ಮಂಡಿ ಶಸ್ತ್ರ ಚಿಕಿತ್ಸೆಗೆ ಒಳಗಾದ ವೇಗಿ ಆಶೀಶ್ ನೆಹ್ರಾ!

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ನವದೆಹಲಿ, ಮೇ 25 : ಟೀಂ ಇಂಡಿಯಾದ ಹಿರಿಯ ಬೌಲರ್ ಅಶೀಶ್ ನೆಹ್ರಾ ಅವರು ಮಂಡಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಇತ್ತೀಚೆಗೆಗಷ್ಟೇ ಸ್ನಾಯುಸೆಳತಕ್ಕೆ ಒಳಗಾಗಿ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದರು. ನೋವು ತೀವ್ರವಾಗಿದ್ದರಿಂದ ಲಂಡನ್ನಿನಲ್ಲಿ ಮೊಣಕಾಲಿನ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಈ ಬಗ್ಗೆ ಭಾರತೀಯ ಕ್ರಿಕೆಟ್ ಬೋರ್ಡ್ (ಬಿಸಿಸಿಐ) ಖಚಿತ ಪಡಿಸಿದೆ. ಲಂಡನ್ನಿನ ಖ್ಯಾತ ಕೀಲು ಮತ್ತು ಎಲಬು ತಜ್ಞ ಡಾ.ಆಂಡ್ರೆ ವಿಲಿಯಮ್ಸ್ ಅವರು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. 37 ವರ್ಷದ ನೆಹ್ರಾ ಮೇ 15 ರಂದು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದರು.

India pacer Ashish Nehra to undergo right knee surgery

ನೆಹ್ರಾ ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕೊನೆಗಳಿಗೆಯಲ್ಲಿ ನೆಹ್ರಾ ಅನುಪಸ್ಥಿತಿಯಿಂದ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಹಿನ್ನಡೆಯಾಗಿದೆ.

ಐಪಿಎಲ್ 9 ನಲ್ಲಿ ಆಡಿರುವ 8 ಪಂದ್ಯಗಳಲ್ಲಿ ಉತ್ತಮ ವಿಕೆಟ್ ಟೇಕರ್ ಆಗಿದ್ದರು. ಟೂರ್ನಿಯಲ್ಲಿ ಬೌಲಿಂಗ್ ವಿಭಾಗದಿಂದ ಬಲಿಷ್ಠ ತಂಡಗಳನ್ನು ಮಣ್ಣುಮುಕ್ಕಿಸಿ ಪ್ಲೇ ಆಫ್ ಗೆ ಎಂಟ್ರಕೊಟ್ಟಿರುವ ಹೈದರಾಬಾದ್ ತಂಡಕ್ಕೆ ನೆಹ್ರಾ ಅವರ ಅನುಪಸ್ಥತಿಯಿಂದ ಬೌಲಿಂಗ್ ವಿಭಾಗದಲ್ಲಿ ಹಿಡಿತ ಕಳೆದುಕೊಳ್ಳಲಿದೆ.

ಮೇ 25 ರಂದು ಫಿರೋಷಾ ಕೋಟ್ಲಾ ಸ್ಟೇಡಿಯಂನಲ್ಲಿ ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's veteran pacer Ashish Nehra was on Tuesday advised to undergo surgery on his right knee after he sustained a high-grade tendon injury during the ninth edition of the Indian Premier League (IPL).
Please Wait while comments are loading...