ಕಿವೀಸ್ ವಿರುದ್ಧದ 3 ಏಕದಿನ ಪಂದ್ಯಕ್ಕೆ ಭಾರತ ತಂಡ ಪ್ರಕಟ

Posted By:
Subscribe to Oneindia Kannada

ಮುಂಬೈ, ಅಕ್ಟೋಬರ್ 06: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೂರು ಏಕದಿನ ಕ್ರಿಕೆಟ್ ಪಂದ್ಯಗಳಿಗೆ ಭಾರತ ತಂಡವನ್ನು ಗುರುವಾರ ಸಂಜೆ ಪ್ರಕಟಿಸಲಾಗಿದೆ. ಎಂಎಸ್ ಕೆ ಪ್ರಸಾದ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ ಪ್ರಕಟಿಸಿರುವ ತಂಡಕ್ಕೆ ಸುರೇಶ್ ರೈನಾ ಮರಳಿದ್ದರೆ, ಕರ್ನಾಟಕದ ಮನೀಶ್ ಪಾಂಡೆ ಆಯ್ಕೆಯಾಗಿದ್ದಾರೆ.

ಏಕದಿನ ಸರಣಿ ವೇಳಾಪಟ್ಟಿ

5 ಪಂದ್ಯಗಳ ಏಕದಿನ ಸರಣಿಯ ಮೊದಲ ಮೂರು ಏಕದಿನ ಪಂದ್ಯಗಳಿಗೆ 15 ಮಂದಿ ತಂಡವನ್ನು ಪ್ರಕಟಿಸಲಾಗಿದೆ. ಯುವರಾಜ್ ಸಿಂಗ್ ರನ್ನು ಕಡೆಗಣಿಸಲಾಗಿದ್ದರೆ, ಆಲ್ ರೌಂಡರ್ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜ ಅವರಿಗೆ ವಿಶ್ರಾಂತಿ ನೀಡಲಾಗಿದೆ.[ಭಾರತ ವಿರುದ್ದದ ಏಕದಿನ ಸರಣಿಗೆ ಕೋರೆ ಆಂಡರ್ಸನ್]

India's squad for 1st 3 ODIs against New Zealand announced; Yuvraj ignored, Ashwin rested

ಮೊದಲ ಏಕದಿನ ಪಂದ್ಯ ಧರ್ಮಶಾಲದಲ್ಲಿ ಅಕ್ಟೋಬರ್ 16ರಂದು ಆರಂಭವಾಗಲಿದೆ. ಅಕ್ಟೋಬರ್ 29ರಂದು ವಿಶಾಖಪಟ್ಟಣಂನಲ್ಲಿ ಐದನೇ ಹಾಗೂ ಅಂತಿಮ ಪಂದ್ಯ ನಿಗದಿಯಾಗಿದೆ.[ಭಾರತ- ಕಿವೀಸ್ ಸರಣಿ, ಯಾವ ದಾಖಲೆಗಳು ಧ್ವಂಸವಾಗಲಿವೆ?]

ತಂಡ ಇಂತಿದೆ: ಎಂಎಸ್ ಧೋನಿ(ನಾಯಕ), ರೋಹಿತ್ ಶರ್ಮ, ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ, ಮನೀಶ್ ಪಾಂಡೆ, ಸುರೇಶ್ ರೈನಾ, ಹಾರ್ದಿಕ್ ಪಾಂಡ್ಯ. ಅಕ್ಷರ್ ಪಟೇಲ್, ಜಯಂತ್ ಯಾದವ್, ಅಮಿತ್ ಮಿಶ್ರಾ, ಜಸ್ಪ್ರೀತ್ ಬೂಮ್ರಾ, ಧವಳ್ ಕುಲಕರ್ಣಿ, ಉಮೇಶ್ ಯಾದವ್, ಮನ್ದೀಪ್ ಸಿಂಗ್, ಕೇದಾರ್ ಜಾಧವ್[ಧೋನಿಗೆ 3 ದಾಖಲೆ ಮುರಿಯುವ ಚಾನ್ಸ್]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's ODI squad for the first three games of the 5-match series has been announced on Thursday (OCt 6). MS Dhoni has been named the captain while Suresh Raina has returned into the squad.
Please Wait while comments are loading...