ಭಾರತ ವಿರುದ್ಧದ ಪಂದ್ಯ ಸ್ಥಳಾಂತರಕ್ಕೆ ಪಾಕಿಸ್ತಾನದಿಂದ ಮನವಿ

By: ರಮೇಶ್ ಬಿ
Subscribe to Oneindia Kannada

ನವದೆಹಲಿ. ಮಾರ್ಚ್.09: ಮಾರ್ಚ್ 19 ರಂದು ಧರ್ಮಶಾಲ ಕ್ರೀಡಾಂಗಣದಲ್ಲಿ ನಿಗದಿಯಾಗಿರುವ ಭಾರತ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ನಡುವಣ ವಿಶ್ವ ಟಿ20 ಪಂದ್ಯವನ್ನು ಬೇರೆಡೆಗೆ ಸ್ಥಳಾಂತರಿಸಬೇಕೆಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಐಸಿಸಿಗೆ ಮನವಿ ಮಾಡಿಕೊಂಡಿದೆ. ಇದಕ್ಕೆ ಐಸಿಸಿ ಒಪ್ಪಿದರೆ ಕೋಲ್ಕತ್ತಾಗೆ ಪಂದ್ಯ ಶಿಫ್ಟ್ ಆಗುವ ಸಾಧ್ಯತೆಯಿದೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ

ಪಾಕಿಸ್ತಾನಿ ಭಯೋತ್ಪಾದಕರು ನಡೆಸಿದ ಪಠಾಣ್ ಕೋಟ್ ವಾಯುನೆಲೆ ಮೇಲೆ ದಾಳಿಯಲ್ಲಿ ಹಿಮಾಚಲ ಪ್ರದೇಶದ ಯೋಧರು ಮೃತಪಟ್ಟಿದ್ದರಿಂದ ಇಂಡೋ ಪಾಕ್ ಪಂದ್ಯಕ್ಕೆ ಹಿಮಾಚಲ ಪ್ರದೇಶದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪಂದ್ಯವನ್ನು ಬೇರೆ ಕಡೆ ಸ್ಥಳಾಂತರಿಸಬೇಕೆಂದು ಕೋರಿ ಮಂಗಳವಾರ ಪಾಕಿಸ್ತಾನ ಕ್ರಿಕೆಟ್ ಬೋರ್ಡ್(ಪಿಸಿಬಿ) ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಗೆ ಪತ್ರ ಬರೆದಿದೆ. [ವಿಶ್ವ ಟಿ20: ಭಾರತ-ಪಾಕ್ ಪಂದ್ಯಕ್ಕೆ ತೀವ್ರ ವಿರೋಧ]

ಆದರೆ, ಬಿಸಿಸಿಐ ಮಾತ್ರ ಯಾವುದೇ ಬದಲಾವಣೆಗಳು ಇಲ್ಲ ಧರ್ಮಶಾಲದಲ್ಲಿಯೇ ಭಾರತ ಪಾಕ್ ಪಂದ್ಯ ನಡೆಯಲಿದೆ ಎಂದು ಹೇಳುತ್ತಿದೆ. ಇತ್ತ ಪಾಕ್ ಕ್ರಿಕೆಟ್ ಬೋರ್ಡ್ ಕೊಲ್ಕತ್ತಾ ಇಲ್ಲ ಮೊಹಲಿಗೆ ಪಂದ್ಯವನ್ನು ಸ್ಥಳಾಂತರ ಮಾಡಿ ಎಂದು ಹೇಳುತ್ತಿರುವುದು ಬಿಸಿಸಿಐಗೆ ಬಿಸಿತುಪ್ಪವಾಗಿ ಪರಿಗಣಿಸಿದೆ. [ಐಸಿಸಿ ವಿಶ್ವ ಟ್ವೆಂಟಿ20 ಟೂರ್ನಿಗೆ ಫುಲ್ ಗೈಡ್]

PCB asks ICC to shift venue from Dharamshala

ಇತ್ತೀಚೆಗೆ ಪಾಕಿಸ್ತಾನ ಅಧಿಕಾರಿಗಳ ತಂಡ ಭದ್ರತೆ ಪರಿಶೀಲನೆಗೆ ಭಾರತಕ್ಕೆ ಬಂದು ಭದ್ರತೆಯನ್ನು ಪರಿಶೀಲಿಸಿ ಪಂದ್ಯವನ್ನು ನಡೆಸಬಹುದು ಯಾವುದೇ ತೊಂದರೆ ಇಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರೂ, ಪಾಕ್ ಕ್ರಿಕೆಟ್ ಬೋರ್ಡ್ ಮಾತ್ರ ಧರ್ಮಶಾಲಾದಲ್ಲಿ ಆಡಲು ಹಿಂಜರಿಯುತ್ತಿದೆ.[ಸೆಹ್ವಾಗ್ ಆಯ್ಕೆಯ ಫೇವರಿಟ್ 4 ತಂಡ?]

ಧರ್ಮಶಾಲಾ ಪಂದ್ಯಕ್ಕೆ ವಿಶೇಷ ಭಾರಿ ಭದ್ರತೆಯನ್ನು ನೀಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಹೇಳಿದ್ದರು. ಇದಕ್ಕೆ ಹಿಮಾಚಲ ಪ್ರದೇಶ ಮೊದಲಿಗೆ ಭದ್ರತೆಗೆ ನಿರಾಕರಿಸಿದ್ದರು ನಂತರ ಸೂಕ್ತ ಭದ್ರತೆ ನೀಡುವುದಾಗಿ ಒಪ್ಪಿಗೆ ಸೂಚಿಸಿದೆ. ಆದರೂ ಪಾಕ್ ಕ್ರಿಕೆಟ್ ಕಮಿಟಿ ಪಂದ್ಯವನ್ನು ಬೇರೆಡೆಗೆ ವರ್ಗಾವಣೆ ಮಾಡುಲು ಪಟ್ಟು ಹಿಡಿದಿದೆ.

ಮಂಗಳವಾರ ಮಾರ್ಚ್ 08 ರಂದು ನಡೆದ ಧರ್ಮಶಾಲಾ ಪಂದ್ಯಕ್ಕೆ ಭದ್ರತೆ ನೀಡುವ ಕುರಿತು ಸಭೆಯಲ್ಲಿ ಕೇಂದ್ರ ಸರ್ಕಾರ ವಿಶೇಷ ಭದ್ರತೆ ನೀಡುವುದಾಗಿ ಹೇಳಿದೆ ಎಂದು ಈ ಟೂರ್ನಿಯ ನಿದೇಶಕ ಎಂ.ವಿ ಶ್ರೀಧರ್ ಹೇಳಿದ್ದಾರೆ. ಆದರೂ, ಪಾಕ್ ತನ್ನ ನಿರ್ಧಾರವನ್ನು ಬದಲಾಹಿಸುತ್ತಿಲ್ಲ ಇದರಿಂದ ಪಾಕ್ ಕ್ರಿಕೆಟ್ ಮಂಡಳಿಯ ನಿರ್ಧಾರಕ್ಕೆ ಬಿಸಿಸಿಐ ಅಸಮಾಧಾನಗೊಂಡಿದೆ. [ರಿಲಯನ್ಸ್ ನಿಂದ 6 ಮೈದಾನಗಳಿಗೆ ವೈಫೈ ಸೌಲಭ್ಯ]

ಅಂತರಾಷ್ಟ್ರೀಯ ವೇಳಾಪಟ್ಟಿಯಂತೆ ಪಾಕ್ ತಂಡದ ಆಟಗಾರರು ಮಾರ್ಚ್ 09 ರಂದು ಬೆಳಿಗ್ಗೆ ದೆಹಲಿಗೆ ಬರಬೇಕಿತ್ತು ಆದರೆ ಈ ಭದ್ರತೆಯ ಅಗ್ಗ-ಜಗ್ಗಾಟದಲ್ಲಿ ಪಾಕಿಸ್ತಾನ ಕ್ರಿಕೆಟ್ ಕಮಿಟಿ ವಿಳಂಬ ಮಾಡಿದೆ. ಇದಲ್ಲದೆ ಪಾಕಿಸ್ತಾನ ತಂಡ ಮೊಹಲಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಮಾರ್ಚ್ 22ರಂದು ಹಾಗೂ ಮಾರ್ಚ್ 25ರಂದು ಆಸ್ಟ್ರೇಲಿಯಾ ವಿರುದ್ಧ ಆಡಬೇಕಿದೆ.


(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After BCCI claimed that the much-anticipated World T20 cricket match between India and Pakistan will be held as scheduled in Dharamshala, now Pakistan has reportedly asked the ICC to shift the match venue from the hill state.
Please Wait while comments are loading...