ಭಾರತ ಕೂಡಾ 'ಪಿಂಕ್ ಬಾಲ್ ಟೆಸ್ಟ್' ಆಡಲು ಸಿದ್ಧ : ಬಿಸಿಸಿಐ

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 22: ಟೆಸ್ಟ್ ಕ್ರಿಕೆಟ್ ಪಂದ್ಯಗಳಿಗೆ ಹೆಚ್ಚೆಚ್ಚು ಪ್ರೇಕ್ಷಕರನ್ನು ಆಕರ್ಷಿಸಲು ಬಿಸಿಸಿಐ ಮುಂದಾಗಿದೆ. ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವಿನ ಹಗಲು/ರಾತ್ರಿ ಟೆಸ್ಟ್ ಪಂದ್ಯ ಯಶಸ್ವಿಯಾದ ಬೆನ್ನಲ್ಲೇ ಭಾರತ ಕೂಡಾ ಪಿಂಕ್ ಬಾಲ್ ಬಳಸುವ ಟೆಸ್ಟ್ ಪಂದ್ಯ ಆಡಲು ಸಿದ್ಧ ಎಂದು ಬಿಸಿಸಿಐ ಘೋಷಿಸಿದೆ.

ಈ ವರ್ಷಾಂತ್ಯಕ್ಕೆ ನ್ಯೂಜಿಲೆಂಡ್ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ಟೀಮ್ ಇಂಡಿಯಾ ಪಿಂಕ್ ಬಾಲ್​ನಲ್ಲಿ ತನ್ನ ಪ್ರಪ್ರಥಮ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಆಡಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಹೇಳಿದ್ದಾರೆ.

India to play their first day-night Test this year at home: BCCI

'ನ್ಯೂಜಿಲೆಂಡ್ ವಿರುದ್ಧ ಪಿಂಕ್ ಬಾಲ್​ನಲ್ಲಿ ಹಗಲು ರಾತ್ರಿ ಟೆಸ್ಟ್ ಆಡಲು ನಿರ್ಧಾರ ಮಾಡಿದ್ದೇವೆ. ಇದಕ್ಕೂ ಮುನ್ನ ದುಲೀಪ್ ಟ್ರೋಫಿ ಟೂರ್ನಿಯನ್ನು ಅಹರ್ನಿಶಿ ಟೆಸ್ಟ್ ಪಂದ್ಯದ ಅಭ್ಯಾಸಕ್ಕಾಗಿ ಬಳಸಿಕೊಳ್ಳಲಿದ್ದೇವೆ' ಎಂದು ತಿಳಿಸಿದ್ದಾರೆ.

ಯಾವ ಸ್ಥಳದಲ್ಲಿ ಪಂದ್ಯ ನಡೆಸಬೇಕು ಎನ್ನುವುದನ್ನು ನಿರ್ಧಾರ ಮಾಡಿಲ್ಲ. ಇದಕ್ಕಾಗಿ ಸಾಕಷ್ಟು ತಯಾರಿಯ ಅಗತ್ಯವಿದೆ. ಇಬ್ಬನಿ ಸಮಸ್ಯೆ, ಭಾರತೀಯ ಪಿಚ್​ಗಳಲ್ಲಿ ಪಿಂಕ್ ಬಾಲ್ ಬಳಸಿಕೊಂಡು ಸ್ಪಿನ್ನರ್​ಗಳ ಬೌಲಿಂಗ್ ಯಾವ ರೀತಿ ಇರಲಿದೆ. ಈ ಎಲ್ಲ ಪ್ರಶ್ನೆಗಳಿಗೆ ದುಲೀಪ್ ಟ್ರೋಫಿ ವೇಳೆ ಉತ್ತರ ಸಿಗಲಿದೆ' ಎಂದಿದ್ದಾರೆ.

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯ ಅಕ್ಟೋಬರ್ ತಿಂಗಳ ಕೊನೆ ವಾರದಲ್ಲಿ ನಡೆಯಬಹುದು. ಇದಲ್ಲದೆ, ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ಕೂಡಾ ಹಗಲು ರಾತ್ರಿ ಟೆಸ್ಟ್ ಪಂದ್ಯ ಆಡಲು ಸಿದ್ಧತೆ ನಡೆಸಿರುವ ಸುದ್ದಿ ಬಂದಿದೆ. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
In order to raise the ever dwindling number of spectators in the stadium, the BCCI is all set to host its first-ever Day/Night cricket Test with pink ball when New Zealand tour India later this year.
Please Wait while comments are loading...