ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2018ರ ಆರಂಭದಲ್ಲಿ ಭಾರತ- ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ

By Mahesh

ನವದೆಹಲಿ, ಸೆ. 19: ಭಾರತದಲ್ಲಿ ಸರಿ ಸುಮಾರು 23 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಬಳಿಕ ಟೀಂ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ನಡೆಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಉದ್ದೇಶಿಸಿದೆ. ಜನವರಿ ಮೊದಲ ವಾರದಲ್ಲಿ ಈ ಟೆಸ್ಟ್ ಸರಣಿ ಆಯೋಜಿಸಲು ನಿರ್ಧರಿಸಲಾಗಿದೆ.

ಚೆನ್ನೈನಲ್ಲಿ ಪಂದ್ಯ ಮುಗಿದ ಬಳಿಕ 'ಕಿಂಗ್' ಧೋನಿ ಮಾಡಿದ್ದೇನು? ಚೆನ್ನೈನಲ್ಲಿ ಪಂದ್ಯ ಮುಗಿದ ಬಳಿಕ 'ಕಿಂಗ್' ಧೋನಿ ಮಾಡಿದ್ದೇನು?

ಫಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಪಡೆ ಜನವರಿ 5 ಅಥವಾ 6ರಂದು ಕೇಪ್ ಟೌನ್ ನಲ್ಲಿ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿ ನಡೆಯುವ ಸಾಧ್ಯತೆಯಿದೆ.

India-South Africa Test series likely to begin from January 5

ಡಿಸೆಂಬರ್ ಅಂತ್ಯಕ್ಕೆ ಭಾರತದಿಂದ ದಕ್ಷಿಣ ಆಫ್ರಿಕಾಕ್ಕೆ ಕೊಹ್ಲಿ ಪಡೆ ತೆರಳಲಿದೆ. ದಕ್ಷಿಣ ಆಫ್ರಿಕಾದಲ್ಲಿ ನಾಲ್ಕು ಟೆಸ್ಟ್ ಪಂದ್ಯ, ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಹಾಗೂ ಮೂರು ಟಿ20ಐ ಪಂದ್ಯಗಳನ್ನಾಡಲಿದೆ.

ಜನವರಿ ಮೊದಲ ವಾರದಲ್ಲಿ ನ್ಯೂಲ್ಯಾಂಡ್ಸ್ ನಲ್ಲಿ ಟೆಸ್ಟ್ ಸರಣಿ ನಡೆಸಲು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಮುಂದಾಗಿದೆ. ಆದರೆ, ಬಿಸಿಸಿಐ ಜನವರಿ 5ರ ನಂತರ ಸರಣಿ ನಡೆಸುವಂತೆ ಕೇಳಿಕೊಂಡಿದೆ.

ತವರು ನೆಲದಲ್ಲಿ ಡಿಸೆಂಬರ್ 24ಕ್ಕೆ ಭಾರತ ಹಾಗೂ ಶ್ರೀಲಂಕಾ ನಡುವಿನ ಸರಣಿ ಮುಗಿಯಲಿದೆ. ಭಾರತ ವಿರುದ್ಧದ ಸರಣಿಗೆ ಎಬಿ ಡಿ ವಿಲಿಯರ್ಸ್ ಅವರು ರೀ ಎಂಟ್ರಿ ಕೊಡುವ ಸಾಧ್ಯತೆ ನಿಚ್ಚಳವಾಗಿದೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X