ಅಂಡರ್ 19 ವಿಶ್ವಕಪ್: ಭಾರತದ ರಿಷಬ್ ರಿಂದ ವಿಶ್ವದಾಖಲೆ

Posted By:
Subscribe to Oneindia Kannada

ಢಾಕಾ, ಫೆ. 01: ಅಂಡರ್ 19 ವಿಶ್ವಕಪ್ ನಲ್ಲಿ ಇಶಾನ್ ಕಿಶಾನ್ ನೇತೃತ್ವದ ಟೀಂ ಇಂಡಿಯಾ ತನ್ನ ಯಶಸ್ಸಿನ ಓಟ ಮುಂದುವರೆಸಿದೆ. ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಅವರು ಸೋಮವಾರ (ಫೆಬ್ರವರಿ 01) ತ್ವರಿತ ಗತಿಯಲ್ಲಿ ಅರ್ಧಶತಕ ಸಿಡಿಸಿ ಹೊಸ ವಿಶ್ವಕಪ್ ದಾಖಲೆ ಬರೆದಿದ್ದಾರೆ.

ರಿಷಬ್ ಪಂತ್ ಅವರು ಕೇವಲ 18 ಎಸೆತಗಳಲ್ಲಿ 50ರನ್ ಗಡಿ ದಾಟಿದ್ದಲ್ಲದೆ 24 ಎಸೆತಗಳಲ್ಲಿ 78ರನ್ ಸಿಡಿಸಿದರು. ಒಟ್ಟಾರೆ 5 ಸಿಕ್ಸರ್ ಹಾಗೂ 9 ಬೌಂಡರಿಗಳನ್ನು ಬಾರಿಸಿದರು. [ಸರ್ಫರಾಜ್ ಸಕತ್ ಆಟ, ಭಾರತ ಕ್ವಾರ್ಟರ್ ಫೈನಲಿಗೆ ಲಗ್ಗೆ]

India's Rishabh Pant smashes fastest fifty in U-19 World Cup history

ಈ ಹಿಂದಿನ ಐಸಿಸಿ ಅಂಡರ್ 19 ವಿಶ್ವಕಪ್ ತ್ವರಿತ ಗತಿ ಅರ್ಧಶತಕದ ದಾಖಲೆ ವೆಸ್ಟ್ ಇಂಡೀಸ್ ನ ಆಟಗಾರ ಟ್ರೆವನ್ ಗ್ರಿಫಿತ್ ಅವರ ಹೆಸರಿನಲ್ಲಿತ್ತು. ಗ್ರಿಫಿತ್ ಅವರು 2009-10ರ ವಿಶ್ವಕಪ್ ನಲ್ಲಿ 19 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು.

ಡಿ ಗುಂಪಿನ ಪಂದ್ಯದಲ್ಲಿ ನೇಪಾಳ ತಂಡ ಒಡ್ಡಿದ್ದ 170ರನ್ ಗಳ ಮೊತ್ತವನ್ನು ಸುಲಭವಾಗಿ ಬೆನ್ನಟ್ಟಿದ್ದ ಟೀಂ ಇಂಡಿಯಾದ ಕಿರಿಯರ ತಂಡ ಡಿ ಗುಂಪಿನ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಈಗಾಗಲೇ ಭಾರತ ತಂಡ ಕ್ವಾರ್ಟರ್ ಫೈನಲ್ ತಲುಪಿದೆ.[ಅಂಡರ್ 19 ವಿಶ್ವಕಪ್ : ಐರ್ಲೆಂಡ್ ವಿರುದ್ಧ ಭಾರತಕ್ಕೆ ಜಯ]

ಮೊದಲು ಬ್ಯಾಟಿಂಗ್ ಮಾಡಿದ ನೇಪಾಳ ತಂಡ 29.5 ಓವರ್ ಗಳಲ್ಲಿ 169/8 ಗಳಿಸಿತ್ತು. ಇದಕ್ಕೆ ಉತ್ತರವಾಗಿ ರಿಷಬ್ ಪಂತ್ (24 ಎಸೆತಗಳಲ್ಲಿ 78ರನ್), ಇಶಾನ್ ಕಿಶನ್ 40ಎಸೆತಗಳಲ್ಲಿ 50ರನ್, ಅವೇಶ್ ಖಾನ್ 3/34 ಗಳಿಸಿ ಗೆಲುವಿನ ರೂವಾರಿಗಳಾದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Team India's U-19 opener Rishabh Pant made it to record books by smashing fastest fifty of U-19 ICC cricket World Cup. The wicket-keeper batsman took just 18 deliveries to slam his fifty in the 3rd game against Nepal on Monday, February 1
Please Wait while comments are loading...