿಗೆ ಟೀಂ ಇಂಡಿಯಾವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಭಾನುವಾರ (ಸೆಪ್ಟೆಂಬರ್ 10)ದಂದು ಪ್ರಕಟಿಸಿದೆ.

ದ್ರಾವಿಡ್ ತಂಡ ವಿರುದ್ಧ ಬಾಂಡ್ ತಂಡ, ಕಿವೀಸ್ ಎ ಭಾರತ ಪ್ರವಾಸ

ಎಂಎಸ್ ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ, ಹಿರಿಯ ಆಟಗಾರರಾದ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜ ಅವರಿಗೆ ವಿಶ್ರಾಂತಿ ನೀಡಿದೆ. ಆದರೆ, ರೊಟೇಷನ್ ನಿಯಮ ಪಾಲಿಸಲಾಗುತ್ತಿದ್ದು, ಹಿರಿಯ ಆಟಗಾರರನ್ನು ಬಳಸಿಕೊಳ್ಳಲಾಗುತ್ತದೆ ಎಂದು ಸಮಿತಿ ಹೇಳಿದೆ.

India Squad Announced For First 3 ODIs Against Australia annonced

ವೇಗಿಗಳಾದ ಮೊಹಮ್ಮದ್ ಶಮಿ ಹಾಗೂ ಉಮೇಶ್ ಯಾದವ್ ಅವರು ತಂಡಕ್ಕೆ ಮರಳಿದ್ದಾರೆ.ಆಸ್ಟ್ರೇಲಿಯಾ ವಿರುದ್ಧದ 5 ಏಕದಿನ ಪಂದ್ಯಗಳ ಪೈಕಿ ಮೂರು ಪಂದ್ಯಗಳಿಗೆ ಮಾತ್ರ ತಂಡ ಪ್ರಕಟಿಸಲಾಗಿದೆ. ಜತೆಗೆ ಪ್ರವಾಸಿ ನ್ಯೂಜಿಲೆಂಡ್ 'ಎ' ವಿರುದ್ಧ ಎರಡು ನಾಲ್ಕು ದಿನಗಳ ಪಂದ್ಯಗಳನ್ನಾಡಲಿರುವ ಭಾರತ 'ಎ' ತಂಡವನ್ನು ಪ್ರಕಟಿಸಲಾಗಿದೆ.

ಆಸ್ಟ್ರೇಲಿಯಾ ವಿರುದ್ಧದ ಸರಣಿ ಸೆಪ್ಟೆಂಬರ್ 17ರಿಂದ ನಡೆಯಲಿದೆ. ಮೊದಲ ಮೂರು ಪಂದ್ಯಗಳು ಚೆನ್ನೈ, ಕೋಲ್ಕತಾ ಹಾಗೂ ಇಂದೋರ್ ನಲ್ಲಿ ಆಯೋಜನೆಗೊಂಡಿದೆ. ನಂತರ ಬೆಂಗಳೂರು ಹಾಗೂ ನಾಗ್ಪುರದಲ್ಲಿ ಮುಂಡಿನ ಪಂದ್ಯಗಳು ನಡೆಯಲಿವೆ. ನಂತರ ಮೂರು ಟಿ20ಐ ಪಂದ್ಯಗಳ ಸರಣಿ ನಿಗದಿಯಾಗಿದೆ.

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮ (ಉಪ ನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ಮನೀಶ್ ಪಾಂಡೆ, ಕೇದಾರ್ ಜಾಧವ್, ಅಜಿಂಕ್ಯ ರಹಾನೆ, ಎಂಎಸ್ ಧೋನಿ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜುವೇಂದ್ರ ಯಾದವ್, ಜಸ್ ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ಮೊಹಮ್ಮದ್ ಶಮಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Virat Kohli will lead India in the first three ODI's against Australia, the BCCI selection committee announced on Sunday, September 10.Mohammed Shami, Umesh Yadav return and R Ashwin and Ravindra Jadeja have been rested
Please Wait while comments are loading...