ವೇಗಿ ಶಮಿ ಮನೆ ಮೇಲೆ ದಾಳಿ, ಮೂವರು ಬಂಧನ

Posted By:
Subscribe to Oneindia Kannada

ಕೋಲ್ಕತ್ತಾ, ಜುಲೈ 18:ಟೀಂ ಇಂಡಿಯಾದ ಪ್ರಮುಖ ವೇಗಿ ಮೊಹಮ್ಮದ್ ಶಮಿ ಅವರ ಅಪಾರ್ಟ್ಮೆಂಟ್ ನೊಳಗೆ ನುಗ್ಗಲು ಯತ್ನಿಸಿದ ಮೂವರು ಯುವಕರನ್ನು ಕೋಲ್ಕತಾ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಶಮಿ ಅವರ ಕಾರು ಚಾಲಕನ ಮೇಲಿನ ಕೋಪಕ್ಕೆ ಈ ರೀತಿ ಯುವಕರು ನಡೆದುಕೊಂಡಿದ್ದಾರೆ.

ಶಮಿ ಹಾಗೂ ಅವರ ಪತ್ನಿ ಮನೆಗೆ ಕಾರಿನಲ್ಲಿ ಹಿಂತಿರುಗುವಾಗ ಸಂದಿಗೊಂದಿಯಲ್ಲಿ ಕಾರನ್ನು ವೇಗವಾಗಿ ಚಲಾಯಿಸಿದ ಕಾರು ಚಾಲಕನ ಮೇಲೆ ಈ ಯುವಕರು ಸಿಟ್ಟಿಗೆದ್ದಿದ್ದರು.

ಮೊಹಮ್ಮದ್ ಶಮಿಗೆ ಮುಸ್ಲಿಂ ಎಂದು ಕರೆದ ಶೋಯೆಬ್ ಗೆ ಬೈಗುಳ

India pacer Mohammed Shami's Kolkata residence attacked by angry youths; 3 arrested

ಕಳೆದ ಶನಿವಾರ(ಜುಲೈ 15) ರಾತ್ರಿ ದಕ್ಷಿಣ ಕೋಲ್ಕತ್ತಾದ ಕಟ್ಜುನಗರದಲ್ಲಿರುವ ತಮ್ಮ ಅಪಾರ್ಟ್ಮೆಂಟ್ ಗೆ ಶಮಿ ದಂಪತಿ ಹಿಂತಿರುಗುವಾಗ ಈ ಯುವಕರ ಕೋಪಕ್ಕೆ ತುತ್ತಾಗಿದ್ದಾರೆ. ಪರಿಸ್ಥಿತಿ ಕೈ ಮೀರುತ್ತಿದ್ದಂತೆ, ಕಾರಿನಿಂದ ಕೆಳಗಿಳಿದ ಶಮಿ, ಕಾರು ಚಾಲಕ ಹಾಗೂ ಯುವಕರ ಕೋಪ ಶಮನಗೊಳಿಸಿದ್ದಾರೆ.

'ಅಪ್ಪ ಯಾರು?' ಎಂದಿದ್ದಕ್ಕೆ ಮೊಹಮ್ಮದ್ ಶಮಿ ಕೆರಳಿದ್ದೇಕೆ?

ಆದರೆ, ಶಮಿ ಅವರು ಮನೆ ತಲುಪುತ್ತಿದ್ದಂತೆ ಯುವಕರ ಕಡೆಯವರು ಅಪಾರ್ಟ್ಮೆಂಟ್ ಗೆ ನುಗ್ಗಲು ವಿಫಲ ಯತ್ನ ನಡೆಸಿದ್ದಾರೆ.ಸೆಕ್ಯುರಿಟಿ ಗಾರ್ಡ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಎಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ಬಳಿಕ ಶಮಿ ಅವರ ಪತ್ನಿ, ಜಾಧವ್ ಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಿಸಿಟಿವಿ ದೃಶ್ಯಗಳ ನೆರವಿನಿಂದ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

IPL 2017 : DD Vs KKR: Delhi The Won Toss And Elect To Bat | Oneindia Kannada

ಜುಲೈ 21ರಿಂದ ಆರಂಭವಾಗಲಿರುವ ಶ್ರೀಲಂಕಾ ಪ್ರವಾಸಕ್ಕೆ ತೆರಳಲಿರುವ ಟೀಂ ಇಂಡಿಯಾದ ಭಾಗವಾಗಿರುವ ಶಮಿ ಅವರು ತಂಡವನ್ನು ಸೇರಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India pacer Mohammed Shami's residence was reportedly attacked by local youths here who tried to barge into his apartment.
Please Wait while comments are loading...